F-35 ಫೈಟರ್‌ ಜೆಟ್‌ ರಿಪೇರಿಗೆ ಬ್ರಿಟನ್‌ನಿಂದ ಇಂದು 40 ತಂತ್ರಜ್ಞರ ತಂಡ

Public TV
1 Min Read
f 35 landed in thiruvananthapuram

ತಿರುವನಂತಪುರ: ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಇಂದು (ಶನಿವಾರ) ಬ್ರಿಟನ್‌ನಿಂದ 40 ತಂತ್ರಜ್ಞರ ತಂಡ ಆಗಮಿಸಲಿದೆ.

ಈ ತಂತ್ರಜ್ಞರ ತಂಡ ಎಫ್-35 ಯುದ್ಧ ವಿಮಾನದ ರಿಪೇರಿಯ ಕೊನೆಯ ಯತ್ನ ನಡೆಸಲಿದ್ದಾರೆ. ಈ ಯತ್ನ ವಿಫಲವಾದರೆ, ವಿಮಾನದ ಬಿಡಿ ಭಾಗಗಳನ್ನು ಬೇರ್ಪಡಿಸಿ ಏರ್‌ಲಿಫ್ಟ್ ಮಾಡಲಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನ F-35 ಫೈಟರ್‌ ಜೆಟ್‌ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?

ಜೂ.14ರಂದು ದಿಢೀರ್‌ ಇಂಧನ ಕೊರತೆಯಿಂದಾಗಿ ಬ್ರಿಟನ್ನಿನ ಅತ್ಯಾಧುನಿಕ ಎಫ್‌-35 ಯುದ್ಧ ವಿಮಾನ (F35 Fighter Jet) ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Thiruvananthapuram International Airport) ತುರ್ತು ಭೂಸ್ಪರ್ಶ ಮಾಡಿತ್ತು. ಹಿಂದೂಮಹಾಸಾಗರದಲ್ಲಿ ಭಾರತೀಯ ವಾಯುಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿ ಬ್ರಿಟನ್‌ಗೆ ತೆರಳುವಾಗ ಇಂಧನ ಖಾಲಿಯಾಗಿದೆ ಎಂದು ಲ್ಯಾಂಡಿಂಗ್‌ಗೆ ಅನುಮತಿ ಕೇಳಿ ಇಳಿಸಲಾಗಿತ್ತು. ಇದಾದ ಬಳಿಕ ತಾಂತ್ರಿಕ ದೋಷ ಕಂಡು ಬಂದಿತ್ತು. ಇದನ್ನೂ ಓದಿ: ವಿಟಿಯು ಇಂಜಿನಿಯರಿಂಗ್‌ ಪರೀಕ್ಷೆ – ಸುಚಿತಾ ಮಡಿವಾಳಗೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ

Share This Article