ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ ಸ್ತ್ರೀಯರು (Women) ತಮ್ಮ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯೌವನದಿಂದ ವೃದ್ಧಾಪ್ಯದವರೆಗೂ ಹೆಣ್ಣು ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಾಳೆ. ಅದರ ಹಿಂದೆ ಇರುವುದೇ ಹಾರ್ಮೋನ್ (Hormones). ಈ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾದರೆ ಒಂದರ ಹಿಂದೊಂದು ಸಮಸ್ಯೆಯ ಸುಳಿಗೆ ಹೆಣ್ಣು ಸಿಲುಕಿ ಒದ್ದಾಡುತ್ತಾಳೆ.
ಹೌದು. ಇತ್ತೀಚಿನ ದಿನಗಳಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಪಿಸಿಓಡಿ ಕೂಡ ಒಂದು. ಅಪರಿಪಕ್ವವಾದ ಅಂಡಾಣು ಗರ್ಭಾಶಯದ ಎರಡೂ ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಓಡಿ ಎಂದು ಕರೆಯುತ್ತಾರೆ.
Advertisement
Advertisement
ಏನಿದು ಪಿಸಿಓಡಿ?: ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (PCOD) ಒಂದು ಹಾರ್ಮೋನ್ ಸ್ಥಿತಿ. ಹಾರ್ಮೋನುಗಳ ಅಸಮತೋಲನದಿಂದಾಗಿ ಪಿಸಿಓಡಿ ಕಂಡುಬರುತ್ತದೆ. ಇದು ಹೆರಿಗೆಯ ವಯಸ್ಸಿನ ಅಂದರೆ 12 ರಿಂದ 45 ವರ್ಷದವರೆಗಿನ ಸುಮಾರು 5 ರಿಂದ 10% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಇದು ಸುಮಾರು 9% ರಿಂದ 22% ಭಾರತೀಯ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಚೀನಾ ಮತ್ತು ಶ್ರೀಲಂಕಾದಲ್ಲಿ ಈ ಸಂಖ್ಯೆಗಳು 2% ರಿಂದ 7% ರಷ್ಟಿವೆ. ಪಿಸಿಓಡಿ, ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (PCOS) ಎಂದೂ ಸಹ ಕರೆಯಲ್ಪಡುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಮಧುಮೇಹ, ಸ್ಥೂಲಕಾಯತೆ, ಹೃದ್ರೋಗಗಳು ಮತ್ತು ಅಧಿಕ ಕೊಲೆಸ್ಟ್ರಾಲ್‍ನಂತಹ ಹೆಚ್ಚಿನ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು.
Advertisement
Advertisement
ಸಾಮಾನ್ಯವಾಗಿ ಮಹಿಳೆಯರಲ್ಲಿ 28-30 ದಿನಗಳ ಅವಧಿಗೊಮ್ಮೆ ಋತುಚಕ್ರವಾಗುವುದನ್ನು ಕಾಣಬಹುದು. ಮುಟ್ಟಾದ 11-14 ನೇ ದಿನಗಳ ಮಧ್ಯೆ ಯಾವುದಾದರು ಅಂಡಕೋಶದಿಂದ ಅಂಡಾಣುವು ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಮತ್ತು ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೇ ಅಲ್ಲಿಯೇ ಅಪರಿಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಗಳಂತೆ ಅಂಡಕೋಶದ ಒಳ ಪದರ ಮೇಲೆ ಉಳಿದು ಹೋಗುತ್ತದೆ.
ಲಕ್ಷಣಗಳು: ಪ್ರತಿ ತಿಂಗಳ ಋತುಚಕ್ರದಲ್ಲಿ ಏರುಪೇರು ಉಂಟಾಗುತ್ತದೆ. ಋತುಚಕ್ರ ಸರಿಯಾಗಿ ಆದರೂ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದಿರುವುದು. ಸಾಮಾನ್ಯವಾಗಿ ಋತುಚಕ್ರದ ಸಂದರ್ಭದಲ್ಲಿ 4-5 ದಿನ ರಕ್ತಸ್ರಾವ ಆಗುತ್ತದೆ. ಆದರೆ ಇಲ್ಲಿ ರಕ್ತಸ್ರಾವು ಹೆಚ್ಚಿನ ದಿನಗಳವರೆಗೆ ಇರುವುದು. ಎರಡು ಋತುಚಕ್ರದ ಮಧ್ಯೆ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳುವುದು. ಋತುಚಕ್ರ ಕಾಣಿಸಿಕೊಂಡಾಗ ಅತಿ ತೀವ್ರವಾದ ನೋವು ಕಾಣಿಸಿಕೊಳ್ಳುವುದು. ಈ ಸಮಸ್ಯೆ ಇರುವ ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಕೂಡ ತೊಡಕು ಉಂಟಾಗುವುದು.
ಬಹಳ ತಿಂಗಳಾದರೂ ಋತುಚಕ್ರ ಕಾಣಿಸಿಕೊಳ್ಳದಿರುವುದು. ತೂಕ ಹೆಚ್ಚಾಗುವುದು, ಕೂದಲು ಉದುರುವುದು, ಮುಖದ ಮೇಲೆ, ಶರೀರದ ಮೇಲೆ ಅಧಿಕವಾಗಿ ಕೂದಲು ಕಾಣಿಸಿಕೊಳ್ಳುವುದು ಹಾಗೂ ಬಂಜೆತನ ಇವು ಪಿಸಿಓಡಿ ಲಕ್ಷಣಗಳಾಗಿವೆ.
ಪಿಸಿಓಡಿ ಬರಲು ಕಾರಣಗಳೇನು?: ಹಾರ್ಮೋನ್ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಒತ್ತಡ, ವ್ಯಾಯಾಮದ ಕೊರತೆ ಹಾಗೂ ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಕೂಡ ಪಿಸಿಓಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿರುತ್ತದೆ.
ಮುಂಜಾಗ್ರತೆ ಏನು?: ಜೀವನ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು. ಸರಿಯಾದ ವ್ಯಾಯಾಮದಿಂದ ಹಾರ್ಮೋನ್‍ಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಹಾಗೂ ಸಮತೋಲನ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿದುಕೊಳ್ಳಬಹುದು.
ಆಹಾರ ಕ್ರಮ ಹೇಗಿರಬೇಕು?: ನೈಸರ್ಗಿಕ, ಸಂಸ್ಕರಿಸದ ಆಹಾರ, ಪಾಲಕ್, ಕೇಲ್ ಮತ್ತು ಇತರ ಎಲೆಗಳ ತರಕಾರಿಗಳು, ಬ್ರೊಕೊಲಿ ಮತ್ತು ಹೂಕೋಸು, ಬೀಜಗಳು ಮತ್ತು ದ್ವಿದಳ ಧಾನ್ಯಗಳು, ಮೀನು, ಕಾಳುಗಳನ್ನು ಸೇವಿಬೇಕು.
Web Stories