ಫ್ಯಾಮಿಲಿ ಟ್ರಿಪ್ ಹೋಗೋಣ ಅಂತ ಬಂದ್ರೆ ಹೆಚ್ಚಿನವರು ದೇಗುಲಗಳಿಗೆ ಭೇಟಿ ಕೊಡುವುದನ್ನೇ ಆಯ್ಕೆ ಮಾಡುತ್ತಾರೆ. ಇತಿಹಾಸ ಪ್ರಸಿದ್ಧ ದೇವಾಸ್ಥನಗಳಿಗೆ ದಕ್ಷಿಣ ಕನ್ನಡ ಹೆಸರುವಾಸಿ. ಹೀಗಾಗಿ ಹೆಚ್ಚಿನವರು ದೇಗುಲಗಳ ಭೇಟಿಗೆಂದು ದಕ್ಷಿಣ ಕನ್ನಡ ಜಿಲ್ಲೆಯತ್ತ ಬರುತ್ತಾರೆ. ಅಂತೆಯೇ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕಟೀಲು ದುರ್ಗಾಪರಮೇಶ್ವರಿ ಹಾಗೂ ಪೊಳಲಿ ರಾಜರಾಜೇಶ್ವರಿ ದೇಗುಲಗಳಿಗೆ ಭೇಟಿ ಕೊಡುತ್ತಾರೆ. ಇದಷ್ಟೇ ಅಲ್ಲಾ ಇನ್ನೂ ಹಲವಾರು ದೇಗುಲಗಳು ಈ ಜಿಲ್ಲೆಯಲ್ಲಿವೆ. ಅವುಗಳಲ್ಲಿಯೂ ನರಹರಿ ಪರ್ವತದಲ್ಲಿರುವ ಸದಾಶಿವ ದೇಗುಲವೂ (Shree Narahari Parvatha Sadashiva Temple) ಒಂದಾಗಿದೆ. ಹಾಗಿದ್ರೆ ಈ ದೇಗುಲ ಎಲ್ಲಿದೆ..?, ಇದರ ವಿಶೇಷತೆ ಏನು ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಪುರಾಣ ಪ್ರಸಿದ್ದ ಪರ್ವತ ಕ್ಷೇತ್ರವು ಬಂಟ್ವಾಳ (Bantwal) ತಾಲೂಕಿನಲ್ಲಿದೆ. ಮಂಗಳೂರು – ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಬಿ.ಸಿ.ರೋಡ್ ಜಂಕ್ಷನ್ ತಲುಪಿದ ನಂತರ ಅಲ್ಲಿಂದ ಕೇವಲ 2 ಕಿ.ಮೀ ಕ್ರಮಿಸಿದರೆ ಈ ದೇಗುಲ ಸಿಗುತ್ತದೆ. ಇದು ಸಮುದ್ರ ಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿದೆ ಮತ್ತು ಸುಮಾರು 330 ಮೆಟ್ಟಿಲುಗಳನ್ನು ಹತ್ತಿದ ನಂತರ ಮಾತ್ರ ತಲುಪಬಹುದಾಗಿದೆ.
Advertisement
Advertisement
ಯಾವುದಕ್ಕೆ ಹೆಸರುವಾಸಿ..?: ಕರ್ನಾಟಕದ ಅತ್ಯಂತ ಪುರಾತನ ಹಾಗೂ ಜನಪ್ರಿಯಯ ದೇಗುಲಗಳಲ್ಲಿ ಒಂದಾಗಿರುವ ಈ ಕ್ಷೇತ್ರ ಶಿವನಿಗೆ ಸಮರ್ಪಿತವಾಗಿದೆ. ವಿಷ್ಣುವಿನ ಅವತಾರಗಳಾದ ನರ ಮತ್ತು ಹರಿ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರೆಂದು ನಂಬಲಾಗುತ್ತಿದೆ. ಇನ್ನು ಈ ದೇವಾಲಯವು ಕೊಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಶಂಕ (ಶಂಖ), ಚಕ್ರ (ಚಕ್ರ), ಗಧಾ (ಭಾರೀ ಆಯುಧ) ಮತ್ತು ಪದ್ಮ (ಕಮಲ) ಆಕಾರದ ಕೊಳಗಳಿವೆ. ಆಟಿ ಅಮಾವಾಸ್ಯೆಯ ದಿನದಂದು ಇಂದು ವಿಶೇಷ ತೀರ್ಥ ಸ್ನಾನ ನಡೆಯುತ್ತದೆ. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ದೇವಸ್ಥಾನದ ತೀರ್ಥ ಬಾವಿಗಳಾದ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಿಗೆ ವೀಳ್ಯ ಅಡಿಕೆಯ ಬಾಗಿನ ಬಿಟ್ಟು ತೀರ್ಥ ನೀರು ಮಿಂದು ಪುನೀತರಾಗುತ್ತಾರೆ.
