Connect with us

Cinema

ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಸಂತೋಷದ ಸುದ್ದಿ- ಕೆಜಿಎಫ್ ಸಿನ್ಮಾದಿಂದ ಬಂತು ಸ್ವೀಟ್ ನ್ಯೂಸ್

Published

on

ಬೆಂಗಳೂರು: `ಕೆಜಿಎಫ್’ ರಾಕಿಂಗ್ ಸ್ಟಾರ್ ಯಶ್ ನಟನೆಯ ಅದ್ದೂರಿ ಸಿನಿಮಾ. ಈ ಚಿತ್ರ ನಾಲ್ಕು ಭಾಷೆಯಲ್ಲಿ ಮನೋರಂಜನೆಯ ಹಂಗಾಮ ಮಾಡಲಿದೆ. ಯಶ್ ಅವರ ಹೊಸ ಪೋಸ್ಟರ್ ಗಳಿಂದ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ.

ಕೆಜಿಎಫ್ ಸಿನಿಮಾ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಪರಿಕಲ್ಪನೆಯ ಸಿನಿಮಾ. ಸದ್ದಿಲ್ಲದೆ ಸೆಟ್ಟೇರಿ ಸಖತ್ ಸುದ್ದಿ ಮಾಡಿರುವ ಈ ಸಿನಿಮಾ ಇದೇ ವರ್ಷ ತೆರೆಕಾಣುತ್ತೆ ಎಂದು ರಾಕಿಂಗ್ ಸ್ಟಾರ್ಸ್ ಫ್ಯಾನ್ಸ್ ಗಳು ನಿರೀಕ್ಷಿಸಿದ್ದರು. ಆದರೆ ಈ ವರ್ಷ `ಕೆಜಿಎಫ್’ ತೆರೆ ಕಾಣೋದಿಲ್ಲ ಎಂದು ಗೊತ್ತಾದಾಗ ಸಖತ್ ಬೇಸರವಾಗಿದ್ದರು. ಆದರೆ ರಾಕಿಂಗ್ ಫ್ಯಾನ್ಸ್ ಗೆ ಕೆಜಿಎಫ್ ಬಗ್ಗೆ ಒಂದು ಇಂಟ್ರಸ್ಟಿಂಗ್ ಮ್ಯಾಟರ್ ಬಂದಿದೆ.

ಹೌದು. ಹೊಂಬಾಳೆ ಫಿಲ್ಮ್ಂ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ `ಕೆಜಿಎಫ್’ ಚಿತ್ರದ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ಯಾಮೆರಾಗೆ ಪೂಜೆ ಮಾಡಿ, ಕುಂಬಳಕಾಯಿ ಒಡೆಯುವ ಕಾಲ ಸನಿಹವಾಗಲಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಮಾಹಿತಿ ಬಂದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಶುರುವಾಗಲಿದೆ.

ಕೆಜಿಎಫ್ ಸಿನಿಮಾದಿಂದ ಬಂದಿರುವ ಹೊಸ ಪೋಸ್ಟರ್ ಗಳು ಹೊಸ ಕಥೆಯನ್ನು ಹೇಳುತ್ತಿವೆ. ಮೊದಲು ರಿವೀಲ್ ಆದ ರಾಕಿಂಗ್ ಸ್ಟಾರ್ ಯಶ್ ಕೋಲಾರ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ರೀತಿ ಕಾಣಿಸಿಕೊಂಡಿದ್ದರು. ಆದರೆ ಈಗ ಯಶ್ ಲುಕ್ ಬದಲಾಗಿದೆ. ಈ ಫೋಟೋ ನೋಡಿದರೆ ಅಭಿಮಾನಿಗಳ ನಿರೀಕ್ಷೆಯ ಕೌತುಕ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ವೈಟ್ ಆಂಡ್ ವೈಟ್ ಡ್ರೆಸ್ ಹಾಕಿಕೊಂಡು ಒಳ್ಳೆ ಶಿಪ್ ಕ್ಯಾಪ್ಟನ್ ರೀತಿ ಕಾಣಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಯಶ್ ನಟನೆಯ ಕೆಜಿಎಫ್ ಹೊಸ ಹೊಸ ವಿಚಾರವಾಗಿ ಸುದ್ದಿ ಮಾಡುತ್ತಿದ್ದು, ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡುತ್ತಿದೆ. ಯಾವುದಪ್ಪ ಕೆಜಿಎಫ್ ಇದು? ಯಾವಾಗ ಬರುತ್ತಪ್ಪ ಈ ಸಿನಿಮಾ? ಎಂದು ಆಕಾಶ ನೋಡುವಂತೆ ಮಾಡುತ್ತಿದೆ.

https://www.youtube.com/watch?v=a2I0k579eMk

 

 

 

Click to comment

Leave a Reply

Your email address will not be published. Required fields are marked *