ಚಿಕ್ಕಬಳ್ಳಾಪುರ: ನರ್ಸ್ ಒಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ನಗರದ ತಿಮ್ಮಕ್ಕ ಬಡಾವಣೆಯಲ್ಲಿ ನಡೆದಿದೆ.
ಅರುಣ(26) ಮೃತ ನರ್ಸ್ ಆಗಿದ್ದು, ಈಕೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ಗುಂತಪನಹಳ್ಳಿ ಗ್ರಾಮದ ನಿವಾಸಿಯಾಗಿರುವ ಅರುಣ, ಕೌಟುಂಬಿಕ ಕಲಹದಿಂದ ಗಂಡನನ್ನ ತೊರೆದು ಒಂಟಿಯಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅರುಣ ಮೃತದೇಹ ಪತ್ತೆಯಾಗಿದೆ.
ಕಳೆದ ಒಂದೂವರೆ ವರ್ಷದಿಂದ ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ನೌಕರ ಶಿವಮೂರ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪವೂ ಈಕೆಯ ವಿರುದ್ಧ ಕೇಳಿಬಂದಿತ್ತು. ತಡರಾತ್ರಿ ಶಿವಮೂರ್ತಿ ಮನೆ ಬಳಿ ತೆರಳಿದಾಗ ಬಾಗಿಲು ತೆಗೆದಿಲ್ಲವಂತೆ. ಕಿಟಿಕಿ ಮೂಲಕವೇ ಅರುಣ ವಾಗ್ವಾದ ನಡೆಸಿದ್ದರಂತೆ. ಇದನ್ನೂ ಓದಿ: ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಬಳಿಕ ನಾನು ಗುಂತಪನಹಳ್ಳಿಗೆ ಹೋಗಿ ಅವರ ಅಕ್ಕನನ್ನ ಕರೆದುಕೊಂಡು ಬಂದೆ ಆಷ್ಟರಲ್ಲೇ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಪೊಲೀಸರ ಬಳಿ ಶಿವಮೂರ್ತಿ ಹೇಳಿದ್ದಾನೆ ಅಂತ ತಿಳಿದುಬಂದಿದೆ. ಸದ್ಯ ಮೃತಳ ಪೋಷಕರಿಂದ ಶಿವಮೂರ್ತಿ ವಿರುದ್ಧ ಕೊಲೆ ಶಂಕೆ ಆರೋಪ ವ್ಯಕ್ತಪಡಿಸಿದ್ದು. ಚಿಕ್ಕಬಳ್ಳಾಪುರ ನಗರ ಪೊಲೀಸರು ಶಿವಮೂರ್ತಿಯನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.