Advertisement
ಬೆಟ್ಟದ ತುದಿಗೆ ವಾಹನಗಳು ಹೋಗುವುದಿಲ್ಲ. ಹೀಗಾಗಿ ಶಿಖರವನ್ನು ತಲುಪಲು ಸುಮಾರು 160 ಮೆಟ್ಟಿಲುಗಳನ್ನು ಹತ್ತಬೇಕು. ಬೆಟ್ಟದ ತುದಿಯಲ್ಲಿ ಪ್ರಕೃತಿಯು ಅತ್ಯುತ್ತಮವಾಗಿದೆ. ತಂಪಾದ ಗಾಳಿಯೊಂದಿಗೆ ಸುತ್ತಮುತ್ತಲಿನ ವಿಹಂಗಮ ನೋಟವನ್ನು ಆನಂದಿಸಬಹುದು. ಸುಳ್ಯಮಲೆ, ಬೆಳ್ಳಮಾಲ್ ಮತ್ತು ಕೆದಂಜಮಲೆಯ ನೋಟವು ಬೆಟ್ಟದ ಮೇಲಿನಿಂದ ಗೋಚರಿಸುತ್ತದೆ.
Advertisement
ಬಾವಿಯಿಂದ ನೀರು ಸೇದುವಂತಹ ತೆಂಗು ನಾರಿನಿಂದ ಮಾಡಿದ ಹುರಿ ಹಗ್ಗವನ್ನು ದೇಗುಲಕ್ಕೆ ಹರಕೆಯ ರೂಪದಲ್ಲಿ ಒಪ್ಪಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಜೊತೆಗೆ ಇಲ್ಲಿಗೆ ಬಲಿವಾಡು ಅರ್ಪಿಸುವುದರಿಂದ ಸರ್ವ ಭಯ ನಿವಾರಣೆ, ಅಸ್ತಮಾ ವ್ಯಾಧಿ, ತೊಟ್ಟಿಲು ಸೇವೆಯಿಂದ ಸಂತಾನ ಭಾಗ್ಯ ಹೀಗೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ದೇವರಿಗೆ ಎಳನೀರನ್ನು ಕೂಡ ಹರಕೆಯ ರೂಪದಲ್ಲಿ ಭಕ್ತರು ಸಮರ್ಪಿಸುತ್ತಾರೆ.
ಇತಿಹಾಸ ಏನು ಹೇಳುತ್ತೆ..?: ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಮಾಡಿದ ಪಾಪಗಳಿಂದ ತಮ್ಮನ್ನು ಮುಕ್ತಗೊಳಿಸಲು ಶ್ರೀ ಕೃಷ್ಣ, ಅರ್ಜುನ ಜೊತೆಯಲ್ಲಿ ಇಲ್ಲಿ ತಪಸ್ಸು ಮಾಡಿದರು. ಕೃಷ್ಣ ತನ್ನ ಭೇಟಿಯ ಸಂಕೇತವಾಗಿ ಶಂಖ, ಚಕ್ರ, ಗಧಾ ಮತ್ತು ಪದ್ಮಗಳನ್ನು ಕೆತ್ತಿಸಿದನು. ಈ 4 ಕೊಳಗಳು ಇಂದಿಗೂ ಇವೆ. ಅರ್ಜುನನು ಈ ಪವಿತ್ರ ಕೊಳಗಳಲ್ಲಿ ಸ್ನಾನ ಮಾಡುವ ಮೂಲಕ ತನ್ನನ್ನು ತಾನೇ ಶುದ್ಧೀಕರಿಸಿದನು. ಬಳಿಕ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸಿದನು. ಈ ಹಿನ್ನೆಲೆಯಲ್ಲಿ ‘ನರಹರಿ ಪರ್ವತ ಸದಾಶಿವ ದೇವಾಲಯ’ ಎಂಬ ವಿಶಿಷ್ಟ ಹೆಸರು ಬಂದಿದೆ. ಇದನ್ನೂ ಓದಿ: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?
