ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಅವರ 13ನೇ ದಿನದ ಕರ್ಮಗಳನ್ನು ರಸ್ತೆ ಮಧ್ಯೆದಲ್ಲೇ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ ಅಯೋಧ್ಯೆಯ (Ayodhya) ತಪಸ್ವಿ ಜಗದ್ಗುರು ಪರಮಹಂಸ ಆಚಾರ್ಯರು (Paramahansa Acharya). ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಕೇಸರಿ ಬಿಕಿನಿ ಹಾಕಿಸಿದ್ದಲ್ಲದೇ, ಹಿಂದೂಗಳಿಗೆ ಅವಮಾನ ಮಾಡುವಂತಹ ಸಾಲುಗಳನ್ನು ಈ ಹಾಡಿನಲ್ಲಿ ಬಳಸಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದೂ ಸಂಪ್ರದಾಯದಂತೆ ಶಾರುಖ್ ತಿಥಿ ಮಾಡಲಾಗಿದೆ.
Advertisement
ಈ ಹಿಂದೆ ಪಠಾಣ್ (Pathan) ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಇದೇ ಅಯೋಧ್ಯೆಯ ತಪಸ್ವಿ ಶಿಬಿರದ ಜಗದ್ಗುರುಗಳು ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಒತ್ತಡ ಹೇರಿದ್ದರು. ಇಂದು ಮಡಿಕೆಗೆ ಶಾರುಖ್ ಖಾನ್ ಫೋಟೋ ಅಂಟಿಸಿ, ಅದನ್ನು ರಸ್ತೆಯಲ್ಲೇ ಇಟ್ಟು 13 ದಿನದ ಕರ್ಮಗಳನ್ನು ಮಾಡಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದ್ದಾರೆ. ಸಂಸ್ಕಾರದ ವೇಳೆ ಹಿಂದೂ ಮಂತ್ರಗಳನ್ನೂ ಪಠಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ
Advertisement
Advertisement
ಅಯೋಧ್ಯೆ ಸಾಧುಗಳು ಈ ಕ್ರಿಯೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡೆಯ ಬಗ್ಗೆ ಪರ ವಿರೋಧದ ಚರ್ಚೆಗಳು ಕೂಡ ಶುರುವಾಗಿದೆ. ಜೀವಂತವಾಗಿರುವಾಗ ತಿಥಿ ಮಾಡುವಂತಹ ಸಂಪ್ರದಾಯ ಹಿಂದೂಗಳಲ್ಲಿ ಇಲ್ಲ. ಹೀಗಾಗಿ ಗೊತ್ತಿರುವ ಸಾಧುಗಳೇ ಹೀಗೆ ಮಾಡಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ನಮ್ಮ ಪಾಲಿಗೆ ಶಾರುಖ್ ಸತ್ತಿದ್ದಾನೆ ಎಂದು ಇನ್ನೂ ಕೆಲವರು ಬರೆದುಕೊಂಡಿದ್ದಾರೆ.