ಬಾಲಿವುಡ್ ನಲ್ಲಿ ‘ಜವಾನ್’ (Jawan) ಹವಾ ಜೋರಾಗಿದೆ. ಒಂದರ ಮೇಲೊಂದು ಪೋಸ್ಟರ್, ಫಸ್ಟ್ ಪ್ರಿವ್ಯು ಹೀಗೆ ನಾನಾ ಪ್ರಚಾರದಲ್ಲಿ ತೊಡಗಿದ್ದಾರೆ ಶಾರುಖ್ ಖಾನ್ (Shah Rukh Khan, ). ಭಾರತೀಯ ಸಿನಿಮಾ ರಂಗದ ದಿ ಬೆಸ್ಟ್ ಕಲಾವಿದರು ಈ ಸಿನಿಮಾದಲ್ಲಿ ಇರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಅಷ್ಟೇ ಕುತೂಹಲ ಅಲ್ಲಿನ ಕಲಾವಿದರು ತೆಗೆದುಕೊಂಡ ಸಂಭಾವನೆಯ (Remuneration) ಮೇಲೆಯೂ ಇದೆ.
ಈ ಹಿಂದೆ ಶಾರುಖ್ ಖಾನ್ ಜೊತೆ ನಟಿಸಲು ದಕ್ಷಿಣದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathi) ಸಂಭಾವನೆಯನ್ನೇ ಪಡೆಯುತ್ತಿಲ್ಲ ಎನ್ನುವ ಸುದ್ದಿ ಹರಡಿತ್ತು. ನಿರ್ದೇಶಕ ಅಟ್ಲಿ ಹಾಗೂ ಶಾರುಖ್ ಮೇಲಿನ ಪ್ರೀತಿಗಾಗಿ ಅವರು ಉಚಿತವಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದೆಲ್ಲ ಸುಳ್ಳು ಸುದ್ದಿ ಎನ್ನುವುದು ಸದ್ಯದ ವರ್ತಮಾನ. ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿ ಸುಮೋನಾ ಚಕ್ರವರ್ತಿಗೆ ಅವಮಾನ
ಈ ಸಿನಿಮಾದಲ್ಲಿ ಸೇತುಪತಿ ನಡೆಸಲು ಬರೋಬ್ಬರಿ 21 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರಂತೆ. ಮೊದ ಮೊದಲು ವಿಜಯ್ ಸೇತುಪತಿ 15 ರಿಂದ 18 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರೆ ಎನ್ನುವುದು ಲೆಕ್ಕಾಚಾರವಾಗಿತ್ತು. ಕಮಲ್ ಹಾಸನ್ ಜೊತೆ ವಿಕ್ರಮ್ ಸಿನಿಮಾದಲ್ಲಿ ನಟಿಸಿದ ನಂತರ ಅವರ ಸಂಭಾವನೆ 20 ಕೋಟಿಗೂ ಅಧಿಕವಾಗಿದೆಯಂತೆ.
ಸೇತುಪತಿ ಅದ್ಭುತ ನಟ. ಅದರಲ್ಲಿ ಎರಡು ಮಾತಿಲ್ಲ. ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ತಕರಾರು ತೆಗೆಯುವಂಥದ್ದು ಅಲ್ಲ. ಆದರೆ, ಶಾರುಖ್ ಜೊತೆ ನಟಿಸಲು ಅಷ್ಟೊಂದು ಸಂಭಾವನೆ ಪಡೆದಿದ್ದಾರಾ ಎನ್ನುವುದು ಪ್ರಶ್ನೆ. ಈ ಸಿನಿಮಾದಲ್ಲಿ ನಯನತಾರಾ, ಪ್ರಿಯಾಮಣಿ ಹೀಗೆ ದುಬಾರಿ ತಾರೆಯರೇ ಇದ್ದಾರೆ. ಅಲ್ಲದೇ ಸೇತುಪತಿ ಈ ಸಿನಿಮಾದಲ್ಲಿ ವಿಲನ್ ರೀತಿಯ ಪಾತ್ರ ಮಾಡಿದ್ದಾರಂತೆ. ಈ ಎಲ್ಲ ಲೆಕ್ಕಾಚಾರಗಳು ಗಿರಿಕಿ ಹೊಡೆಯುತ್ತಿವೆ.
Web Stories