ಕೋಲಾರ: ಪೋಷಕರು ಬುದ್ದಿವಾದ ಹೇಳಿದ ಹಿನ್ನೆಲೆ ಎಂಟನೇ ತರಗತಿ ವಿದ್ಯಾರ್ಥಿ (Student) ಮನೆ ಬಿಟ್ಟು ಹೋಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿಈ ಘಟನೆ ಜರುಗಿದ್ದು, ಗ್ರಾಮದ ಹರ್ಷಿತ್ ಎಂಬ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ಕೆಜಿಎಫ್ ನಗರದ ಶಾಲೆಯೊಂದರಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಯಾವಾಗಲೂ ಮೊಬೈಲ್‌ನಲ್ಲಿಯೇ ಆಟವಾಡಿಕೊಂಡಿದ್ದ. ಈ ಹಿನ್ನೆಲೆ ತಂದೆ ಶೇಖರ್ ಮಗನಿಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಗ ಮನೆಬಿಟ್ಟು ಹೋಗಿದ್ದಾನೆ. ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಶುಕ್ರವಾರ ಎಂದಿನಂತೆ ಶಾಲೆಗೆ ಹೋಗಿದ್ದು, ಶಾಲೆ ಮುಗಿದ ಬಳಿಕ ಮನೆಗೆ ಬಂದಿರಲಿಲ್ಲ. ಅಲ್ಲದೇ ಶಾಲೆಯಲ್ಲಿ ತಿರುಪತಿಗೆ (Tirupati) ಹೋಗುವ ಮಾರ್ಗದ ಕುರಿತು ಸ್ನೇಹಿತರನ್ನು ವಿಚಾರಣೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ತಿರುಪತಿಗೆ ತೆರಳಿರುವ ಅನುಮಾನವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಸದ್ಯ ಪೋಷಕರು ರಾಬರ್ಟ್ ಸನ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಹೊರಟಿದ್ದ ಬಸ್‍ನಲ್ಲಿ ದಟ್ಟ ಹೊಗೆ – ಆತಂಕಕ್ಕೊಳಗಾದ ರಾಯರ ಭಕ್ತರು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]