– ಬೀದರ್, ಮಂಗಳೂರು ಬಳಿಕ ಮೈಸೂರಲ್ಲಿ ರಾಬರಿ!
ಬೆಂಗಳೂರು: ರಾಜ್ಯದಲ್ಲಿ ಸಾಲುಸಾಲು ಬ್ಯಾಂಕ್‌ಗಳ ದರೋಡೆ ನಡೆಯುತ್ತಿವೆ. ಬೀದರ್‌ನ ಎಟಿಎಂ ಹಣ ದರೋಡೆ ಬಳಿಕ ಮೈಸೂರಿನಲ್ಲಿ (Mysuru) ಹಾಡುಹಗಲೇ ರೋಡ್ ರಾಬರಿ ನಡೆದಿದೆ.
Advertisement
Advertisement
ಈ ನಡುವೆ ಬೀದರ್‌ನ (Bidar) ದರೋಡೆಕಾರರಿಗೂ ಬಿಹಾರ ಗ್ಯಾಂಗ್‌ಗೂ ಲಿಂಕ್ ಇರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಖದೀಮರಿಗೆ ಮತ್ತಿಬ್ಬರು ಸಹಾಯ ಮಾಡಿದ್ದು, ಸಿಸಿಟಿವಿ ವಿಡಿಯೋದಲ್ಲಿ ಪತ್ತೆಯಾಗಿದೆ. ಮತ್ತೊಂದು ಕಡೆ ಮೈಸೂರಲ್ಲಿ ರೋಡ್ ರಾಬರಿ ಸರದಿ ಶುರುವಾಗಿದೆ. ಅತ್ತ ಮಂಡ್ಯದಲ್ಲಿ ಪೊಲೀಸರು ಅಲರ್ಟ್ ಆಗಿ, ಕಳ್ಳಕಾಕರ ಮೇಲೆ ಕಣ್ಣಿಟ್ಟಿದ್ದಾರೆ.ಇದನ್ನೂ ಓದಿ: ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶ – ರಾಹುಲ್ ಗಾಂಧಿ ಗೈರು
Advertisement
Advertisement
ಬೀದರ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ದಿನ ಕಳೆದರೂ ಇನ್ನೂ ದರೋಡೆಕೋರರ ಬಂಧನವಾಗದೆ ಇರೋದು ಪೊಲೀಸ್ ಇಲಾಖೆಗೆ ಭಾರಿ ತಲೆನೋವಾಗಿದೆ. ಉತ್ತರ ಭಾರತಕ್ಕೆ ಎಸ್ಕೇಪ್ ಆಗಿರುವ ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ಅಫಜಲಗಂಜ್‌ನಲ್ಲಿ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆದ ಹಂತಕರು ಅಲ್ಲಿಂದ ಬೇರೆಡೆ ತೆರಳಿದ್ದಾರೆ. ಇದಕ್ಕೆ ಇನ್ನಿಬ್ಬರು ದಾರಿ ತೋರಿಸಿರುವ ಎಕ್ಸಕ್ಲೂಸಿವ್ ವಿಡಿಯೋ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಅಷ್ಟೇ ಅಲ್ಲದೆ ಬಿಹಾರ ಮೂಲದ ಅಮಿತ್ ಸ್ಟಾರ್ ಗ್ಯಾಂಗ್ ಕೈವಾಡ ಪತ್ತೆಯಾಗಿದೆ.
ದರೋಡೆ ಮಾಡಿ ಹೋಗುತ್ತಿದ್ದ ಕೆಲವೇ ನಿಮಿಷದಲ್ಲಿ ಬೈಕ್ ಮೇಲಿದ್ದ ಹಣದ ಟ್ರಂಕ್ ಮಾಯವಾಗಿ ಹಣದ ಬ್ಯಾಗ್ ಕೂಡ ಬದಲಾಗುತ್ತದೆ. ಹ್ಯಾಂಗಿಂಗ್ ಬ್ಯಾಗ್‌ನಲ್ಲಿದ್ದ ಹಣ ಟ್ರ್ಯಾಲಿಗೆ ಶಿಫ್ಟ್ ಮಾಡಿಕೊಳ್ಳುತ್ತಾರೆ. ಬಳಿಕ ಬಟ್ಟೆ ಬದಲಾಯಿಸಿ ಎಸ್ಕೇಪ್ ಆಗಿದ್ದಾರೆ. ಹೈದ್ರಾಬಾದ್‌ನಿಂದ ಎಸ್ಕೇಪ್ ಆಗುವ ಸಂಚು ವಿಫಲದ ಬಳಿಕ ಪ್ಲ್ಯಾನ್ `ಬಿ’ ಮೊರೆ ಹೋಗಿದ್ದು, ಈಗ ಪೊಲೀಸ್ ತನಿಖೆಯಿಂದ ಬಹಿರಂಗವಾಗುತ್ತಿದೆ. ಈಗಾಗಲೇ ಎಸ್‌ಪಿ ಪ್ರದೀಪ್ ಗುಂಟಿ ಸಿಡಿಆರ್, ಕ್ರೈಮ್ ಸೇರಿದಂತೆ 8 ವಿಶೇಷ ತಂಡ ರಚಿಸಿದ್ದು, ಉತ್ತರ ಭಾರತದ ಕಡೆ 4 ತಂಡ ತೆರಳಿ ಆರೋಪಿಗಳಿಗಾಗಿ ತಲಾಶ್ ಮಾಡುತ್ತಿದ್ದಾರೆ. ಯುಪಿ, ಬಿಹಾರ, ಛತ್ತಿಸ್‌ಘಡ್ ರಾಜ್ಯದಲ್ಲೂ ಆರೋಪಿಗಳಿಗಾಗಿ ತಲಾಶ್ ನಡೆಯುತ್ತಿದ್ದು, ಉತ್ತರಪ್ರದೇಶದ ವಾರಣಾಸಿಯಲ್ಲಿ ಬೀದರ್ ಪೊಲೀಸರು ಬೀಡು ಬಿಟ್ಟಿದ್ದಾರೆ.
ಇನ್ನೂ ಎಟಿಎಂ ರಾಬರಿ ಬಳಿಕ ಮೈಸೂರು ಸೋಮವಾರ ರೋಡ್ ರಾಬರಿ ನಡೆದಿದೆ. ಮುಸುಕಾಧಾರಿಗಳು ಕಾರು ಅಡ್ಡಗಟ್ಟಿ ರಾಬರಿ ನಡೆಸಿದ್ದಾರೆ. ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಈ ಘಟನೆ ನಡೆದಿದೆ. ಎರಡು ಕಾರಿನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಇನ್ನೋವಾ ಕಾರ್ ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿ ಯಾಗಿದ್ದಾರೆ. ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರು ಬಳಿಸಿದ ಮತ್ತೊಂದು ಕಾರು ಗೋಪಾಲಪುರ ಅರಣ್ಯದೊಳಗೆ ಪತ್ತೆಯಾಗಿದೆ. ಕಾರನ್ನ ಅರಣ್ಯದಲ್ಲಿ ಬಿಟ್ಟು ಮತ್ತೊಂದು ಕಾರಿನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಜೊತೆಗೆ ಕಾರಿಗೆ ಎರೆಡೆರೆಡು ನಂಬರ್ ಬಳಸಿರೋದು ಪತ್ತೆಯಾಗಿದೆ. ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಭದ್ರತಾ ಪಾಠ ಮಾಡಿರುವ ಮಂಡ್ಯ ಪೊಲೀಸರು ಸೂಕ್ತ ಮುನ್ನೆಚ್ಚರಿಕೆಗೆ ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎಲ್ಲೆಲ್ಲಿ ಬ್ಯಾಂಕ್ ಕಚೇರಿಗಳಿವೆ, ಎಟಿಎಂಗಳ ಭದ್ರತೆ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇನ್ನೊಂದೆಡೆ ಬಾಗಲಕೋಟೆಯಲ್ಲೂ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿದ್ದು, ಬಂಧೂಕುಧಾರಿ ಪೊಲೀಸರ ಸಮ್ಮುಖದಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ. ಸ್ವಲ್ಪ ವಾಹನಗಳ ದಾಖಲಾತಿ ಹೆಚ್ಚು ಕಮ್ಮಿಯಾದರೂ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಎಲ್ಲಾ ಕಡೆ ಸಿಸಿ ಕ್ಯಾಮೆರಾ ಹದ್ದಿನ ಕಣ್ಗಾವಲು ಇಟ್ಟಿದ್ದು, ಎಸ್‌ಪಿ ಕಚೇರಿಯಲ್ಲಿ ಮಾನಿಟರಿಂಗ್ ಮಾಡಲಾಗುತ್ತಿದೆ.ಇದನ್ನೂ ಓದಿ: 2004ರ ಭ್ರಷ್ಟಾಚಾರ ಕೇಸ್ – ಗುಜರಾತ್‌ನ ಮಾಜಿ ಐಎಎಸ್ ಅಧಿಕಾರಿಗೆ 5 ವರ್ಷ ಜೈಲು
ಒಟ್ಟಾರೆ ರಾಜ್ಯದಲ್ಲಿ ಸರಣಿ ದರೋಡೆ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಕಾರ್ಯೋನ್ಮುಖವಾಗಬೇಕಿದೆ.