ಕೊಪ್ಪಳ: ಆತ ಚಿಕ್ಕ ವಯಸ್ಸಲ್ಲೆ ತನ್ನ ತಾಯಿಗೆ ವೈದ್ಯರು ಆಪರೇಷನ್ ಮಾಡಿ ಬದುಕಿಸಿದ್ದನ್ನ ಕಣ್ಣಾರೆ ಕಂಡಿದ್ದ. ತನ್ನ ತಾಯಿಗೆ ಆದ ನೋವು ಇನ್ಯಾರಿಗೂ ಆಗದಿರಲಿ ಅಂತ ಡಾಕ್ಟರ್ ಆಗೋಕೆ ಬೆಟ್ಟದಷ್ಟು ಕನಸು ಹೊತ್ತಿದ್ದ, ಇಷ್ಟೆಲ್ಲ ಆಸೆ ಹೊತ್ತವ ಸುಮ್ಮನೆ ಕೂರದೆ ಕಷ್ಟಪಟ್ಟು ಸೀಟ್ ಕೂಡ ಪಡೆದಿದ್ದಾನೆ. ಆದರೆ ಕಿತ್ತು ತಿನ್ನುವ ಬಡತನದಿಂದ ಆತನ ಬೆಟ್ಟದಷ್ಟು ಕನಸು ಕಮರಿ ಹೋಗದಿರಲಿ ಅಂತ ಪರದಾಡ್ತಿದ್ದಾನೆ.
Advertisement
ಹೌದು. ಕೊಪ್ಪಳ (Koppala) ಜಿಲ್ಲೆ ಜಿನ್ನಾಪುರ ಎನ್ನುವ ಪುಟ್ಟ ಕುಗ್ರಾಮದ ನಿವಾಸಿಯ ಹೆಸರು ಪ್ರಶಾಂತ ಚಂಡೂರು. ಕೊಪ್ಪಳ ತಾಲೂಕಿನ ಜಿನ್ನಾಪುರ ಗ್ರಾಮದ ಯುವಕ. ಮನೆಯಲ್ಲಿ ಕಡು ಬಡತನ ಇದ್ದರೂ ಹೇಗೋ ತಾಯಿಯ ಕೂಲಿ ಹಣದಲ್ಲೆ ವಿದ್ಯಾಭ್ಯಾಸ ಮಾಡಿ, ಸದ್ಯ ನೀಟ್ ಪರೀಕ್ಷೆ (NEET Exam) ಯಲ್ಲಿ 68039ನೇ ರ‍್ಯಾಂಕ್ ಪಡೆದು ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ MBBS ಸೀಟ್ ಗಿಟ್ಟಿಸಿಕೊಂಡಿದ್ದಾನೆ. ಆದರೆ ಸದ್ಯ ಆತನ ಬಳಿ ಸರ್ಕಾರಿ ಶುಲ್ಕ ಪಾವತಿಗೂ ಕೂಡ ಬಿಡಿಗಾಸಿಲ್ಲ. ಬಡತನ ಎಂಬ ಭೂತ ಈತನ ಕನಸಿಗೆ ಕೊಳ್ಳಿ ಇಡಲು ಮುಂದಾಗಿದೆ.
Advertisement
Advertisement
ಶಾಲಾ ದಿನಗಳಿಂದಲೂ ಈ ಪ್ರಶಾಂತ ಸಾಕಷ್ಟು ಪ್ರತಿಭಾವಂತ, ಕಷ್ಟ ಪಟ್ಟು ರ‍್ಯಾಂಕ್ ಪಡೆದು ಸೀಟ್ ಗಿಟ್ಟಿಸಿಕೊಂಡಿದ್ದಾನೆ ಆದ್ರೆ ಆತನ ಬಳಿ ಹಣ ಇಲ್ಲದೆ ಪರದಾಡುತ್ತಿದ್ದಾನೆ. ಯಾರಾದರೂ ದಾನಿಗಳು ಬಂದು ಸಹಾಯ ಮಾಡಿದ್ರೆ ಆತನಿಗೆ ಸಹಾಯ ಆಗತ್ತೆ ಅಂತ ಆತನ ಶಿಕ್ಷಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಠ ಮುಂದುವರಿಸಿದ ಓಲಾ, ಉಬರ್ – ಎಷ್ಟು ಕಮಿಷನ್‌ಗೆ ಬೇಡಿಕೆ?
Advertisement
ಸೀಟ್ ಸಿಗದೆ ಪರದಾಡುವ ಜನರ ಮದ್ಯೆ ಪ್ರತಿಭೆಯಿಂದ ಸೀಟ್ ಪಡೆದು ಹಣ ಕಟ್ಟಲಾಗದೆ ಒದ್ದಾಡುತ್ತಿರುವುದು ನಿಜಕ್ಕೂ ಶೋಚನೀಯ. ಈ ಯುವಕನಿಗೆ ಸದ್ಯ ಸಹಾಯ ಸಿಗಲಿ, ಮುಂದೊಂದು ದಿನ ಈ ಯುವಕ ಸಮಾಜದಲ್ಲಿ ಉತ್ತಮ ವೈದ್ಯನಾಗಿ ಸೇವೆ ಸಲ್ಲಿಸಲಿ ಎನ್ನುವುದೆ ಎಲ್ಲರ ಆಶಯವಾಗಿದೆ.