Connect with us

Districts

ವೇಷ ಹಾಕಿ ಕಲಿತ ಶಾಲೆಯ ಋಣ ತೀರಿಸಲು ಹೊರಟ ಉಡುಪಿಯ ರಾಮಾಂಜಿ

Published

on

ಉಡುಪಿ: ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಆಚರಣೆ ಬಿಟ್ಟರೆ ವೇಷಗಳದ್ದೇ ಅಬ್ಬರ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ದೃಷ್ಟಿ ಹಾಯಿಸಿದಲ್ಲೆಲ್ಲಾ ಸಾವಿರಾರು ವೇಷಗಳು ಮನಸ್ಸಿಗೆ ಖುಷಿಕೊಡುತ್ತದೆ.

ಉಡುಪಿಯಲ್ಲಿ ನಾಳೆ ನಾಡಿದ್ದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಕಡೆಗೋಲು ಕೃಷ್ಣನ ನಗರಿಯಲ್ಲಿ ಹುಲಿವೇಷಗಳು ದೂಳು ಎಬ್ಬಿಸಲಿದೆ. ಈ ನಡುವೆ ವಿಭಿನ್ನ ವೇಷವೊಂದು ಎಂಟ್ರಿ ಕೊಡಲಿದೆ. ಉಡುಪಿಯ ರಾಮಾಂಜಿ ಡಿಫರೆಂಟ್ ವೇಷ ಹಾಕಿ ದುಡ್ಡು ಸಂಗ್ರಹಿಸಿ ಸದುದ್ದೇಶವೊಂದಕ್ಕೆ ದಾನ ಮಾಡಲಿದ್ದಾರೆ.

ರಾಮಾಂಜಿ ಕಳೆದ 6 ವರ್ಷಗಳಿಂದ ವಿಭಿನ್ನ ವೇಷಗಳನ್ನು ಹಾಕಿಕೊಂಡು ಅದರಿಂದ ಸಂಗ್ರಹವಾದ ಹಣವನ್ನು ಬಡ ಮಕ್ಕಳ ಆರೋಗ್ಯ, ಚಿಕಿತ್ಸೆ, ಶಿಕ್ಷಣಕ್ಕೆ ನೀಡುತ್ತಾ ಬಂದಿದ್ದಾರೆ. ಈ ಬಾರಿಯ ಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿಯ ಎರಡು ದಿನಗಳ ಕಾಲ ವೇಷಕ್ಕೆ ಅವರು ಆಯ್ದುಕೊಂಡ ಪಾತ್ರ ಡ್ರಗ್ಸ್ ಕಾರ್ಕೋಟಕ. ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಜಂಟಿಯಾಗಿ ಮಾದಕ ವ್ಯಸನ ವಿರೋಧಿ ಮಾಸಾಚಾರಣೆಯಾಗಿ ಆಚರಿಸುತ್ತಿದೆ. ಅಷ್ಟಮಿ ವೇಳೆ ಉಡುಪಿಗೆ ಬರುವ ಯಾತ್ರಿಕರಿಗೆ ಮಾದಕ ವ್ಯಸನ ಸೇವನೆಯ ದುರಂತದ ಕುರಿತು ಜಾಗೃತಿ ಮೂಡಿಸುವುದು ರಾಮಾಂಜಿ ಉದ್ದೇಶ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಾಂಜಿ, ಯುವ ಜನತೆ ಅರಿತೋ? ಅರಿಯದೆಯೋ ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ಹೆತ್ತವರ ಅರಿವಿಗೂ ಬಾರದೆ ಆಗುತ್ತಿರುವ ಈ ಸಾಂಕ್ರಾಮಿಕ ರೋಗಕ್ಕೆ ಯಾರೂ ಬಲಿಯಾಗಬಾರದು. ಅರಿವು ಇದಕ್ಕಿರುವ ಏಕೈಕ ಪರಿಹಾರ ಅಂತ ಹೇಳಿದರು. ಡ್ರಗ್ಸ್ ಕಾರ್ಕೋಟಕ ಎಂಬ ವಿನ್ಯಾಸದ ವೇಷಧಾರಣೆ ಮಾಡಲು ನಿರ್ಧರಿಸಿದ್ದು, ವೇಷದ ಪರಿಕಲ್ಪನೆ ಹಾಗೂ ವಿನ್ಯಾಸ ಪ್ರಶಾಂತ್ ಉದ್ಯಾವರ ಮಾಡಿರುತ್ತಾರೆ ಎಂದು ಮಾಹಿತಿ ನೀಡಿದರು.

ವೇಷವನ್ನು ಜಾಗೃತಿ ಮೂಡಿಸುವ ಸಲುವಾಗಿ ಹಾಕುವುದರೊಂದಿಗೆ ಇದರಿಂದ ಬಂದ ಹಣವನ್ನು ರಾಮಾಂಜಿ ಸ್ವಾರ್ಥಕ್ಕಾಗಿ ಬಳಸುತ್ತಿಲ್ಲ. ಅವರು ಓದಿದ ಶಿರ್ವದ ವಿದ್ಯಾವರ್ಧಕ ಸಂಘದ ಕನ್ನಡ ಮಾಧ್ಯಮ ಶಾಲೆಗೆ ನೀಡಲಿದ್ದಾರೆ. ಸರಕಾರದ ಅನುದಾನದ ಒಬ್ಬ ಕೂಡ ಶಿಕ್ಷಕರಿಲ್ಲ. ಇರುವ 5 ಶಿಕ್ಷಕರು ಗೌರವ ಶಿಕ್ಷಕರಾಗಿದ್ದು ಅವರಿಗೆ ನೀಡುವ ಗೌರವ ಧನದ ಒಂದು ಭಾಗವನ್ನು ಶಿಕ್ಷಕರಿಗಾಗಿ ನೀಡುವುದು ಇವರ ಉದ್ದೇಶ. ಉಡುಪಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8 ನೇ ತರಗತಿಯ ಕಳತ್ತೂರಿನ ವಿಶೇಷ ಸಾಮಥ್ರ್ಯದ ಪ್ರತಿಭಾವಂತ ವಿದ್ಯಾರ್ಥಿನಿ ಸೌಂದರ್ಯ ಎಂಬವಳ ಚಿಕಿತ್ಸೆಗೂ ರಾಮಾಂಜಿ ಧನಸಹಾಯ ಮಾಡಲಿದ್ದಾರೆ.

ಈ ಬಾರಿಯ ವೇಷ ಹೆಚ್ಚು ಅಬ್ಬರವೂ ಆಕರ್ಷಕವೂ ಆಗಿರುವುರುದರಿಂದ ಎಲ್ಲರನ್ನೂ ವೈಯುಕ್ತಿಕವಾಗಿ ಸಂಪರ್ಕಿಸಲು ಭೇಟಿಯಾಗದ ಹಿನ್ನೆಲೆಯಲ್ಲಿ ತೇಝ್, ಪೇಟಿಯಂ ಆ್ಯಪ್ ಮೂಲಕ ಕೂಡ ಧನಸಹಾಯ ಮಾಡಬಹುದು. ಜಮೆಯಾದ ಹಣವದ ಕುರಿತು ಸಂಪೂರ್ಣ ಮಾಹಿತಿಯನ್ನು ಹಸ್ತಾಂತರ ನಡೆಯುವ ಕಾರ್ಯಕ್ರಮದಲ್ಲಿ ನೀಡುತ್ತಾರಂತೆ.

ಒಂದು ಒಳ್ಳೆಯ ಕಾರ್ಯಕ್ಕೆ ಧನಸಹಾಯ ಮಾಡಲು ಇಚ್ಚಿಸುವ ದಾನಿಗಳು Ramanji, Syndicate Bank, Kunjibettu Branch, SB A/C No: 01862 21004 2226, IFSC Code: SYNB0000186. PAYTM Number 98444 71566  ಮಾಡಬಹುದು.

ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೆ ಅದಕ್ಕೆ ಸಾವಿರ ದಾರಿಗಳಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ರಾಮಾಂಜಿ ತನ್ನ ಜೀವನ ಭದ್ರವಾಗಿಲ್ಲದಿದ್ದರೂ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಹೊಂದಿರುವುದು ಅವರ ದೊಡ್ಡಗುಣ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *