ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ತಮಿಳಿನ ನಟಿಯೊಬ್ಬರು ಗುರುತರ ಆರೋಪ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರು ಟ್ವೀಟ್ ಕೂಡ ಮಾಡಿದ್ದರು. ಇದೀಗ ತಾವು ಮಾಡುತ್ತಿರುವ ಆರೋಪಕ್ಕೆ ತಮ್ಮ ಬಳಿ ಆಡಿಯೋ ಮತ್ತು ವಿಡಿಯೋ ಸಾಕ್ಷಿ ಇರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಣ್ಣಾಮಲೈ ಕಳಪೆ ವ್ಯಕ್ತಿತ್ವದವನು ಆ ಕಾರಣದಿಂದಾಗಿಯೇ ತಾವು ಬಿಜೆಪಿಯನ್ನೂ ತೊರೆಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸದ್ಯ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ರೀತಿಯ ಪಕ್ಷವನ್ನು ಕಟ್ಟುತ್ತಿದ್ದಾರೆ. ಮುಂದಿನ ಚುನಾವಣೆಗೆ ಭಾರೀ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿಜೆಪಿ ಸೇರಿಕೊಂಡಿದ್ದ ನಟಿ ಗಾಯತ್ರಿ ರಘುರಾಮ್ ಹಲವು ಆರೋಪಗಳನ್ನು ಮಾಡಿದ್ದಾರೆ. ‘ಅಣ್ಣಾಮಲೈ ಅವರ ಮತ್ತೊಂದು ಮುಖವನ್ನು ಬಹಿರಂಗ ಪಡಿಸುವಂತಹ ವಿಡಿಯೋ ಮತ್ತು ಆಡಿಯೋ ನನ್ನ ಬಳಿ ಇವೆ. ಅವುಗಳನ್ನು ಪೊಲೀಸರಿಗೆ ನೀಡಲು ನಾನು ತಯಾರಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ತೆಲುಗಿನ ಖ್ಯಾತ ನಟಿಯ ಗಂಡನ ಬಂಧನ
ಅಣ್ಣಾಮಲೈ ಅವರಿಂದಾಗಿ ತಾವು ಸಾಕಷ್ಟು ನೊಂದುಕೊಂಡಿರುವುದಾಗಿಯೂ ಹೇಳಿರುವ ನಟಿ, ಈ ಹಿಂಸೆಯನ್ನು ಅನುಭವಿಸುವುದಕ್ಕಿಂತ ಪಕ್ಷಬಿಟ್ಟು ಆಚೆ ಬರುವುದೇ ಒಳ್ಳೆಯದು ಎಂದಿದ್ದಾರೆ. ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ತಾವು ಪಕ್ಷ ಬಿಟ್ಟರೂ ನರೇಂದ್ರ ಮೋದಿ ಅವರು ತಮಗೆ ಮಾದರಿಯಾಗಿಯೇ ಇರುತ್ತಾರೆ ಎಂದೂ ಅವರು ಮಾತನಾಡಿದ್ದಾರೆ.
ಅಣ್ಣಾಮಲೈ ವಿರುದ್ಧ ದೂರು ನೀಡುವುದಕ್ಕಾಗಿಯೂ ಅವರು ಸಿದ್ಧತೆ ಮಾಡಿಕೊಂಡಿದ್ದಾರಂತೆ. ಆರೋಪಕ್ಕೆ ಬೇಕಾದ ಎಲ್ಲ ಸಾಕ್ಷಿಗಳು ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿರುವ ಗಾಯತ್ರಿ, ಸದ್ಯದಲ್ಲೇ ಅವುಗಳನ್ನು ಪೊಲೀಸರ ಮುಂದೆ ಇಡುವುದಾಗಿಯೂ ತಿಳಿಸಿದ್ದಾರೆ. ಈ ವಿಷಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೇ ದೊಡ್ಡ ಮಟ್ಟದಲ್ಲೇ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k