ಸಲ್ಮಾನ್ ಖಾನ್ ಹತ್ಯೆಯ ಸಂಚು ಕುರಿತಂತೆ ದಿನಕ್ಕೊಂದು ಶಾಕಿಂಗ್ ಸುದ್ದಿಗಳು ಬರುತ್ತಿವೆ. ನಿನ್ನೆಯಷ್ಟೇ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡವೇ ಸಲ್ಮಾನ್ ಖಾನ್ ಹತ್ಯೆಕ್ಕೆ ಸಿದ್ಧತೆ ಮಾಡಿಕೊಂಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಇವತ್ತು ಮತ್ತೊಂದು ಸುದ್ದಿಯನ್ನು ಹೊರಹಾಕಿದ್ದಾರೆ. ಸಲ್ಮಾನ್ ಕೊಲ್ಲಲು ಗ್ಯಾಂಗ್ ಸ್ಟರ್ ಲಾರೆನ್ಸ್ ಶಾರ್ಪ್ ಶೂಟರ್ ಒಬ್ಬರನ್ನು ನೇಮಕ ಮಾಡಿದ್ದನಂತೆ. ಸಲ್ಮಾನ್ ಮನೆ ಮುಂದಿನ ಅಪಾರ್ಟ್ ಮೆಂಟ್ ನಲ್ಲೇ ಆ ಶಾರ್ಪ್ ಶೂಟರ್ ಇದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಈ ಹಿಂದೆ ಅನಾಮಧೇಯ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರಿಗೆ ಪತ್ರವೊಂದನ್ನು ಬರೆದು, ಸಲ್ಮಾನ್ ಖಾನ್ ಕೊಲ್ಲುವ ಬೆದರಿಕೆ ಹಾಕಿದ್ದ. ಇದರ ಬೆನ್ನೆಲ್ಲೇ, ಮುಂಬೈ ಪೊಲೀಸ್ ತೀವ್ರ ತನಿಖೆ ಶುರು ಮಾಡಿತ್ತು. ಜೈಲಿನಲ್ಲಿರುವ ಲಾರೆನ್ಸ್ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲಿಂದ ಒಂದೊಂದೇ ಶಾಕಿಂಗ್ ಸುದ್ದಿಗಳೂ ರಿವೀಲ್ ಆಗುತ್ತಿವೆ. ಅದರಲ್ಲೂ ವಿಕ್ರಮ್ ಬ್ರಾರ್ ಎಂಬ ವ್ಯಕ್ತಿಯ ಕುರಿತು ಪೊಲೀಸ್ ರಿಗೆ ಮಾಹಿತಿ ಸಿಗುತ್ತಿದ್ದಂತೆಯೇ ಇವನೇ ಶಾರ್ಪ್ ಶೂಟರ್ ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ
Advertisement
Advertisement
ರಾಷ್ಟ್ರೀಯ ಮಾಧ್ಯಮವೊಂದು ಸುದ್ದಿ ಮಾಡಿದಂತೆ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ಕೊಲೆ ಮಾಡಲೆಂದೇ ಸಲ್ಮಾನ್ ಖಾನ್ ವಾಸಿಸುವ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ ಮುಂದೆ ಶಾರ್ಪ್ ಶೂಟರ್ ಅನ್ನು ನೇಮಿಸಿದ್ದ ಎಂಬ ಮಾಹಿತಿಯನ್ನು ಹೊರಹಾಕಿದೆ. ಆ ವ್ಯಕ್ತಿ ವಿಕ್ರಮ್ ಬ್ರಾರ್ ಆಗಿದ್ದ ಎಂದು ಅದು ವರದಿ ಮಾಡಿದೆ. ಸಲ್ಮಾನ್ ಖಾನ್ ಮನೆಯಿಂದ ಹೊರಟಾಗ, ಅವರ ಕಾರನ್ನು ಚೇಸ್ ಮಾಡಿ, ಕೊಲ್ಲುವ ಸಂಚು ರೂಪಿಸಿದ್ದರು ಎಂದು ಅದು ವರದಿ ಮಾಡಿದೆ.