LatestBengaluru CityCinemaDistrictsKarnatakaMain PostSandalwood

ಚಿತ್ರರಂಗಕ್ಕೆ ಬುಕ್ಕಾಪಟ್ಟಣ ವಾಸು ವಿಶೇಷ ಕೊಡುಗೆ – ಕ್ರಿಯೇಟಿವ್ ಟೈಮ್ಸ್ ಸ್ಟುಡಿಯೋ ಅನಾವರಣ

ಕಿರುತೆರೆ, ಬೆಳ್ಳಿತೆರೆಯಲ್ಲಿ ಸುಮಾರು ಮೂರು ದಶಕಗಳಿಂದ ಕಾಲ ಕಲಾ ದೇವಿಯ ಆರಾಧನೆ ಮಾಡುತ್ತಾ ಬಂದಿರುವ ಜನಪ್ರಿಯ ಹಾಗೂ ಪ್ರತಿಭಾವಂತ ವ್ಯಕ್ತಿ ಬುಕ್ಕಾಪಟ್ಟಣ ವಾಸು. ಬರಹಗಾರರಾಗಿ, ಧಾರಾವಾಹಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬುಕ್ಕಾಪಟ್ಟಣ ವಾಸು ಆರಂಭದಿಂದಲೂ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇದೀಗ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಇವರು ಚಿತ್ರರಂಗಕ್ಕೆ ಕೊಡುಗೆಯಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಹೊಚ್ಚ ಹೊಸ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ.

CREATIVE TIMES STUDIO 4

ಈಗಾಗಲೇ ಸೆಂಚುರಿ ಫಿಲಂ ಇನ್ಸಿಟಿಟ್ಯೂಟ್ ಎಂಬ ಚಲನಚಿತ್ರ ತರಬೇತಿ ಸಂಸ್ಥೆ ಹುಟ್ಟುಹಾಕಿ ನವ ಕಲಾವಿದರನ್ನು ಈ ಮೂಲಕ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಸಾಹಸದ ಫಲವೇ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್. ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಹೊಸ ಸ್ಟುಡಿಯೋವನ್ನು ಬುಕ್ಕಾಪಟ್ಟಣ ವಾಸು ಆರಂಭಿಸಿದ್ದಾರೆ. ಇವರ ಈ ಹೊಸ ಹಾದಿಗೆ ಗೆಳೆಯ ಶ್ರೀಸಾಯಿಕೃಷ್ಣ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಅದ್ದೂರಿ ಹಾಡುಗಳ ಚಿತ್ರೀಕರಣದಲ್ಲಿ ಬ್ಯುಸಿಯಾದ ‘ಓ ಮೈ ಲವ್’ ಚಿತ್ರತಂಡ

CREATIVE TIMES STUDIO 3

ನಾಗರಬಾವಿಯ ಬಿಡಿಎ ಕಾಂಪ್ಲೆಕ್ಟ್ ನಲ್ಲಿ ನಿರ್ಮಾಣವಾದ ಈ ಸ್ಟುಡಿಯೋವನ್ನು ಇತ್ತೀಚೆಗೆ ಹಿರಿಯ ಸಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ ವಿ.ಮನೋಹರ್, ಬಾಮ ಹರೀಶ್, ಬಾಮ ಗಿರೀಶ್ ಹಾಗೂ ನಟಿ ಭವ್ಯಶ್ರೀ ರೈ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯ್ತು.  ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ‘ಜೋಗಿ ಪ್ರೇಮ್’

ಸ್ಟುಡಿಯೋದ ವಿಶೇಷತೆ ಬಗ್ಗೆ ಮಾತನಾಡಿದ ಶ್ರೀಸಾಯಿಕೃಷ್ಣ, ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಸ್ಟುಡಿಯೋ ಒಳಗೊಂಡಿದೆ. ಬುಕ್ಕಾಪಟ್ಟಣ ವಾಸು ಅವರ ಕ್ರಿಯೇಟಿವಿಟಿ ಹಾಗೂ ನನ್ನ ಯೋಚನೆ ಸೇರಿ ಈ ಸ್ಟುಡಿಯೋ ನಿರ್ಮಾಣ ಮಾಡಿದ್ದೇವೆ. ಹೊಸ ಪ್ರತಿಭೆಗಳಿಗೆ ಸಾಥ್ ನೀಡುತ್ತ ಈ ಸ್ಟುಡಿಯೋ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

CREATIVE TIMES STUDIO 1

ಬುಕ್ಕಾಪಟ್ಟಣ ವಾಸು ಮಾತನಾಡಿ, ಆರಂಭದಲ್ಲಿ ಜಾಹೀರಾತಿಗೆಂದು ಈ ಸಂಸ್ಥೆ ನಿರ್ಮಾಣ ಮಾಡಲಾಯ್ತು. ಆದರೆ ಇದೀಗ ಈ ಬ್ಯಾನರ್ ಮೂಲಕ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದೇವೆ. ಶ್ರೀಸಾಯಿಕೃಷ್ಣ ಅವರ ಸಲಹೆಯಂತೆ ನವೀನ ತಂತ್ರಜ್ಞಾನಗಳನ್ನೊಳಗೊಂಡ ಸ್ಟುಡಿಯೋ ಮಾಡಿದ್ದೇವೆ. ಸಿನಿಮಾ ಸ್ಕ್ರಿಪ್ಟ್ ಹಿಡಿದುಕೊಂಡು ಇಲ್ಲಿಗೆ ಬಂದರೆ ಮೊದಲ ಪ್ರತಿ ತೆಗೆದುಕೊಂಡು ಹೋಗಬಹುದು ಎಂದು ಸ್ಟುಡಿಯೋ ಸೌಲಭ್ಯದ ಬಗ್ಗೆ ವಿವರಿಸಿದರು. ಒಟ್ಟಿನಲ್ಲಿ ಒಂದೇ ಸೂರಿನಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನೊಳಗೊಂಡ ಈ ಸ್ಟುಡಿಯೋ ಚಿತ್ರರಂಗದ ಪಾಲಿಗೆ ವರವೇ ಸರಿ.

Related Articles

Leave a Reply

Your email address will not be published. Required fields are marked *