ಅಡಿಲೇಡ್: ಟೀಂ ಇಂಡಿಯಾದ ಬಹು ನಿರೀಕ್ಷಿತ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಚೇತೇಶ್ವರ ಪೂಜಾರ ಶತಕ ಸಿಡಿಸಿ ತಂಡದ ಮಾನವನ್ನು ಕಾಪಾಡಿದ್ದಾರೆ.
ಪಂದ್ಯದಲ್ಲಿ ಆಕರ್ಷಕ 123 ರನ್ (246 ಎಸೆತ, 7 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪೂಜಾರಾ ಟೆಸ್ಟ್ ಕ್ರಿಕೆಟ್‍ನಲ್ಲಿ 16ನೇ ಶತಕ ಪೂರೈಸಿದರು. ಪೂಜಾರ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 87.5 ಓವರ್ ಗಳಲ್ಲಿ 9 ವಿಕೆಟ್ ನಕಷ್ಟಕ್ಕೆ 250 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಲೆಕ್ಕಾಚಾರಗಳನ್ನು ಆಸೀಸ್ ಬೌಲರ್ ಗಳು ತಲೆ ಕೆಳಗಾಗಿ ಮಾಡಿದರು. ನಾಥನ್ ಲಯನ್ ಭಾರತಕ್ಕೆ ಮೊದಲ ಆಘಾತ ನೀಡಿದರು. ಸತತವಾಗಿ ಕಳಪೆ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದ್ರು.
Advertisement
ಇತ್ತ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಮುರಳಿ ವಿಜಯ್ ಕೂಡ 11 ರನ್ ಗಳಿಸಿ ನಿರ್ಗಮಿಸಿದರು. ಇದರೊಂದಿಗೆ ಕೇವಲ 15 ರನ್ ಗಳಿಗೆ ಟೀಂ ಇಂಡಿಯಾ ತನ್ನ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕೆ ಇಳಿದ ನಾಯಕ ವಿರಾಟ್ ಕೊಹ್ಲಿ ಕೂಡ ವೈಫಲ್ಯ ಅನುಭವಿಸಿ 3 ರನ್ ಗಳಿಗೆ ಪ್ಯಾಟ್ ಕಮ್ಮಿನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಅಜಿಂಕ್ಯಾ ರಹಾನೆ 13 ರನ್ ಗಳಿಸಿ ಔಟಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದುಡಿದರು. ಈ ಹಂತದಲ್ಲಿ ಟೀಂ ಇಂಡಿಯಾ 27 ಓವರ್ ಗಳಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಕೇವಲ 42 ರನ್ ಮಾತ್ರ ಗಳಿಸಿತ್ತು.
Advertisement
There it is, a brilliant ton for Cheteshwar Pujara from 231 balls!
That's his 16th hundred in Test cricket and third against Australia.#AUSvIND | @Domaincomau pic.twitter.com/cD1rSObzGq
— cricket.com.au (@cricketcomau) December 6, 2018
ಪೂಜಾರ ಆಸರೆ: ಆರಂಭಿಕ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಒನ್‍ಡೌನ್ ಆಟಗಾರನಾಗಿ ಬಂದ ಪೂಜಾರ ತಾಳ್ಮೆ ಆಟ ಚೇತರಿಕೆ ನೀಡಿತು. ರೋಹಿತ್ ಶರ್ಮಾ ಮತ್ತು ಪೂಜಾರ ಜೋಡಿ 5 ವಿಕೆಟ್‍ಗೆ 45 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ರೋಹಿತ್ 2 ಬೌಂಡರಿ, 3 ಸಿಕ್ಸರ್ ಗಳಿಂದ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಯುವ ಆಟಗಾರ ರಿಷಭ್ ಪಂತ್ ಪೂಜಾರಗೆ ಸಾಥ್ ನೀಡಿದರು. ಈ ಜೋಡಿ 6ನೇ ವಿಕೆಟ್‍ಗೆ 41 ರನ್ ಕಾಣಿಕೆ ನೀಡಿತು. ಆದರೆ 25 ರನ್ ಗಳಿಸಿದ್ದ ರಿಷಭ್ ಪಂತ್ ಭಾರೀ ಹೊಡೆತಕ್ಕೆ ಯತ್ನಿಸಿ ಔಟಾದರು. ಇದರೊಂದಿಗೆ ಟೀಂ ಇಂಡಿಯಾ ಪ್ರಮುಖ 6 ಬ್ಯಾಟ್ಸ್ ಮನ್‍ಗಳು 127 ರನ್‍ಗಳಿಗೆ ಪೆವಿಲಿಯನ್ ಸೇರಿದ್ದರು. ಇದನ್ನು ಓದಿ : ಗಲ್ಲಿಯಲ್ಲಿ ಉಸ್ಮಾನ್ ಖವಾಜ ಅತ್ಯುತ್ತಮ ಕ್ಯಾಚ್ – ಕೊಹ್ಲಿ ಔಟಾಗುತ್ತಿರೋ ವಿಡಿಯೋ ನೋಡಿ
Cheteshwar Pujara – 123 runs in 246 balls, 380 mins
dots: 182
1s: 30
2s: 22
3s: 3
4s: 7
6s: 2
S/r: 50.00#AusvInd#AusvsInd
— Mohandas Menon (@mohanstatsman) December 6, 2018
ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಮತ್ತೊಂದು ಬದಿಯಲ್ಲಿದ್ದ ಪೂಜಾರ ನಿಧಾನವಾಗಿ ತಂಡದ ಮೊತ್ತ ಹೆಚ್ಚಿಸುತ್ತಾ ಸಾಗಿದರು. ಆಸೀಸ್ ತಂಡದ ಎಲ್ಲಾ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿದ ಪೂಜಾರ ಮತ್ತೊಮ್ಮೆ ತಾವು ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಎಂದು ಸಾಬೀತು ಪಡಿಸಿದರು. ಅಲ್ಲದೇ ಟೆಸ್ಟ್ ಕ್ರಿಕೆಟ್‍ನಲ್ಲಿ 5 ಸಾವಿರ ರನ್ ಪೂರೈಸಿದರು. ಈ ಮೂಲಕ ದ್ರಾವಿಡ್ ಬಳಿಕ ತಂಡದಲ್ಲಿ ಆ ಸ್ಥಾನವನ್ನು ತುಂಬಿದ ಆಟಗಾರ ಎನಿಸಿಕೊಂಡು. ಇದಕ್ಕೆ ಪ್ರಮುಖ ಕಾರಣವು ಇದ್ದು, ರಾಹುಲ್ ಹಾಗೂ ಪೂಜಾರ ತಮ್ಮ ವೃತ್ತಿ ಜೀವನದಲ್ಲಿ 3 ಸಾವಿರ (67 ಇನ್ನಿಂಗ್ಸ್), 4 ಸಾವಿರ (84 ಇನ್ನಿಂಗ್ಸ್), 5 ಸಾವಿರ (108 ಇನ್ನಿಂಗ್ಸ್) ರನ್ ಗಳನ್ನು ಪೂರೈಸಿದ್ದಾರೆ.
ಉಳಿದಂತೆ ಟೀಂ ಇಂಡಿಯಾದ ಕೆಳ ಕ್ರಮಾಂಕದಲ್ಲಿ ಅಶ್ವಿನ್ 25 ರನ್ ಗಳಿಸಿ ಔಟಾದರೆ, ಇಶಾಂತ್ ಶರ್ಮಾ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೊಹಮ್ಮದ್ ಶಮಿ 6 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಬಿಗು ಬೌಲಿಂಗ್ ದಾಳಿ ನಡೆಸಿ ಆಸೀಸ್ ಬೌಲರ್ ಗಳಾದ ಸ್ಟಾರ್ಕ್, ಹೇಜಲ್ ವುಡ್, ಕಮ್ಮಿನ್ಸ್, ಲಯನ್ ತಲಾ 2 ವಿಕೆಟ್ ಪಡೆದರು.
This is the only second time Virat Kohli has won a toss in nine away Tests in 2018.
Won toss at Johannesburg (and won!) and now at Adelaide.
He had lost seven other tosses!#AusvInd#AusvsInd
— Mohandas Menon (@mohanstatsman) December 5, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv