ಚಿತ್ರದುರ್ಗ: 2ನೇ ಮಹಡಿಯಿಂದ ಕೆಳಗೆ ಬಿದ್ದ ಸ್ಟಾಫ್ ನರ್ಸ್ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ದುರ್ಘಟನೆ ಚಿತ್ರದುರ್ಗದ (Chitradurga) ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಮೂಲದ ನರ್ಸ್ ಇಂದ್ರಮ್ಮ (36) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಹಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು. ಇದನ್ನೂ ಓದಿ: ಮಂಡ್ಯ | ಕೆರೆ ಕೋಡಿಗೆ ಕೊಚ್ಚಿಹೋಗಿ ಬೈಕ್ ಸವಾರ ಸಾವು
ನಿನ್ನೆ ಸಂಜೆ ಇಂದ್ರಮ್ಮನ ಸ್ನೇಹಿತೆ ಬೀಗದ ಕೀಯನ್ನು ಮೇಲಿಂದ ಕೆಳಗೆ ಎಸೆದಿದ್ದರು. ಆಗ ಬೀಗದ ಕೀ ಆಯತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅದನ್ನು ಕಟ್ಟಿಗೆಯಿಂದ ತೆರವುಗೊಳಿಸಲು ಮುಂದಾಗಿದ್ದ ಇಂದ್ರಮ್ಮ ಕೆಳಗೆ ಬಿದ್ದಿದ್ದಾರೆ.
ಆಕೆಯ ತಲೆಗೆ ಬಲವಾದ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಅವರನ್ನು ಬಸವೇಶ್ವರ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾರ್ಗಮಧ್ಯೆ ಅಸುನೀಗಿದ್ದಾರೆಂದು, ಸಹೊದ್ಯೋಗಿಗಳು ತಿಳಿಸಿದರು. ಆದರೆ, ಮೃತಳ ಕುಟುಂಬಸ್ಥರು ಮಾತ್ರ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೆನ್ನೆಗೆ ಬಲವಾಗಿ ಹೊಡೆದ ಶಿಕ್ಷಕಿ – ಸಾವು ಬದುಕಿನ ನಡುವೆ ಬಾಲಕಿ ಹೋರಾಟ
ಈ ಸಾವಿನ ಬಗ್ಹೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಚಿತ್ರದುರ್ಗ ನಗರ ಠಾಣೆಗೆ ದೂರು ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಬೆರಳಚ್ಚು ತಜ್ಞರು ಸೇರಿದಂತೆ ಇನ್ನಿತರೆ ತಂತ್ರಜ್ಞರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.