– 102 ಬಗೆಯ ವಿಶೇಷ ಆರತಿ, 1,08,000 ತುಳಸಿ ದಳ ರಸದಿಂದಲೂ ಅಭಿಷೇಕ
ಮೈಸೂರು: ಶ್ರೀರಾಮನ ಮೂರ್ತಿಗೆ ಸಪ್ತ ನದಿಗಳ ನೀರಿನಿಂದ (River water) ಜಲಾಭೀಷೆಕ ನೇರವೇರಿಸಲು ಮೈಸೂರಿನಲ್ಲಿ (Mysuru) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೈಸೂರಿನ ವಾಸವಿ ಟ್ರಸ್ಟ್ ನವರು ಶ್ರೀರಾಮನ ಮೂರ್ತಿಯ ಅಭಿಷೇಕಕ್ಕೆ ಸಪ್ತ ನದಿಗಳ ನೀರನ್ನ ತರಿಸಿದ್ದಾರೆ. ಕಾವೇರಿ, ಕಪಿಲಾ, ನರ್ಮಾದಾ, ಸಿಂಧು, ಗಂಗಾ, ಸರಯೂ, ಯುಮುನಾ ನದಿ ನೀರನ್ನು ತಂದು ಜಲಾಭಿಷೇಕಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ
Advertisement
Advertisement
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಅದೇ ಸಮಯಕ್ಕೆ ಮೈಸೂರಿನ ದೇವಾಲಯದಲ್ಲೂ ಪ್ರಭು ಶ್ರೀರಾಮನಿಗೆ ಜಲಾಭೀಷೇಕ ನೆರವೇರಿಸಲಾಗುತ್ತದೆ. ಜೊತೆಗೆ ಪಂಚಾಮೃತ ಅಭಿಷೇಕ, 1,08,000 ತುಳಸಿ ದಳದಿಂದ ತೆಗೆದಿರುವ ರಸದಿಂದ ವಿಶೇಷ ಅಭಿಷೇಕವನ್ನೂ ನೆರವೇರಿಸಲಾಗುತ್ತದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ
Advertisement
Advertisement
ಮುಖ್ಯವಾಗಿ ಅಯೋಧ್ಯೆ (Ayodhya) ಮತ್ತು ವಾರಣಾಸಿಯಿಂದ 102 ಬಗೆಯ ಆರತಿಗಳನ್ನ ತರಿಸಲಾಗಿದೆ. ಈ ಆರತಿಯನ್ನ ದೇಶದಲ್ಲಿ ಎಲ್ಲಿಯೂ ಮಾಡುತ್ತಿಲ್ಲ. ಸೋಮವಾರ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಮೈಸೂರು ನಗರದ ಆಲಮ್ಮ ಛತ್ರದಲ್ಲಿ 102 ಬಗೆಯ ಆರತಿ ನೆರವೇರಿಸಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಬೆಳೆದಿರುವ ವಿವಿಧ ಬಗೆಯ ಪುಷ್ಪಗಳಿಂದ ರಾಮನ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುವಂತೆ ಇಲ್ಲಿಯೂ ನೆರವೇರಿಸಲಾಗುತ್ತದೆ ಎಂದು ವಾಸವಿ ಟ್ರಸ್ಟ್ ಸಿಬ್ಬಂದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.