– ಮಡಿಕೇರಿಯಲ್ಲಿ ಕಲ್ಲೆಸೆದ ಮೂವರ ಬಂಧನ
ಮಂಡ್ಯ/ಮಡಿಕೇರಿ: ಟಿಪ್ಪು ಜಯಂತಿ ದಿನ ನಿಷೇಧಾಜ್ಞೆ ಉಲ್ಲಂಘಿಸಿ ಆಟಾಟೋಪ ಪ್ರದರ್ಶಿಸಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್ ರ್ಯಾಲಿ, ತ್ರಿಬಲ್ ರೈಡಿಂಗ್, ಪೊಲೀಸರೊಂದಿಗೆ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶ್ರೀರಂಗಪಟ್ಟಣದಲ್ಲಿ ಒಟ್ಟು ಏಳು ಕೇಸ್ ದಾಖಲಾಗಿದೆ. ನವೆಂಬರ್ 10ರಂದು ಟಿಪ್ಪು ಜಯಂತಿಯಂದು ಟಿಪ್ಪು ಸಮಾಧಿ ಇರುವ ಶ್ರೀರಂಗಪಟ್ಟಣ ಪಶ್ಚಿಮ ವಾಹಿನಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು.
Advertisement
Advertisement
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಆದರೂ ಬೈಕ್‍ನಲ್ಲಿ ಜಾಥಾ ಮೂಲಕ ಬಂದಿದ್ದ ಟಿಪ್ಪು ಅಭಿಮಾನಿಗಳು ತಮ್ಮನ್ನು ತಡೆದಿದ್ದ ಪೊಲೀಸ್ರಿಗೆ ಅವಾಜ್ ಹಾಕಿದ್ದರು. ಟಿಪ್ಪು ಜಯಂತಿ ದಿನದ ದೃಶ್ಯಾವಳಿ ಆಧರಿಸಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಲಾಗಿದೆ.
Advertisement
ಇನ್ನು ಮಡಿಕೇರಿಲ್ಲಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಕಟ್ಟೆಕಲ್ಲು ಬಳಿ ನವೆಂಬರ್ 10ರಂದು ಅಂದ್ರೆ ಟಿಪ್ಪು ಜಯಂತಿ ದಿನ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಬೈಕಿನಲ್ಲಿ ಬಂದ ನಾಲ್ವರು ಕೆಎ-09-ಎಫ್ -5205 ನಂಬರಿನ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಬಸ್ಸಿನ ಗಾಜು ಪುಡಿ ಪುಡಿಯಾಗಿತ್ತು. ಕಲ್ಲು ತೂರಾಟದ ವೇಳೆ ಬಸ್ ನಲ್ಲಿದ್ದ ಚಾಲಕ ರಘು ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಧೀಂದ್ರ, ಉಮೇಶ್, ಅಕ್ಷಯ್, ನವೀನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಟಿಪ್ಪು ಜಯಂತಿಗೆ ಮಡಿಕೇರಿಯಲ್ಲಿ ತೀವ್ರ ವಿರೋಧ – ಅಂಗಡಿಗಳು ಬಂದ್, ಮುಖ್ಯರಸ್ತೆಗೆ ಮರ ಕಡಿದು ಆಕ್ರೋಶ https://t.co/OyNqOQ5g82 #Madikeri #TipuJayanthi pic.twitter.com/DUTNh2TxHA
— PublicTV (@publictvnews) November 10, 2017
ಟಿಪ್ಪು ಜಯಂತಿ ವಿರೋಧಿಸಿ KSRTC ಬಸ್‍ಗೆ ಕಲ್ಲು- ಶಾಸಕ ಅಪ್ಪಚ್ಚುರಂಜನ್ ಸೇರಿ ಹಲವರ ಬಂಧನ https://t.co/LbgZWuSeFU#Madikeri #TippuJayanthi #Protest #StonePelting #KSRTC pic.twitter.com/z7iKCmGyV9
— PublicTV (@publictvnews) November 10, 2017