ಮಂಡ್ಯ: ಒಕ್ಕಲಿಗ ನಾಯಕತ್ವ ಸಾಯಿಸಲು ಒಂದು ತಂಡ ಪ್ರಯತ್ನಿಸುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ತಂಡಕ್ಕೆ 7 ಜನ್ಮ ಎತ್ತಿ ಬಂದರೂ ಇದು ಸಾಧ್ಯವಿಲ್ಲ ಎಂದು ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಶಾಸಕ ಗಣಿಗ ರವಿ (Ravikumar Ganiga) ಹರಿಹಾಯ್ದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಅಧಿಕಾರ ಕಳೆದುಕೊಂಡ ರಮೇಶ್ ಜಾರಕಿಹೊಳಿ ಹುಚ್ಚನ ರೀತಿ ಆಡುತ್ತಿದ್ದಾನೆ. ನೂರು ಜನ ರಮೇಶ್ ಜಾರಕಿಹೊಳಿ ಬಂದರೂ ಡಿಕೆಶಿ ಟಚ್ ಮಾಡಲು ಆಗಲ್ಲ. ಚುನಾವಣೆ ಮುಂಚೆ ಡಿಕೆಶಿ ಕಾಲು ಹಿಡಿಯಲು ರಮೇಶ್ ಜಾರಕಿಹೊಳಿ ಬಂದಿದ್ದ ಎಂದು ಟೀಕಿಸಿದರು. ಇದನ್ನೂ ಓದಿ: 50 ಅಲ್ಲ 100 ಕೋಟಿ ಕೊಟ್ರೂ ಕಾಂಗ್ರೆಸ್ ಶಾಸಕರು ಬಿಜೆಪಿ ಗಾಳಕ್ಕೆ ಬೀಳಲ್ಲ: ಗಣಿಗ ರವಿ
Advertisement
Advertisement
ಬಿಜೆಪಿಯವರು ಆಫರ್ ಮಾಡಿರುವ ದಾಖಲೆಗಳು ನನ್ನ ಬಳಿ ಇದೆ. ನೂರು ಕೋಟಿ ಕೊಟ್ಟರೂ ನಮ್ಮ ಶಾಸಕರು ಹೋಗಲ್ಲ. ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಎನ್ನುವುದಾದರೆ ‘ಕೈ’ ಶಾಸಕರಿಗೆ ಆಫರ್ ಮಾಡಿದ್ದು ಯಾಕೆ? ಬೆಳಗಾವಿ ಏರ್ಪೋರ್ಟ್‌ನಲ್ಲಿ ಆ ಭಾಗದ ಶಾಸಕರಿಗೆ ಏನು ಆಫರ್ ಮಾಡಿದ್ರಿ? ನೀವು ಆಫರ್ ಮಾಡಿರುವ ದಾಖಲೆಗಳು ನನ್ನ ಬಳಿ ಇದೆ. ಸಮಯ ಬಂದಾಗ ಎಲ್ಲವನ್ನು ಬಹಿರಂಗ ಮಾಡ್ತೀವಿ ಎಂದು ತಿಳಿಸಿದರು.
Advertisement
ರಮೇಶ್ ಜಾರಕಿಹೊಳಿ ಮಾತನಾಡಿರುವ ಅಷ್ಟೂ ಶಾಸಕರು ಮಾಧ್ಯಮದ ಮುಂದೆ ಬರುತ್ತಾರೆ. ಅವರಿಗೆ ಬಂದ ಆಫರ್ ಬಗ್ಗೆ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡ್ತಾರೆ. ನೂರು ಕೋಟಿ ಕೊಟ್ಟರೂ ನಮ್ಮ ಶಾಸಕರು ಹೋಗಲ್ಲ. ಬಿಜೆಪಿಯವರು ನಿರುದ್ಯೋಗಿಗಳು, ಸರ್ಕಾರದ ಬೀಳಿಸುವ ಕನಸು ಕಾಣ್ತಿದ್ದಾರೆ. ಇಲ್ಲಸಲ್ಲದ್ದನ್ನು ಹೇಳಿ ನಮ್ಮ ಶಾಸಕರ ತಲೆ ಕೆಡಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ನಾನು ಯಾವತ್ತಿದ್ದರೂ ಸಿದ್ದರಾಮಯ್ಯ ಪರ, ಸಚಿವರ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟಿದ್ದು: ಜಮೀರ್ ಅಹ್ಮದ್
Advertisement
ಡಿಕೆಶಿ ಸಿಡಿ ಬ್ಲಾಕ್‌ಮೇಲ್ ಮಾಡ್ತಾರೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ಬೆಡ್ ಮೇಲೆ ಮಲಗಲು ನಾವು ಹೋಗಿದ್ವಾ? ರಮೇಶ್ ಜಾರಕಿಹೊಳಿ ವೀಡಿಯೋವನ್ನ ರಾಜ್ಯದ ಜನರೇ ನೋಡಿದ್ದಾರೆ. ಈ ರೀತಿ ಮಾತನಾಡಿಯೇ ಅವರು ಅಧಿಕಾರ ಕಳೆದುಕೊಂಡಿದ್ದು. ಸರ್ಕಾರ ಪತನ, ಡಿಕೆಶಿ ಜೈಲಿಗೆ ಕಳುಹಿಸುವ ತಿರುಕನ ಕನಸನ್ನ ಅವರು ಬಿಡಬೇಕು. ಬಿಜೆಪಿ ಸರ್ಕಾರ ಇದ್ದಾಗ ಯಾರು ನೆಮ್ಮದಿ ಇಂದ ಇರಲಿಲ್ಲ. ಬೆಳಿಗ್ಗೆ ಎದ್ದರೆ ಕೋಮುಗಲಭೆ ನಡೆಯುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ರಾಜ್ಯವನ್ನ ರಾಮರಾಜ್ಯ ಮಾಡಿದೆ ಎಂದರು.
ಮಹಾರಾಷ್ಟ್ರ ರೀತಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಪತನ ಆಗಬೇಕು ಅಷ್ಟೇ, ನಮ್ಮ ಸರ್ಕಾರವಲ್ಲ. ತಾಕತ್ತು, ದಮ್ಮು ಇದ್ದರೆ ಕೈ ಶಾಸಕರಿಗೆ ಆಫರ್ ಮಾಡಿದರ ಬಗ್ಗೆ ಒಪ್ಪಿಕೊಳ್ಳಲಿ. ಕೇಂದ್ರ ಸರ್ಕಾರದ ಏಜೆನ್ಸಿಗಳು ರಮೇಶ್ ಜಾರಕಿಹೊಳಿ ಕೈಯಲ್ಲಿದ್ಯಾ? ಡಿಕೆಶಿ ಜೈಲಿಗೆ ಹೋಗ್ತಾರೆ ಎನ್ನಲು ಅವರ‍್ಯಾರು? ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ತಿಳಿಸಿದರು.
Web Stories