80ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ರೇಪ್ ಮಾಡ್ದ ಟೆಕ್ಕಿ..!

Public TV
1 Min Read
BNG RAPE

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 80 ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ಬಳಿಕ ಅತ್ಯಾಚಾರವೆಸಗಿದ ಸಾಪ್ಟ್ ವೇರ್ ಎಂಜಿನಿಯರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಟೆಕ್ಕಿಯನ್ನು ಅಜಯ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಬೆಂಗಳೂರಿನ ವಿಜಯನಗರದ ನಿವಾಸಿ.

TECHIE

ಬಂಧಿತ ಟೆಕ್ಕಿ ಅಜಯ್ ಗೆ ಒಂದು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ ಯುವತಿಯೊಂದಿಗೆ ಪರಿಚಯವಾಗಿತ್ತು. ಪರಿಚಯದ ನಂತರ ಯುವತಿಯನ್ನು ರೆಸ್ಟೋರೆಂಟ್‍ನಲ್ಲಿ ಭೇಟಿ ಮಾಡಿದ ಟೆಕ್ಕಿ ತನ್ನ ಪ್ರೀತಿ ನಿವೇದನೆ ಮಾಡಿದ್ದನು. ಬಳಿಕ ಮದುವೆಯಾಗುವುದಾಗಿ ನಂಬಿಸಿ 10ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ತನ್ನ ಕಾಮ ತೃಷೆಯನ್ನು ತೀರಿಸಿಕೊಂಡ ಬಳಿಕ ಟೆಕ್ಕಿ, ತನ್ನ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿ ಯುವತಿಯನ್ನು ನಿರಾಕರಿಸಿದ್ದಾನೆ. ಇದರಿಂದ ನೊಂದ ಯುವತಿ ಟೆಕ್ಕಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಪ್ರಿಯಕರನ ವಿರುದ್ಧ ಯುವತಿ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಜಯನಗರ ಪೊಲೀಸರು ಆರೋಪಿ ಅಜಯ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

rape 1 2

money 2000 rs

facebook 5

550901 rape 110616

rape 1 1

rape 13

rape 1 rape rape1

Share This Article
Leave a Comment

Leave a Reply

Your email address will not be published. Required fields are marked *