ದೆಹಲಿಯಲ್ಲಿ ಮತದಾನ ಜಾಗೃತಿ ಮೂಡಿಸಿದ ಕರ್ನಾಟಕದ ವಿದ್ಯಾರ್ಥಿನಿ

Public TV
2 Min Read
karnataka student new delhi

ನವದೆಹಲಿ: ರಾಷ್ಟ ರಾಜಧಾನಿ ದೆಹಲಿಯಲ್ಲಿ (New Delhi) ಆರನೇ ಹಂತದಲ್ಲಿ ಲೋಕಸಭೆ ಚುನಾವಣೆ (Lok Sabha Elections 2024) ನಡೆಯಲಿದ್ದು, ಚುನಾವಣೆಯ ಭಾಗವಾಗಿ ಕರ್ನಾಟಕ (Karnataka) ಮೂಲದ ವಿದ್ಯಾರ್ಥಿನಿಯೊಬ್ಬಳು ಮತದಾನ ಜಾಗೃತಿಯಲ್ಲಿ ನಿರತಳಾಗಿದ್ದಾಳೆ. ರಾಜ್ಯದಿಂದ ಆಗಮಿಸಿರುವ ಸನ್ನಿಧಿ ದೆಹಲಿಯ ಇಂಡಿಯಾ ಗೇಟ್ ಸೇರಿ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಹಮ್ಮಿಕೊಂಡಿದ್ದಾಳೆ.

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿ ಮೂಲದ ಲೋಕೇಶ್ ಕಶೆಕೋಡಿ ಪುತ್ರಿಯಾಗಿರುವ ಸನ್ನಿಧಿ ಕಡ್ಡಾಯ ಮತದಾನ ಮಾಡುವಂತೆ ದೆಹಲಿಯಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾಳೆ. ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಸನ್ನಿಧಿ ಜನರ ಗಮನ ಸೆಳೆಯುತ್ತಿದ್ದಾಳೆ. ಇದನ್ನೂ ಓದಿ: ಪ್ರಚಾರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ

karnataka student new delhi 3

ಇಂಗ್ಲಿಷ್, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ತುಳು ಭಾಷೆಯಲ್ಲಿ ಜಾಗೃತಿ ಮೂಡಿಸುವ ಸನ್ನಿಧಿ ಪೋಷಕರು ಮತ್ತು ಶಾಲಾ ಸ್ನೇಹಿತರ ಜೊತೆಗೆ ದೆಹಲಿಗೆ ಭೇಟಿ ನೀಡಿದ್ದಾಳೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಜಾಗೃತಿ ಮೂಡಿಸಿದ್ದ ಸನ್ನಿಧಿ ಈ ಬಾರಿಯ ಲೋಕಸಭೆಯಲ್ಲಿ ಕರ್ನಾಟಕ, ಕೇರಳ ಗೋವಾದಲ್ಲಿ ಮತದಾನ ಜಾಗೃತಿ ಮೂಡಿಸಿದ್ದಾಳೆ. ಸದ್ಯ ದೆಹಲಿಯಲ್ಲಿ ಎರಡು ದಿನ ಜಾಗೃತಿ ಅಭಿಯಾನ ಕೈಗೊಂಡಿರುವ ಸನ್ನಿಧಿ ಕಾರ್ಯವನ್ನು ರಾಜ್ಯ ಚುನಾವಣಾ ಆಯೋಗವೂ ಶ್ಲಾಘಿಸಿದೆ.

karnataka student new delhi 1

ಈ ಬಗ್ಗೆ ಮಾತನಾಡಿದ ಸನ್ನಿಧಿ, ದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಮತದಾನ ಮತ್ತು ಅದರ ಮಹತ್ವವನ್ನು ನಾನು ಪೋಷಕರಿಂದ ತಿಳಿದುಕೊಂಡೆ. ಹೀಗಾಗಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎನಿಸಿತು. ಈ ಹಿನ್ನೆಲೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಸಹಕಾರದಲ್ಲಿ ಜಾಗೃತಿ ಕೈಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಮನೆಯಲ್ಲೇ ಮತದಾನ ಮಾಡಿದ ಅನ್ಸಾರಿ, ಮನಮೋಹನ್‌ ಸಿಂಗ್‌, ಜೋಶಿ

ಸನ್ನಿಧಿ ತಂದೆ ಲೋಕೇಶ್ ಕಶೆಕೋಡಿ ಮಾತನಾಡಿ, ಸನ್ನಿಧಿ ಚಿಕ್ಕ ವಯಸ್ಸಿನಿಂದಲೂ ಚುರುಕು ವಿದ್ಯಾರ್ಥಿನಿ. ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಹನೀಯರ ಜೀವನದ ಬಗ್ಗೆ ಭಾಷಣ ಮಾಡುವ ಮೂಲಕ ಎಲ್ಲರ ಗಮನ ಸಳೆದಿದ್ದಳು. ಹೀಗಾಗಿ ಅವಳಿಂದ ಮತದಾನದ ಜಾಗೃತಿ ಮೂಡಿಸಬೇಕು ಎಂಬುದು ನಮ್ಮ ಆಸೆಯಾಗಿತ್ತು. ಅದರಂತೆ ಪೆರಾಜೆಯಲ್ಲಿರುವ ಬಾಲಾ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆರ್ಥಿಕ ಸಹಕಾರದಲ್ಲಿ ನಾವು ಇಂದು ದೆಹಲಿಯಲ್ಲಿ ಜಾಗೃತಿ ಕೈಕೊಂಡಿದ್ದೇವೆ ಎಂದು ತಿಳಿಸಿದರು.

Share This Article