ಬೆಂಗಳೂರು: ರಾಷ್ಟ್ರ ರಾಜಕಾರಣಕ್ಕೆ ಬಿ.ಎಸ್ ಯಡಿಯೂರಪ್ಪ ನೇಮಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಬಿಜೆಪಿ ಹೈಕಮಾಂಡ್ ಹೊಸ ದಿಕ್ಕು ತೋರಿಸಿದೆ. ಬಿಜೆಪಿಯಲ್ಲಿ ಬಿಎಸ್‍ವೈ ನಾಮಬಲ ಮತ್ತು ಸಹಕಾರ ಬಲದಿಂದ ಚುನಾವಣಾ ತಂತ್ರಗಾರಿಕೆಗಳನ್ನು ಬದಲಾಯಿಸಿಕೊಳ್ಳಲು ಮುಂದಾಗಿದೆ.
Advertisement
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸೈಲೆಂಟ್ ಆಗಿದ್ದ ಇಲ್ಲಿಯವರೆಗಿನ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂದುತ್ವ ಅಜೆಂಡಾದ ರಾಜಕಾರಣವೇ ಮೇಲುಗೈ ಸಾಧಿಸಿತ್ತು. ಸರ್ಕಾರ, ಪಕ್ಷಗಳೂ ಸ್ಟ್ರಾಂಗ್ ಹಿಂದುತ್ವದ ಹಾದಿಯಲ್ಲಿ ಸಾಗುತ್ತಿದ್ದವು. ಆದರೆ ಇನ್ಮುಂದೆ ರಾಜಾಹುಲಿ ಕಂಬ್ಯಾಕ್‍ನಿಂದ ಹಿಂದುತ್ವದ ಅಜೆಂಡಾ ಬದಲಿಗೆ ಅಭಿವೃದ್ಧಿ, ಜಾತಿ ಸಮೀಕರಣ ಮಂತ್ರಗಳನ್ನೇ ಮುಂದಿಟ್ಟು ಯಡಿಯೂರಪ್ಪ ತಮ್ಮದೇ ತಂತ್ರಗಾರಿಕೆ ನಡೆಸುತ್ತಾರೆ ಎನ್ನಲಾಗುತ್ತಿದೆ.
Advertisement
Advertisement
ರಾಜಾಹುಲಿ `ಹೊಸ’ ತಂತ್ರ..!: ಹಿಂದುತ್ವ ಅಜೆಂಡಾ ಬದಲಿಗೆ ಅಭಿವೃದ್ಧಿ, ಜಾತಿ ಸಮೀಕರಣ ಮಂತ್ರ ಜಪಿಸಲಿದ್ದಾರೆ. ನಿರಂತರ ರಾಜ್ಯ ಪ್ರವಾಸ, ಕಾರ್ಯಕರ್ತರ ಜೊತೆ ನಿರಂತರ ಒಡನಾಟ ನಡೆಸುವ ಸಾಧ್ಯತೆ. ರಾಜ್ಯ ಜನತೆಗೆ ಸರ್ಕಾರದ ಯೋಜನೆಗಳ ಮನವರಿಕೆ ಮಾಡಿಕೊಡುವುದು. ಕಾಂಗ್ರೆಸ್‍ನ ಹುಳುಕುಗಳ ಕುರಿತು ಪ್ರಚಾರ ಮಾಡುವುದು. ಲಿಂಗಾಯತ, ಒಕ್ಕಲಿಗ, ಹಿಂದೂ ಮತಗಳ ಮೇಲೆ ಗಮನ ಇರಿಸುವುದು.
Advertisement
ಇತ್ತ ಯಡಿಯೂರಪ್ಪರನ್ನು ರಾಷ್ಟ್ರ ರಾಜಕಾರಣಕ್ಕೆ ಹೈಕಮಾಂಡ್ ನೇಮಿಸಿರೋದು ಬಿಎಸ್‍ವೈ ಪಾಲಿಗೆ ಸಿಹಿ, ಕಾಂಗ್ರೆಸ್ ಪಾಲಿಗೆ ಕಹಿಯಂತಾಗಿದೆ. ಯಾಕಂದ್ರೆ ಕಾಂಗ್ರೆಸ್‍ನ ಲಿಂಗಾಯತ ಅಭಿಯಾನಕ್ಕೆ ಚೆಕ್‍ಮೇಟ್ ಕೊಟ್ಟಂತಾಗಿದೆ. ಯಡಿಯೂರಪ್ಪರನ್ನ ಕಣ್ಣೀರು ಹಾಕಿಸಿ ಸಿಎಂ ಗದ್ದುಗೆಯಿಂದ ಕೆಳಗಿಳಿಸಿದ್ದರು. ಹೀಗಂತ ಹೇಳಿಕೊಂಡು ಆಗಸ್ಟ್ 1ರಿಂದ ಉತ್ತರ ಕರ್ನಾಟಕ ಪ್ರವಾಸಕ್ಕೆ ಎಂ.ಬಿ ಪಾಟೀಲ್ ಮುಂದಾಗಿದ್ದರು. ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್
ಪ್ರಚಾರ ಸಮಿತಿ ಅಧ್ಯಕ್ಷರ ಮೂಲಕ ಲಿಂಗಾಯತ ದಾಳ ಉರುಳಿಸಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಬಿಜೆಪಿಯ ಈಗಿನ ನಡೆಯಿಂದ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಆಗುವ ಆತಂಕ ಎದುರಾಗಿದೆ. ಜಾತಿ ಸಮ್ಮಿಕರಣದಲ್ಲಿ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಲು ಕಾಂಗ್ರೆಸ್ ಹಾಕಿಕೊಂಡಿದ್ದ ತಂತ್ರಗಾರಿಕೆಗೆ ಇದರಿಂದ ದೊಡ್ಡ ಮಟ್ಟದ ಹಿನ್ನಡೆ ಆಗಿದೆ ಎನ್ನಲಾಗುತ್ತಿದೆ.
`ಕೈ’ ಲಿಂಗಾಯತ ಅಭಿಯಾನಕ್ಕೆ ಚೆಕ್‍ಮೇಟ್..!?: ಕಾಂಗ್ರೆಸ್‍ನ ಲಿಂಗಾಯತ ಸಮುದಾಯ ಅಭಿಯಾನ ಸಿದ್ಧತೆಗೆ ಅಡ್ಡಿ. ಪಕ್ಷದಲ್ಲಿ ಬಿಎಸ್‍ವೈರನ್ನು ನಿರ್ಲಕ್ಷ್ಯಿಸಲಾಗಿದೆ. ಹಾಗೂ ಲಿಂಗಾಯತ ನಾಯಕರನ್ನು ಸರಿಯಾಗಿ ನಡೆಸಿಕೊಳ್ತಿಲ್ಲ ಅಂತ ಹೇಳಲು ಕಾಂಗ್ರೆಸ್ ಮುಂದಾಗಿತ್ತು. ಪದೇ ಪದೇ ಡಿಕೆಶಿ, ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ಅವರು ಬಿಎಸ್‍ವೈ ಕಣ್ಣೀರನ್ನೇ ಪ್ರಸ್ತಾಪಿಸುತ್ತಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಚುನಾವಣಾ ತಂತ್ರಕ್ಕೆ ಶಾಕ್ ಕೊಟ್ಟಿದ್ದು, ಲಿಂಗಾಯತ ನಾಯಕನಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ ಎಂಬ ಸಂದೇಶ ರವಾನೆ ಮಾಡಿದೆ.