ಬೀದರ್: ಇಲ್ಲಿನ ಐತಿಹಾಸಿಕ ಕೋಟೆ ಮೇಲೆ ಸಂಕ್ರಾಂತಿ ಹಬ್ಬದ ನಿಮಿತ್ತ ಸೂರ್ಯಕಿರಣ ತಂಡ ಆಕರ್ಷಕ ಏರ್‌ಶೋ (Air ನಡೆಯಿತು.
ಶುಕ್ರವಾರ (ಜ.16) ಮಧ್ಯಾಹ್ನ 3 ಗಂಟೆಗೆ ಬೀದರ್‌ನ ಐತಿಹಾಸಿಕ ಕೋಟೆ ಮೇಲೆ ಏರ್ ಶೋ ಪ್ರಾರಂಭವಾಯಿತು. 8 ಸೂರ್ಯಕಿರಣ ಯುದ್ಧ ವಿಮಾನಗಳಿಂದ ಹಾಗೂ ಏರ್‌ಪೋರ್ಸ್ ನುರಿತ ಪೈಲಟ್‌ಗಳಿಂದ ಏರ್ ಶೋ ನಡೆಯಿತು. ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳುತ್ತಿರುವ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ತಿರಂಗ ಧ್ವಜ ಹಾಗೂ ಹೃದಯ ಸೇರಿದಂತೆ ಹಲವು ಆಕೃತಿಗಳನ್ನು ಏರ್ ಶೋದಲ್ಲಿ ಮೂಡಿಸಿದ್ದರು. ಇದನ್ನೂ ಓದಿ: ʻನನಗೆ ಸೂರ್ಯಕುಮಾರ್ ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!
ಏರ್ ಶೋ ವೇಳೆ ಡಿಸಿ ಶಿಲ್ಲಾ ಶರ್ಮಾ, ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಪ್ರತಿ ವರ್ಷದಂತೆ ಈ ವರ್ಷವು ಆಕರ್ಷಕ ಏರ್ ಶೋಗೆ ಐತಿಹಾಸಿಕ ಕೋಟೆ ಸಾಕ್ಷಿಯಾಗಿದೆ.
ಇನ್ನೂ ಏರ್ ಶೋ ಹಿನ್ನೆಲೆ ಮೂರು ಕಿಲೋಮೀಟರ್ ವ್ಯಾಪಿಯಲ್ಲಿ ಗಾಳಿಪಟ ಹಾರಾಟ ನಿಷೇಧಿಸಿ, ಅಪರ ಜಿಲ್ಲಾಧಿಕಾರಿ ಶಿವಾನಂದ.ಬಿ ಕರಾಳೆ ಅವರು ಆದೇಶಿಸಿದ್ದರು.ಇದನ್ನೂ ಓದಿ: ಸಿಎಂ, ಡಿಸಿಎಂ ಫುಟ್‌ಪಾತ್ ಗಿರಾಕಿಗಳು, ಅದ್ಕೆ ರಾಹುಲ್ ಗಾಂಧಿ ಫುಟ್‌ಪಾತ್‌ನಲ್ಲಿ ನಿಲ್ಲಿಸಿ ಮಾತಾಡಿಸಿದ್ದಾರೆ – ಛಲವಾದಿ

