ಹಾಸನ: ಕಳೆದ ಎರಡು ದಶಕಗಳಿಂದ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಕಾಡಾನೆ (Wild Elephant) ಗಳ ಉಪಟಳ ಮಿತಿಮೀರಿದೆ. ಆಹಾರ ಅರಸಿ ಕಾಡಾನೆಗಳು ಗ್ರಾಮದೊಳಗೆ ಎಂಟ್ರಿ ಕೊಡುತ್ತಿದ್ದು, ಮನುಷ್ಯರ ಮೇಲೆ ದಾಳಿ ನಿರಂತರ ದಾಳಿ ಮಾಡುತ್ತಿವೆ.
Advertisement
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಮನು ಎಂಬವರು ಆನೆ ತುಳಿತಕ್ಕೆ ಸಾವನ್ನಪ್ಪಿದ್ರು. ಇದರಿಂದ ಸಿಡಿದೆದ್ದ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಶವ ಮೇಲೆತ್ತಲು ಬಿಡದೆ ಪ್ರತಿಭಟನೆ ನಡೆಸಿದ್ರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಆಗ್ರಹಿಸಿದ್ರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ನಾಲ್ವರು ಆರೋಪಿಗಳ ಸುಳಿವು ನೀಡಿದವರಿಗೆ ಭಾರೀ ಬಹುಮಾನ ಘೋಷಣೆ
Advertisement
Advertisement
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಈ ವೇಳೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ (K Gopalaiah) ಪ್ರತಿಭಟನಾಕಾರರ ಮನವೊಲಿಸಿದ್ರು. ಮೃತನ ಕುಟುಂಬಕ್ಕೆ ಹದಿನೈದು ಲಕ್ಷ ಪರಿಹಾರ ಹಾಗೂ ಉದ್ಯೋಗದ ಭರವಸೆ ನೀಡಿದ್ರು. ಬಳಿಕ ಪ್ರತಿಭಟನೆ ಕೈಬಿಡಲಾಯ್ತು.
Advertisement
ಇದುವರೆಗೂ ಕಾಡಾನೆ ದಾಳಿಯಿಂದ ಹಾಸನ ಜಿಲ್ಲೆಯಲ್ಲಿ 76 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಅಷ್ಟೋ ಇಷ್ಟೋ ಪರಿಹಾರ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಹೊರತು ಇದುವರೆಗೂ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ. 2014ರಲ್ಲಿ 22 ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಆದರೆ ಇದೀಗ ಕಾಡಾನೆಗಳ ಸಂಖ್ಯೆ ನೂರು ತಲುಪಿದೆ. ಆಹಾರ ಅರಸಿ ಕಾಡಾನೆಗಳು ಗ್ರಾಮದೊಳಗೆ ಎಂಟ್ರಿ ಕೊಡುತ್ತಿದ್ದು ಮನುಷ್ಯರ ಮೇಲೆ ದಾಳಿ ಮಾಡ್ತಿದೆ.