ನವದೆಹಲಿ: ಸ್ಪಾವೊಂದರ ಜಾಹೀರಾತು ಬೋರ್ಡ್ ನಲ್ಲಿ ಸೆಕ್ಸ್ ರಾಕೆಟ್ ಪ್ರಚಾರ ಮಾಡಿರುವ ವಿಲಕ್ಷಣ ಘಟನೆ ರಾಷ್ಟ್ರ ರಾಜದಾನಿಯಲ್ಲಿ ಬೆಳಕಿಗೆ ಬಂದಿದೆ.
ಸೆಕ್ಟ್ ರಾಕೆಟ್ ಪ್ರಚಾರ ಮಾಡಿರುವ ಜಾಹೀರಾತು ಬೋರ್ಡ್ ವೀಡಿಯೋವನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಅಲ್ಲದೆ ದೆಹಲಿ ಮುನ್ಸಿಪಲ್ ಕಾಪೋರೇಷನ್ ಮತ್ತು ದೆಹಲಿ ಪೊಲೀಸರು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವೀಡಿಯೋದಲ್ಲಿ ಏನಿದೆ..? ಎಲ್‍ಇಡಿ ಬೋರ್ಡ್ ನಲ್ಲಿ ಆಕ್ಷೇಪಾರ್ಹ ಜಾಹೀರಾತು ಪ್ರದರ್ಶಿಸಿರುವುದನ್ನು ಕಾಣಬಹುದಾಗಿದೆ. ಸೆಕ್ಸ್ ರಾಕೆಟ್‍ನಡೆಯುತ್ತಿದೆ ಎಂದು ಬೋರ್ಡ್ ನಲ್ಲಿದೆ. ರಷ್ಯನ್ @ ರೂ. 20,000.. ಸೆಕ್ಸ್ ಮಾರ್ಕೆಟ್, ರೂ. 2000 ನಲ್ಲಿ ಎಂದೆಲ್ಲ ಬರೆಯಲಾಗಿದೆ.
शर्मनाक! दिल्ली के स्पा में सैक्स रैकेट इतना बढ़ गया है की स्पा वाले धड़ल्ले से ये धंधा चला रहे हैं। MCD और @DelhiPolice का स्पा को बिल्कुल डर नही है! @DelhiPolice को न सिर्फ़ ये स्पा तुरंत बंद करवाना चाहिए बल्कि अपने लोकल स्टाफ़ के ऊपर भी कार्यवाही करनी चाहिए! हद्द है! https://t.co/kGmdtMbU6a
— Swati Maliwal (@SwatiJaiHind) April 7, 2022
ಸ್ಪಾಗಳು ಸೆಕ್ಸ್ ರಾಕೆಟ್ ನಡೆಸುತ್ತಿರುವುದು ನಾಚಿಗೇಡಿನ ವಿಚಾರ. ದೆಹಲಿ ಮಹಿಳಾ ಆಯೋಗ ಮತ್ತು ಪೊಲೀಸರಿಗೆ ಇವರು ಹೆದರುತ್ತಿಲ್ಲ. ಹೀಗಾಗಿ ಬೀದಿಯಲ್ಲೇ ರಾಜರೋಷವಾಗಿ ಇಂತಹ ಪ್ರಚಾರ ಕೊಡುತ್ತಿದ್ದಾರೆ ಎಂದು ಟ್ವೀಟ್‍ನಲ್ಲಿ ಆಕ್ರೊಶ ಹೊರಹಾಕಿದ್ದಾರೆ.
Open advertisement in Paschim Vihar, New Delhi. pic.twitter.com/JjEXrQZvLq
— Narवीर ???? (@LTEorNR) April 7, 2022
ಒಟ್ಟಿನಲ್ಲಿ ಕೆಲವರು ಜಾಹೀರಾತನ್ನು ಟೀಸಿಕದರೆ ಇನ್ನೂ ಕೆಲವರು ಸ್ಥಳೀಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಮತ್ತೂ ಕೆಲವರು ಇದೊಮದು ನಕಲಿ ವೀಡಿಯೋ ಆಗಿದ್ದು, ಸುಳ್ಳು ಸುದ್ದಿ ಹಬ್ಬಿಸಲು ಈ ರೀತಿ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.