ಚಿತ್ರದುರ್ಗ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟಿಆರ್‌ಎಐ) ಮತ್ತು ಮುಂಬೈ (Mumbai) ಪೊಲೀಸರೆಂದು ಹೇಳಿ ಕರೆ ಮಾಡಿ ಸೈಬರ್ ವಂಚಕರು ( Cyber Fraudsters )ಹಿರಿಯ ವೈದ್ಯರೊಬ್ಬರಿಗೆ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಶ್ರೀನಿವಾಸ್ ಶೆಟ್ಟಿ ವಂಚನೆಗೊಳಗಾದ ವೈದ್ಯ. ವಂಚಕರು ವಾಟ್ಸಪ್ ಕಾಲ್ ಮತ್ತು ನಾರ್ಮಲ್ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ವೈದ್ಯರ ಖಾತೆಯಿಂದ 1.27 ಕೋಟಿ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ : ಬಿಜೆಪಿಯಿಂದ 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಚಿತ್ರದುರ್ಗದ (Chithradurga) ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ. ಇದನ್ನೂ ಓದಿ: ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತು