ಮಂಡ್ಯ: ಜಿಲ್ಲೆಯ ಬೇಬಿ ಬೆಟ್ಟದಲ್ಲಿ (Baby Hills) ಟ್ರಯಲ್ ಬ್ಲಾಸ್ಟ್ (Trial Blast) ನಡೆಸಿದರೆ ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್‌ಎಸ್ (KRS) ಅಣೆಕಟ್ಟೆಗೆ ಅಪಾಯ ಎದುರಾಗುತ್ತೆ ಎಂದು ಬೇಬಿ ಬೆಟ್ಟದಲ್ಲಿನ ಟ್ರಯಲ್ ಬ್ಲಾಸ್ಟ್‌ಗೆ ರೈತ ಸಂಘಟನೆಗಳು ವಿರೋಧಿಸಿದ ಬೆನ್ನಲ್ಲೇ ಇದೀಗ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.
ಇಂದು ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ ವಿಚಾರ ಸಂಬಂಧ ಸಚಿವ ಚಲುವರಾಯಸ್ವಾಮಿ (Chaluvarayaswamy) ಮಂಡ್ಯ (Mandya) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಜನಪ್ರತಿನಿಧಿಗಳು, ರೈತ ಸಂಘಟನೆಯ ಮುಖಂಡರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು. ಆರಂಭದಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ರೈತ ಸಂಘಟನೆಗಳ ಮುಖಂಡರು ಈ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್ ಮಂಡನೆ
ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ಮತ್ತೆ ಮಾಡಲು ಅವಕಾಶ ನೀಡಿದರೆ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ಎದುರಾಗೋದು ನಿಶ್ಚಿತವಾಗಿದೆ. ಕೆಆರ್‌ಎಸ್ ಡ್ಯಾಂ ಅನ್ನು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಮೈಸೂರು ಮಹಾರಾಜರು ನಮಗೆ ನೀಡಿರುವ ಅಮೂಲ್ಯ ಕೊಡುಗೆ ಕೆಆರ್‌ಎಸ್ ಡ್ಯಾಂ ಆಗಿದೆ. ಇದೀಗ ಇಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿ ಮುಂದೆ ಗಣಿಗಾರಿಕೆಗೆ ಅನುಮತಿ ನೀಡಿದ್ರೆ ಡ್ಯಾಂಗೆ ಹಾನಿಯಾಗುತ್ತದೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡದೆ ಸುಗ್ರೀವಾಜ್ಞೆ ಜಾರಿಗೆ ತರಬೇಕೆಂದು ರೈತ ಸಂಘಟನೆಗಳ ಮುಖಂಡರು ಆಗ್ರಹ ಮಾಡಿದರು. ಇದನ್ನೂ ಓದಿ: ಕೀರ್ತಿ ಚಕ್ರ; ಪತಿಯ ಮರಣೋತ್ತರ ಪ್ರಶಸ್ತಿ ಸ್ವೀಕರಿಸುವಾಗ ಕ್ಯಾ.ಅನ್ಶುಮನ್ ಸಿಂಗ್ ಪತ್ನಿ ಭಾವುಕ
ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ಸಂಬಂಧ ಜುಲೈ 15ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ. ಹೀಗಾಗಿ 15ರ ವರೆಗೆ ಟ್ರಯಲ್ ಬ್ಲಾಸ್ಟ್ ವಿಚಾರವನ್ನು ಮುಂದೂಡಲಾಗಿದೆ. ನಾವು ಸಹ ಕೋರ್ಟ್‌ಗೆ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ. ಟ್ರಯಲ್ ಬ್ಲಾಸ್ಟ್ ಸಂಬಂಧ ತಜ್ಞರ ವರದಿ, ಇಲ್ಲಿನ ರೈತರ ಅಭಿಪ್ರಾಯಗಳನ್ನು ನ್ಯಾಯಲಯಕ್ಕೆ ತಿಳಿಸಿ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ನಮಗೂ ಸಹ ಗಣಿಗಾರಿಕೆ ಮೇಲೆ ಆಸಕ್ತಿ ಇಲ್ಲ. ಕೆಆರ್‌ಎಸ್ ಡ್ಯಾಂ ಉಳಿಸಿಕೊಳ್ಳುವುದೆ ನಮ್ಮ ನಿಲುವಾಗಿದೆ. ಜು.15ರವರೆಗೆ ಯಾವುದೇ ಟ್ರಯಲ್ ಬ್ಲಾಸ್ಟ್ ಮಾಡೋದಿಲ್ಲ ಎಂದು ಸಭೆ ಬಳಿಕ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಆರೋಗ್ಯ ಸ್ಥಿರ – ಆಸ್ಪತ್ರೆಯಿಂದ ಡಿಸ್ಚಾರ್ಜ್