-ಗೋವಿಂದರಾಜ ನಗರ, ತಲಘಟ್ಟಪುರ, ಸಿಸಿಬಿ ಸೇರಿದಂತೆ ಹಲವು ಕಡೆ FIR ದಾಖಲು
ಬೆಂಗಳೂರು: ನಗರದ ಪ್ರತಿಷ್ಠಿತ ಪೆರಿಮೀಟರ್ ಸಲೂನ್ ಮಾಲೀಕರಿಂದ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಹೌದು, ಬೆಂಗಳೂರಿನ (Bengaluru) ಪ್ರತಿಷ್ಠಿತ ಪೆರಿಮೀಟರ್ ಸಲೂನ್ (Perimeter) ರಾಜ್ಯಾದ್ಯಂತ ಹಲವು ಬ್ರ್ಯಾಂಚ್‌ಗಳನ್ನು ಹೊಂದಿದೆ. ಈ ಸಲೂನ್‌ಗೆ ಬರುವ ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಅವರಿಂದ ಕೋಟಿ ಕೋಟಿ ವಂಚಿಸುತ್ತಿದ್ದಾರೆ. ನಮ್ಮ ಬಳಿಕ ಹೂಡಿಕೆ ಮಾಡಿ, ಇದರಿಂದ ನೀವು ಲಕ್ಷಾಂತರ ರೂ. ಲಾಭ ಮಾಡಬಹುದು ಎಂದು ನಂಬಿಸುತ್ತಾರೆ ಎಂದು ಆರೋಪಿಸಲಾಗಿದೆ.ಇದನ್ನೂ ಓದಿ: ರಾಜಕಾರಣಿಗಳೊಂದಿಗೆ ಮಲಗಲು ಒಪ್ಪದಿದ್ದಕ್ಕೆ 6 ಬಾರಿ ತಲಾಖ್ – ಸೈಕೋ ಪತಿ ವರ್ತನೆಗೆ ಬೇಸತ್ತು ಪತ್ನಿ ದೂರು
ಇದನ್ನು ನಂಬಿದ ಮಹಿಳೆಯರು ಹಣದಾಸೆಗೆ ಬಿದ್ದು ತಲಾ 10 ಲಕ್ಷದಿಂದ 50 ಲಕ್ಷ ರೂ.ವರೆಗೆ ಹೂಡಿಕೆ ಮಾಡಿದ್ದಾರೆ. ಆದರೆ ಸ್ವಲ್ಪ ಸಮಯದ ಬಳಿಕ ಯಾವುದೇ ಲಾಭ ಕೊಡದೇ ಮಾಲೀಕರಾದ ರಕ್ಷಾ ಹರಿಕಾಲ್ ಸಲ್ವ, ಸುನೀತ್ ಮೆಹ್ತಾ ಹಾಗೂ ತಿವಾರಿ ಎಂಬುವವರು ವಂಚಿಸಿದ್ದಾರೆ. ಸದ್ಯ ಈ ಕುರಿತು ಗೋವಿಂದರಾಜ ನಗರ, ತಲಘಟ್ಟಪುರ, ಸಿಸಿಬಿ ಸೇರಿದಂತೆ ಹಲವು ಕಡೆ ಎಫ್‌ಐಆರ್ ದಾಖಲಾಗಿದೆ.
ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ ಸುಮಾರು 50 ಕೋಟಿಯಷ್ಟು ಹಣ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಎಫ್‌ಐಆರ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