ಹಿಮಾಲಯದಲ್ಲಿ ಸಾಮಾನ್ಯ ಭಕ್ತನಾದ ಸೂಪರ್ ಸ್ಟಾರ್

Public TV
3 Min Read
rajinikanth in himalaya 3

ಹುಕೋಟಿ ವೆಚ್ಚದಲ್ಲಿ ತಯಾರಾದ ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ಹಿಮಾಲಯಕ್ಕೆ ಹಾರಿದ್ದಾರೆ. ಆಗಸ್ಟ್ 09ರಂದು ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ರಜನಿ ಕಂಡು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಸೆಲ್ಫಿಗಾಗಿ ಮುಗಿ ಬಿದ್ದಿದ್ದರು. ಎಲ್ಲರಿಗೂ ಸಮಾಧಾನದಿಂದಲೇ ಸೆಲ್ಫಿಕೊಟ್ಟು ಹಿಮಾಲಯದತ್ತ ತೆರೆಳಿದ್ದರು ರಜನಿಕಾಂತ್.

rajinikanth in himalaya 1

ರಜನಿಕಾಂತ್ (Rajinikanth) ಆಗಾಗ್ಗೆ ಹಿಮಾಲಯಕ್ಕೆ (Himalaya) ಹೋಗುತ್ತಲೇ ಇರುತ್ತಾರೆ. ಅಲ್ಲದೇ, ಹಿಮಾಲಯದಲ್ಲಿ ಹಲವಾರು ಚಟುವಟಿಕೆಗಳನ್ನೂ ಅವರು ಹಮ್ಮಿಕೊಂಡಿದ್ದಾರೆ. ಹಿಮಾಲಯದಲ್ಲಿ ರಜನಿ ಎಲ್ಲಿರುತ್ತಾರೆ? ಏನು ಮಾಡುತ್ತಾರೆ? ಅವರು ಇರುವ ಸ್ಥಳ ಹೇಗಿರುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಲೇ ಇರುತ್ತದೆ. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಕನ್ನಡದ ಬರಹಗಾರ ಸುಪ್ರೀತ್ ಕೆ.ಎನ್ ಬರೆದಿದ್ದಾರೆ. ಸ್ವತಃ ರಜನಿಯನ್ನೂ ಅವರು ಹಿಮಾಲಯದಲ್ಲಿ ಭೇಟಿ ಮಾಡಿದ್ದಾರೆ.

rajinikanth in himalaya 4

ಸುಪ್ರೀತ್ ಕೆ.ಎನ್ ಫೇಸ್ ಬುಕ್ ನಲ್ಲಿ ಬರೆದಂತೆ…

ಆಶ್ರಮಕ್ಕೆ ರಜನಿಕಾಂತ್ ಬಂದಿದ್ದಾರೆ ಎಂದು ನಿತ್ಯದ ಅಭ್ಯಾಸದಂತೆ ಗಂಗಾ ನದಿಯ ದಡಕ್ಕೆ ಹೋಗಿದ್ದಾಗ ಸನ್ಯಾಸಿಗಳೊಬ್ಬರು ಹೇಳಿದರು. ಆಶ್ಚರ್ಯವೇನೂ ಆಗಲಿಲ್ಲ. ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗೋದು, ಹಿಮಾಲಯಕ್ಕೆ ಹೋಗುವಾಗ ಹೃಷಿಕೇಶದ ಈ ಆಶ್ರಮಕ್ಕೆ ಬಂದು ಉಳಿದುಕೊಳ್ಳೋದು ಸಾಮಾನ್ಯ. ಪ್ರಧಾನಿ ಮೋದಿ, ರಜನಿಕಾಂತ್ ಹೀಗೆ ಅನೇಕರಿಗೆ ದಯಾನಂದ ಸರಸ್ವತೀ ಸ್ವಾಮಿಗಳು ಆಧ್ಯಾತ್ಮ ಗುರುಗಳು. ಹಾಗಾಗಿ ಆಶ್ಚರ್ಯವಾಗಲಿಲ್ಲ. ಆಶ್ರಮದೊಳಗೆ ನೋಡಿದರೆ ಗೆಸ್ಟ್ ಹೌಸಿನ ಮುಂದೆ ಒಳ್ಳೆಯ ಕಾರ್ ನಿಂತಿತ್ತು. ಆದರೆ ಪೊಲೀಸ್ ಜೀಪು, ಬೌನ್ಸರ್‌ಗಳು ಯಾರೂ ಇಲ್ಲ. ಆಮೇಲೆ ಪಾಠಕ್ಕೆಂದು ನಾನು ಸಭಾಂಗಣದೊಳಗೆ ಹೋದ ಐದು ನಿಮಿಷಗಳ ನಂತರ ರಜನಿಕಾಂತ್ ಬಂದ್ರು. ಅವರು ಮನೆಯಿಂದ ಹೊರಬಂದರೆ ಸಾಕು, ಅವರನ್ನು ನೋಡಲು ಸಾವಿರಾರು ಜನ ಕಾಯ್ತಿರ್ತಾರೆ. ಆದರೆ ಪುಟ್ಟ ಸಭಾಂಗಣದಲ್ಲಿ ಇದ್ದದ್ದು ಹೆಚ್ಚೆಂದರೆ 50 ಜನ. ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಇಲ್ಲಿ ಬಂದಿರುವುದು ನಮಗೆ ಖುಷಿ ತಂದಿದೆ, ಇವತ್ತು ಅವರ ಸಿನಿಮಾ ಬಿಡುಗಡೆ ಆಗ್ತಿದೆ, ಅವರಿಗೆ ಒಳ್ಳೆದಾಗ್ಲಿ ಎಂದಾಗ, ಆ ಸ್ಟಾರ್‌ಗಿರಿಗೂ ತಮಗೂ ಸಂಬಂಧವೇ ಇಲ್ಲವೆನ್ನುವಂತಹ ನಿರ್ಲಿಪ್ತ ಭಾವ ಅವರ ಮುಖದಲ್ಲಿ.

rajinikanth in himalaya 2

ವೇದಾಂತದಲ್ಲಿ ಸಾಮಾನ್ಯವಾಗಿ ಒಂದು ಉದಾಹರಣೆ ಕೊಡುತ್ತಾರೆ. ಸಿನಿಮಾ ನಟನಂತೆ ನಮ್ಮ ಪಾತ್ರ ಮಾಡಬೇಕಷ್ಟೆ. ಅದಕ್ಕೆ ಅಂಟಿಕೊಳ್ಳಬಾರದು. ಕೋಟ್ಯಾಂತರ ರೂಪಾಯಿ ಇರುವ ಸಿನಿಮಾ ನಟ, ಶೂಟಿಂಗ್ ಸೆಟ್‌ಗೆ ಬಂದಾಗ, ಭಿಕ್ಷುಕನ ಪಾತ್ರ ಕೊಟ್ಟರು ಮಾಡ್ತಾನೆ. ಪ್ಯಾಕಪ್ ಅಂದ ಕೂಡಲೇ ತನ್ನ ಕಾರಲ್ಲಿ ಮನೆಗೆ ಹೋಗ್ತಾನೆ. ರಜನಿಕಾಂತ್ ಸಿನಿಮಾದಲ್ಲಿ super star, style king ಆದರೂ, ಪ್ಯಾಕಪ್ ಅಂದ ಕೂಡಲೇ makeup ತೆಗೆದು, ಬಿಳಿ ಶರ್ಟು ಪಂಚೆ ಹಾಕಿದಾಗ ಅವರೇ ಬೇರೆ.

Rajinikanth 1

ರಜನಿಕಾಂತ್ ಅವರಿಗೆ ಆಶ್ರಮ, ಹಿಮಾಲಯ ಇವೆಲ್ಲಾ ಯಾಕೆ ಬೇಕು? ಕೋಟಿ ಕೋಟಿ ಹಣ, ಅಭಿಮಾನಿಗಳು ಎಲ್ಲ ಇದ್ದಾರಲ್ಲ, ಆರೋಗ್ಯ ಕೈ ಕೊಟ್ರೆ ಒಳ್ಳೆ ಆಸ್ಪತ್ರೆಗೆ ಸೇರೊದಿರಲಿ, ಆಸ್ಪತ್ರೆಯನ್ನೇ ಕೊಂಡುಕೊಳ್ಳಬಹುದು. ಇಷ್ಟೆಲ್ಲಾ ಇದ್ದು ಅವರಿಗೆ ಒಂದು ಸತ್ಯ ಅರಿವಾಗಿದೆ. ಸರ್ವಂ ವ್ಯರ್ಥಂ ಮರಣ ಸಮಯೇ ಸಾಂಬ ಏಕ ಸಹಾಯಕಃ (ಮರಣ ಸಮಯದಲ್ಲಿ ಶಿವನೊಬ್ಬನೇ ಸಹಾಯಕ್ಕೆ ಬರೋದು, ಉಳಿದದ್ದೆಲ್ಲಾ ವ್ಯರ್ಥ). ಈ ಸತ್ಯ ಅರಿವಾದರೆ, ಬಲವಾಗಿ ಆಂತರ್ಯದಲ್ಲಿ ಬೇರೂರಿದರೆ ಹಿಮಾಲಯ ಸೆಳೆಯುತ್ತೆ. ಗಂಗೆ ಕರೆಸಿಕೊಳ್ಳುತ್ತಾಳೆ ಎಂದು ಸುಪ್ರೀತ್ ಬರೆದುಕೊಂಡಿದ್ದಾರೆ.

 

ಒಂದು ಕಡೆ ರಜನಿಕಾಂತ್ ಅವರ ಜೈಲರ್ (Jailer)  ಸಿನಿಮಾ ರಿಲೀಸ್ ಆಗಿದೆ. ಉತ್ತಮ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಮತ್ತೊಂದು ಕಡೆ ರಜನಿಕಾಂತ್ ನೆಮ್ಮದಿಯನ್ನು ಅರಸಿಕೊಂಡು ಹಿಮಾಲಯಕ್ಕೆ ಹೋಗಿದ್ದಾರೆ. ಧ್ಯಾನಕ್ಕೆ ಕೂತಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article