ತುಮಕೂರು: ಕನಕದಾಸರ ಜಯಂತಿ ಮುಗಿಸಿ ವಾಪಸ್ ಆಗುತ್ತಿದ್ದ ಶಿಕ್ಷಕಿಯ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ಸರಗಳ್ಳತನ ಮಾಡಿದ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು (Tiptur) ತಾಲೂಕಿನ ಮರಿಸಿದ್ದಯ್ಯನ ಪಾಳ್ಯದ ಬಳಿ ನಡೆದಿದೆ.
ಮರಿಸಿದ್ದಯ್ಯನ ಪಾಳ್ಯದ ಪ್ರಾಥಮಿಕ ಶಾಲೆ ಶಿಕ್ಷಕಿ (Teacher) ರೇಖಾ ಶಾಲೆಯಲ್ಲಿ ಕನಕದಾಸರ ಜಯಂತಿ ಮುಗಿಸಿ ಹಿಂದಿರುಗುವ ವೇಳೆ ಆಕೆಯ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಸರ (Chain) ಎಗರಿಸಿದ್ದಾರೆ. ಬುಲೆಟ್‌ನಲ್ಲಿ ಬಂದ ಕಳ್ಳರು 40 ಹಾಗೂ 20 ಗ್ರಾಂ ತೂಕದ ಎರಡು ಸರ ಕಸಿದು ಪರಾರಿಯಾಗಿದ್ದಾರೆ. ಈ ವೇಳೆ ಬುಲೆಟ್ ವಿಡಿಯೋ ಮಾಡಿಕೊಳ್ಳಲು ಶಿಕ್ಷಕಿ ಮುಂದಾಗಿದ್ದಾರೆ. ಇದನ್ನು ಅರಿತ ಕಳ್ಳರು ಆಕೆಯ ಮೊಬೈಲ್ ಕೂಡ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿ.9 ರಿಂದ ಚಳಿಗಾಲದ ಅಧಿವೇಶನ
ಗಾಯಗೊಂಡಿದ್ದ ಶಿಕ್ಷಕಿ ರೇಖಾಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನಾನೇನು ಡ್ಯಾನ್ಸ್ ಮಾಡ್ತೀದ್ದೀನಾ? – ಮಾಧ್ಯಮಗಳ ಮುಂದೆ ಮುಡಾ ಮಾಜಿ ಆಯುಕ್ತನ ಪೌರುಷ