ಕಿರುತೆರೆಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಲೇಖಕ, ನಿರ್ದೇಶಕ ಹರ್ಷಪ್ರಿಯ ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅವರು ಹೆಜ್ಜಾರು (Hejjaru) ಎಂದು ಹೆಸರಿಟ್ಟಿದ್ದಾರೆ. ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಹರ್ಷಪ್ರಿಯಾ, ತಾವು ಮತ್ತು ತಮ್ಮ ತಂಡ ನಟ ಶಂಕರ್ ನಾಗ್ ಅವರನ್ನು ಮಾನಸ ಗುರುಗಳು ಎಂದು ಕರೆದಿದ್ದಾರೆ. ಹಾಗಾಗಿಯೇ ಶಂಕರ್ ನಾಗ್ (Shankar Nag) ಅವರ ಹುಟ್ಟು ಹಬ್ಬಕ್ಕೆ ವಿಶೇಷ ಪತ್ರವೊಂದನ್ನು ಬರೆದಿದ್ದಾರೆ.
Advertisement
ಶಂಕ್ರಣ್ಣ ನಾಗರಕಟ್ಟೆ, ಸಿನಿಮಾ ಬೀದಿ, ಸ್ವರ್ಗ ಎಂಬ ಅಡ್ರೆಸ್ ಗೆ ಪೋಸ್ಟ್ ಮಾಡಿರುವ ನಿರ್ದೇಶಕರು, ‘ಇಲ್ಲಿ ನಾವೆಲ್ಲರೂ ಕ್ಷೇಮ. ಅಲ್ಲಿ ನೀವೂ ಸಹಾ ಕ್ಷೇಮವಾಗಿದ್ದೀರಿ ಎಂದು ನಂಬಿದ್ದೇವೆ. ಈ ಪತ್ರ ಬರೆಯಲು ಕಾರಣವೇನೆಂದರೆ, ಕನ್ನಡ ಚಿತ್ರರಂಗ ಈಗ ನೀವು ಕಂಡ ಕನಸಿನಂತೆಯೇ ಭವ್ಯವಾಗಿ ಬೆಳಗುತ್ತಿದೆ. ದೇಶದೆಲ್ಲೆಡೆ ಕನ್ನಡ ಚಿತ್ರಗಳು ಸದ್ದು, ಸುದ್ದಿ ಮಾಡುತ್ತಿವೆ ಎಂಬುದು ನಿಮಗೂ ಗೊತ್ತಿರುವ ವಿಚಾರವೆ. ನೀವು ನಡೆದ ರಾಜಬೀದಿಯಲ್ಲಿ ಪುಟ್ಟ ಹೆಜ್ಜೆಗಳನ್ನು ಇಟ್ಟು ಹೊರಟಿದ್ದೇವೆ. ಹೆಜ್ಜಾರು ಚಿತ್ರದ ಎಲ್ಲಾ ತಂತ್ರಜ್ಞರಿಗೂ, ಕಲಾವಿದರಿಗೂ ನೀವು ಸದಾ ಮಾನಸ ಗುರುಗಳು’ ಎಂದು ಪತ್ರವನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು
Advertisement
Advertisement
ಪತ್ರವನ್ನು ಮುಂದುವರೆಸುತ್ತಾ, ‘ನಿಮ್ಮ ಪಾದರಸದಂತಹ ಉತ್ಸಾಹ, ಗುಲಗಂಜಿಯಷ್ಟಾದರೂ ನಮಗೂ ಸಿಗುವಂತೆ ಆಶೀರ್ವದಿಸಬೇಕೆಂದು ಈ ಮೂಲಕ ಬೇಡಿಕೊಳ್ಳುತ್ತೇವೆ. ಪ್ರತೀ ಕ್ಷಣವನ್ನೂ ಮರಳಿ ಬಾರದು ಎಂಬಂತೆ ಜೀವಿಸುವವರು ನೀವು. ಅಂತಹ ಕೆಲ ಕ್ಷಣಗಳನ್ನು ನಮ್ಮ ಹೆಜ್ಜಾರು ಕುರಿತಾದ ಮಾಹಿತಿಯಗಳನ್ನು ಓದಲು ಮೀಸಲಿಟ್ಟಿದ್ದು ನಮ್ಮ ಭಾಗ್ಯ. ನೀವು ಮೆಚ್ಚಿದ ಚಿತ್ರಕ್ಕೆ ಕನ್ನಡಿಗರ ಪ್ರೀತಿಯೂ ಸಿಗಲಿದೆ ಎಂಬ ನಂಬಿಕೆ ನಮ್ಮದು. ಸೃಜನಶೀಲತೆಯ ಸಾರ್ವಕಾಲಿಕ ಸಾರ್ವಭೌಮರಾದ ನಿಮಗೆ ಜನುಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
Advertisement
ಹರ್ಷಪ್ರಿಯ (Harshapriya) ಕನ್ನಡ ಕಿರುತೆರೆ ಜಗತ್ತಿನಲ್ಲಿ ಗೆದ್ದ ಪ್ರತಿಭಾವಂತ ಬರಹಗಾರ, ಅವರು ಕಥೆಗಳನ್ನು ನೋಡುವ ರೀತಿಯೇ ಭಿನ್ನ. ನಿರ್ದೇಶನದಲ್ಲೂ ತಮ್ಮದೇ ಆದ ಕನಸು ಕಟ್ಟಿಕೊಂಡು ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಹೆಜ್ಜಾರು ವಿಶೇಷ ಸಿನಿಮಾ ಆಗಲಿದೆ ಎನ್ನುವುದು ನಂಬಿಕೆ. ಇವರ ಕನಸಿಗೆ ವಿಮಲಾ ಎನ್ ಹಾಗೂ ಸುನೀತಾ ಟಿ.ಆರ್ ಸಾಥ್ ನೀಡಿದ್ದು, ಕೆ.ಎಸ್.ರಾಮ್ ಜಿ ಅವರು ಈಸಿನಿಮಾವನ್ನು ಅರ್ಪಿಸಿದ್ದಾರೆ. ಅಮರ್.ಎಲ್ ಅವರ ಸಿನಿಮಾಟೋಗ್ರಫಿ ಮತ್ತು ನುರಿತ ತಂತ್ರಜ್ಞರ ತಂಡವು ಸಿನಿಮಾಗಾಗಿ ಕೆಲಸ ಮಾಡುತ್ತಿದೆ.