ಕವರ್‌ಗೆ ಹೀಲಿಯಂ ಗ್ಯಾಸ್ ತುಂಬಿಸಿಕೊಂಡು ಟೆಕ್ಕಿ ಆತ್ಮಹತ್ಯೆ

Public TV
1 Min Read
Techie Sucide in Anekal

ಆನೇಕಲ್: ಪ್ಲಾಸ್ಟಿಕ್ ಕವರ್‌ಗೆ ಹೀಲಿಯಂ ಕವರ್ (Helium cover) ತುಂಬಿಸಿಕೊಂಡು ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electrnic City) ನಡೆದಿದೆ.

ನಗರದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ (Neeladri Nagar) ಹೋಟೆಲೊಂದರ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಟೆಕ್ಕಿ ಯಾಜ್ಙಿಕ್ (22) ಎಂದು ಗುರುತಿಸಲಾಗಿದೆ. ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದ. ಮೂಲತಃ ಹಾಸನ (Hassan) ಜಿಲ್ಲೆಯ ಸಕಲೇಶಪುರದವನು (Sakaleshapur) ಎಂದು ತಿಳಿದುಬಂದಿದೆ.ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ: ಕಾಡಿನಿಂದ ನಾಳೆ ಗಜಪಯಣ ಆರಂಭ

ಕಳೆದ ಕೆಲ ತಿಂಗಳಿನಿಂದ ವರ್ಕ್ ಫ್ರಂ ಹೋಂ  ಕೆಲಸ ಮಾಡುತ್ತಿದ್ದ. ಎಂಟೆಕ್ ಎಕ್ಸ್ಂ ಬರೆಯುವ ಸಲುವಾಗಿ ಬೆಂಗಳೂರಿಗೆ (Bangaluru) ಬಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಹೋಟೆಲೊಂದರಲ್ಲಿ ರೂಂ ಮಾಡಿಕೊಂಡಿದ್ದ. ನಿನ್ನೆ (ಆ.19ರಂದು) ದೊಡ್ಡ ಬ್ಯಾಗ್ ತೆಗೆದುಕೊಂಡು ಪೀಣ್ಯಕ್ಕೆ (Peenya) ತೆರಳಿದ್ದ. ಹೀಲಿಯಂ ಗ್ಯಾಸ್ (Helium Gas) ಪರ್ಚೇಸ್ ಮಾಡಿ ಲಾಡ್ಜ್ಗೆ ಮರಳಿದ್ದ.

ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಲಿಯಂ ಗ್ಯಾಸ್ ಬಳಸಿದರೆ ಅದು ದೇಹದೊಳಗೆ ಹೊಕ್ಕು ಕ್ಷಣಾರ್ಧದಲ್ಲಿ ಉಸಿರು ಕಟ್ಟುತ್ತದೆ. ಇದರಿಂದ ದೇಹದ ಆಕ್ಸಿಜನ್ ವರ್ಕ್ ಮಾಡದೆ ಕ್ಷಣಾರ್ಧದಲ್ಲಿ ಸಾಯುತ್ತಾರೆ. ಜೊತೆಗೆ ಸಾಯುವಾಗ ನೋವು ಕೂಡ ಆಗುವುದಿಲ್ಲ ಎಂದು ಕವರ್ ಮೂಲಕ ಹೀಲಿಯಂ ಗ್ಯಾಸ್ ಇನ್ ಹೇಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇದನ್ನೂ ಓದಿ: ದಕ್ಷಿಣ ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ

ಬಳಿಕ ಯಾಜ್ಙಿಕ್ ಮೃತದೇಹವನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಯಿತು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This Article