ಬೆಂಗಳೂರು: ಶಿಕ್ಷಕನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುವ ಆರೋಪಿ ಮಂಜೇಶ್ ಅದೇ ಶಾಲೆಯಲ್ಲಿ ಆರನೇ ತರಗತಿ ಓದುವ ವಿದ್ಯಾರ್ಥಿನಿಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಗೆ ಫೋನ್ ಮಾಡಿ ವಾಟ್ಸಪ್ ಕಾಲ್ ಮಾಡುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ಮನೆಬಿಟ್ಟು ಬಂದು ತನ್ನ ಜೊತೆ ಮಲಗು.. ಹೀಗೆ ಅಸಭ್ಯ ರೀತಿಯಲ್ಲಿ ಮಾತನಾಡಿದ್ದಾನೆ.
ವಿದ್ಯಾರ್ಥಿನಿ ತನ್ನ ಅಣ್ಣನ ಮೊಬೈಲ್‍ನಲ್ಲಿ ಆತನ ಜೊತೆ ಮಾತನಾಡಿದ್ದು, ಹೀಗಾಗಿ ಮನೆಯವರಿಗೆ ತಿಳಿದಿದೆ. ನಂತರ ಮನೆಯವರು ಮೊಬೈಲ್ ನ ಆಡಿಯೋ ರೆಕಾರ್ಡ್ ಕೇಳಿಸಿಕೊಂಡಿದ್ದಾರೆ. ಆಗ ಆರೋಪಿ ಮಂಜೇಶ್‍ನ ಕೃತ್ಯ ಗೊತ್ತಾಗಿದೆ. ತಕ್ಷಣ ಪೋಷಕರೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಶಿಕ್ಷಕನೇ ಕಾಮುಕನಾಗಿದ್ದಕ್ಕೆ ವಿದ್ಯಾರ್ಥಿನಿಯ ಪೋಷಕರು ಆತನಿಗೆ ಸರಿಯಾಗಿಯೇ ಪಾಠ ಕಲಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.