ತೆಲುಗಿನ ಬಹುತೇಕ ಖ್ಯಾತ ನಟರು ತಾವು ದುಡಿದು ಬಂದ ಹಣವನ್ನು ಸಿನಿಮಾ ರಂಗದಲ್ಲೇ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ. ಕೇವಲ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದವರು, ಇದೀಗ ಗಡಿ ದಾಟಿ ಕರ್ನಾಟಕಕ್ಕೂ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಕನ್ನಡ ಚಿತ್ರೋದ್ಯಮದಲ್ಲಿ ಹಣ ಹೂಡಿದ್ದಾರೆ.
ಬೆಂಗಳೂರಿನ ಸಿನಿಮಾದ ಏರಿಯಾ ಎಂದೇ ಖ್ಯಾತವಾಗಿರುವ ಗಾಂಧಿನಗರದ ಪ್ರಮುಖ ರಸ್ತೆಯಲ್ಲಿ ಮಾಲ್ ವೊಂದನ್ನು ನಿರ್ಮಾಣ ಮಾಡಿದ್ದು, ಅಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲಿ ಮಹೇಶ್ ಬಾಬು ಹಣ ಹೂಡಿದ್ದಾರೆ. ಈಗಾಗಲೇ ಮಹೇಶ್ ಬಾಬು ಹೈದರಾಬಾದ್ ನಲ್ಲೂ ಈ ಬ್ಯುಸಿನೆಸ್ ಆರಂಭಿಸಿದ್ದಾರೆ.
ನಿನ್ನೆಯಷ್ಟೇ ಥಿಯೇಟರ್ ಪೂಜೆಯನ್ನು ಮಾಡಿದ್ದು, ಕನ್ನಡದ ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೇ ಈ ಕಟ್ಟಡ ತಲೆಯೆತ್ತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಮಲ್ಟಿಪ್ಲೆಕ್ಸ್ ತನ್ನ ಕಾರ್ಯಾರಂಭ ಮಾಡಲಿದೆ.