ನವದೆಹಲಿ: ಕೋವಿಡ್ ಸೋಂಕಿತರಾಗಿರುವ ಎಐಸಿಸಿ ಅಧ್ಯಕ್ಷೆ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಕೋವಿಡ್ ನಂತರದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸೋನಿಯಾಗಾಂಧಿ ಆರೋಗ್ಯ ಪರಿಸ್ಥಿತಿ ಕುರಿತಂತೆ ಎಐಸಿಸಿ ಪ್ರಕಟಣೆ ಹೊರಡಿಸಿದೆ.
A statement on Congress President’s health condition. pic.twitter.com/4tVBtgyhEi
— Jairam Ramesh (@Jairam_Ramesh) June 17, 2022
ಸೋನಿಯಾ ಗಾಂಧಿ ಶ್ವಾಸಕೋಶದಲ್ಲಿ ಫಂಗಲ್ ಇನ್ಫೆಕ್ಷನ್ ಇರೋದನ್ನು ವೈದ್ಯರು ಗುರುತಿಸಿದ್ದಾರೆ. ಸದ್ಯ ಸೋನಿಯಾ ಗಾಂಧಿ ಆರೋಗ್ಯದ ಮೇಲೆ ತಜ್ಞ ವೈದ್ಯರು ನಿಗಾ ಇರಿಸಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ. ಸೋನಿಯಾ ಗಾಂಧಿ ಮೂಗಿನಲ್ಲಿ ರಕ್ತ ಒಸರಿದ ಹಿನ್ನೆಲೆಯಲ್ಲಿ ಜೂನ್ 12ರಂದು ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೋನಿಯಾ ಗಾಂಧಿ ಅನಾರೋಗ್ಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮಾಡಿದ ಮನವಿಗೆ ಇ.ಡಿ ಸ್ಪಂದಿಸಿದೆ. ಇ.ಡಿ ವಿಚಾರಣೆಯಿಂದ ರಾಹುಲ್‍ಗೆ ಮೂರು ದಿನ ವಿನಾಯ್ತಿ ಸಿಕ್ಕಿದೆ. ಸೋಮವಾರ ರಾಹುಲ್ ಗಾಂಧಿ ಇ.ಡಿ ಮುಂದೆ ಮತ್ತೆ ವಿಚಾರಣೆಗೆ ಹಾಜರಾಗಬೇಕಿದೆ. ಬುಧವಾರ ಸೋನಿಯಾ ಗಾಂಧಿ ಕೂಡ ಇ.ಡಿ ವಿಚಾರಣೆಗೆ ಹಾಜರಾಗಬೇಕಿದೆ. ಆದ್ರೆ, ಸೋನಿಯಾ ಗಾಂಧಿಯ ಆರೋಗ್ಯ ಪರಿಸ್ಥಿತಿಯನ್ನು ನೋಡುತ್ತಿದ್ದರೆ, ಸದ್ಯಕ್ಕೆ ಅವರು ವಿಚಾರಣೆ ಎದುರಿಸೋದು ಅನುಮಾನವಾಗಿದೆ.