ಅದ್ಭುತವಾದ ನೋಟ: ಬೆಟ್ಟದ ಮೇಲೆ ನಿಂತರೆ ಕಾಣುವ ವಿಹಂಗಮ ನೋಟವು ಗಂಟೆಗಳ ಕಾಲ ಅಲ್ಲೇ ನಿಲ್ಲುವಂತೆ ಮಾಡುತ್ತದೆ. ಅಲ್ಲದೆ ಪೂರ್ವ ಭಾಗದಲ್ಲಿ ಸುಳ್ಯಮಲೆ, ಬಲ್ಲಮಲೆ ಮತ್ತು ದಕ್ಷಿಣ ಭಾಗದಲ್ಲಿ ಕಡೆಂಜಾಮಲೆಗಳನ್ನು ಕಾಣಬಹುದು. ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಇನ್ನೊಂದು ಬದಿಯಲ್ಲಿ ಮಂಗಳೂರು ಹಾಸನ ರೈಲುಮಾರ್ಗ, ಆಕರ್ಷಕವಾದ ನೇತ್ರಾವತಿ ನದಿಯ ನೋಟವು ಸೊಗಸಾಗಿದೆ. ಭವ್ಯವಾದ ಸೂರ್ಯಾಸ್ತದ ನಂತರ, ಸಮೀಪದ ಪಟ್ಟಣಗಳಾದ ಪಾಣೆ ಮಂಗಳೂರು, ಕಲ್ಲಡ್ಕ ಮತ್ತು ಬಿ.ಸಿ.ರೋಡ್‍ಗಳ ದೀಪಗಳು ನಾವು ಸ್ವರ್ಗದಿಂದ ನಕ್ಷತ್ರಗಳನ್ನು ನೋಡುತ್ತಿದ್ದೇವೆ ಎಂದೇ ನಮಗೆ ಭಾಸವಾಗುವಂತಿರುತ್ತದೆ. ಇದನ್ನೂ ಓದಿ: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ
ಹೋಗುವುದು ಹೇಗೆ..?: ಮಂಗಳೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀ ಯ ಹೆದ್ದಾರಿ 48ರಲ್ಲಿ 28 ಕಿಲೋಮೀಟರ್ ಪೂರ್ವಕ್ಕೆ ಸಾಗಿದರೆ ನರಹರಿ ಸದಾಶಿವ ದೇವಸ್ಥಾನ ಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರದಲ್ಲಿರುವ ಬಿಸಿ ರೋಡ್ ಜಂಕ್ಷನ್ ನಿಂದ 4 ಕಿಲೋಮೀಟರ್ ದೂರಸಾಗಿದರೆ ರಸ್ತೆಯ ಬಲಬದಿಗೆ ನರಹರಿ ಪರ್ವತ ಕಾಣ ಸಿಗುತ್ತದೆ. ಅಲ್ಲಿಂದ 1 ಕಿಲೋಮೀಟರ್ ಪ್ರಯಾಣಿಸಿ ನಂತರ 333 ಮೆಟ್ಟಿಲುಗಳನ್ನು ಹತ್ತಬೇಕು. ದೇವಾಲಯವು ಚಿಕ್ಕದಾಗಿದೆ ಮತ್ತು ಸರಳವಾಗಿದೆ. ಮುಂಜಾನೆ, ಬೆಟ್ಟದ ತುದಿಯಿಂದ ಸೂರ್ಯೋದಯದ ಸೌಂದರ್ಯವನ್ನು ನಾವು ನೋಡಬಹುದು. ಒಟ್ಟಿನಲ್ಲಿ ಸುತ್ತ ಹಚ್ಚ ಹಸಿರಿನಿಂದ ಕೂಡಿರುವ ಪರಿಸರ ಮಧ್ಯ ಇರುವ ಈ ದೇವಾಲಯಕ್ಕೆ ನೀವೂ ಒಂದು ಬಾರಿ ಭೇಟಿ ಕೊಡಿ.