ಸಾಮಾನ್ಯವಾಗಿ ಅಸಾಮಾನ್ಯ ಮದ್ಯಪಾನ ವ್ಯಸನಿಗಳನ್ನು, ಕುಡಿತದಲ್ಲೇ ಮುಳುಗಿರುವವರನ್ನು ನಾವು ಪಿವೋಟ್ (Peotu) ಅಂತ ಕರೆಯುತ್ತೇವೆ. ಕುಡಿತವೇ ಅವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಅಂಥವರನ್ನು ಸರಿದಾರಿಗೆ ತರಲು ಸಾಧ್ಯವೇ? ಎಂದು ಯೋಚಿಸಿದಾಗ ಉತ್ತರ ಹೇಳುವುದು ಸ್ವಲ್ಪ ಕಷ್ಟ. ಇದೀಗ ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಕಾರ್ತೀಕ (Karthik) ಎಂಬ ಯುವ ಪ್ರತಿಭೆ ಚಲನ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಆ ಚಿತ್ರದ ಹೆಸರು ಕೂಡ ಪಿವೋಟ್.
Advertisement
ಎಂ.ಎನ್.ಲಿಖಿತ್ ಹಾಗೂ ಮರಾಠಿ ಮೂಲದ ಅಶ್ವಿನಿ ಚಾವ್ರೆ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರದ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಗಣ ರಾಜ್ಯೋತ್ಸವದ ಪ್ರಯುಕ್ತ ಈ ಚಿತ್ರದ ಸ್ನೀಕ್ ಪೀಕ್ (Sneak Peek) ಟೀಸರ್ ಜನವರಿ 26ರ ಸಂಜೆ 5-55ಕ್ಕೆ ಬಿಡುಗಡೆಯಾಗಲಿದೆ.
Advertisement
Advertisement
ಕುಡುಕರನ್ನು ಬಯ್ಯುವುದಷ್ಟೇ ನಮಗೆ ಗೊತ್ತು. ಆದರೆ ನಾವ್ಯಾರೂ ಆತ ಏಕೆ ಹಾಗಾದ, ಅದಕ್ಕೆ ಕಾರಣವಾದರೂ ಏನು ಎಂದು ಒಮ್ಮೆಯೂ ಯೋಚಿಸುವುದೇ ಇಲ್ಲ. ಒಬ್ಬ ವ್ಯಕ್ತಿ ತನ್ನ ಮನದ ನೋವನ್ನು ಮರೆಯಲು, ತನಗಾದ ಅಪಮಾನವನ್ನು ಅಥವಾ ತನ್ನ ಜೀವನದಲ್ಲಿ ನಡೆದ ಅಹಿತಕರ ಘಟನೆಯನ್ನು ಮರೆಯಲು ಕುಡಿತಕ್ಕೆ ದಾಸನಾಗಿರುತ್ತಾನೆ.
Advertisement
ಈ ಥರದ ಅನೇಕ ವಿಷಯಗಳನ್ನು ಇಟ್ಟುಕೊಂಡು ನಿರ್ದೇಶಕ ಕಾರ್ತೀಕ್ ಅವರು ಈ ಚಿತ್ರದ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಇವರು ಈಗಾಗಲೇ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಈ ಹಿಂದೆ ಪಿವೋಟ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು, ಇದೀಗ ಸ್ನೀಕ್ ಪೀಕ್ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ನೀಡಹೊರಟಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಬಿ.ಆರ್. ಹೇಮಂತ್ ಕುಮಾರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕು ಅವರ ಛಾಯಾಗ್ರಹಣ ಇರುವ ಈ ಚಿತ್ರದ ಮೂಲಕ ಇಂದಿನ ಯುವಜನಾಂಗಕ್ಕೆ ಬೇಕಾಗುವಂಥ ಮೆಸೇಜ್ ಕೂಡ ಹೇಳಿದ್ದಾರೆ. ಬರುವ ಏಪ್ರಿಲ್, ಮೇ ವೇಳೆಗೆ ಪಿವೋಟ್ ಚಿತ್ರವನ್ನು ತೆರೆಗೆ ತರಲು ನಿರ್ದೇಶಕ ಕಾರ್ತೀಕ್ ಅವರು ಪ್ಲಾನ್ ಮಾಡಿಕೊಂಡಿದ್ದಾರೆ.