– ಪ್ರತಾಪ್ ಸಿಂಹ ಹಲವಾರು ಕೆಲಸ ಮಾಡ್ತಿದ್ರು
ಮಡಿಕೇರಿ: ಜನಸಾಮಾನ್ಯರಿಗೆ ಯದುವೀರ್ (Yaduveer Wadiyar) ಸಿಗ್ತಾರಾ? ರಾಜವಂಶದಿಂದ ಬಂದವರು ಜನರ ಕೈಗೆ ಸಿಗ್ತಾರೆ ಎಂಬ ಪ್ರಶ್ನೆಗೆ ಯಾರದರೂ ತಮ್ಮ ಎದೆ ಮುಟ್ಟಿಕೊಂಡು ಹೌದು ಎಂಬ ಉತ್ತರ ಸಿಕ್ಕರೆ ಮತ ಹಾಕಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ (A.S Ponnanna) ಹೇಳಿದ್ದಾರೆ.
Advertisement
ಕೊಡಗಿನ ವಿರಾಜಪೇಟೆಯಲ್ಲಿ ಮಾತಾನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಆಯ್ಕೆಯಾಗಿ ಬಂದ ವ್ಯಕ್ತಿ ಪ್ರತಾಪ್ ಸಿಂಹ (Pratap Simha) ಹಲವಾರು ಕೆಲಸ ಮಾಡ್ತಾ ಇದ್ದರು. ಅವರಿಗೆ ಕಾರಣವೇ ನೀಡದೇ ವಿನಾಕಾರಣ ಎತ್ತಿ ದೂರ ಹಾಕಿದ್ದಾರೆ. ಆಸಕ್ತಿ ಇಲ್ಲದೇ ಇದ್ದವರನ್ನು ರಾಜಕೀಯಕ್ಕೆ ಕರೆತರುವ ಕೆಲಸ ಮಾಡಿದ್ದಾರೆ ಎಂದು ಸಂಸದರ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!
Advertisement
Advertisement
ಸ್ಥಳೀಯವಾಗಿ 24/7 ಜನರೊಂದಿಗೆ ಇದ್ದರೂ ಅವರ ನಿರೀಕ್ಷೆಗಳನ್ನು ಮುಟ್ಟಲು ಸಾದ್ಯವಾಗುತ್ತಿಲ್ಲ. ಜನರು ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು ಎಂದು ಬಯಸುತ್ತಾರೆ. ಆ ನಿರೀಕ್ಷೆಯನ್ನು ಈಡೇರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬುದು ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ. ಈ ಕೆಲಸ ರಾಜಮನೆತನದಿಂದ ಬಂದವರ ಬಳಿ ಆಗುತ್ತಾ? ಈ ರೀತಿ ಜನ ಆಲೋಚಿಸುತ್ತಿದ್ದಾರೆ. ಯಾರು ಜನಸಾಮಾನ್ಯರ ಕೈಗೆ ಸಿಗ್ತಾರೆ, ಯಾರು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ಈಗ ಅವರ ಬಾಯಿಯಲ್ಲೇ ಬರುತ್ತಿದೆ. ಏಸಿ ರೂಮ್‍ನಲ್ಲಿ ಇದ್ದವರು ಪೊಲೀಸ್ ಠಾಣೆಗೆ ಬರುತ್ತಾರಾ? ಜನರಿಗೆ ಸಮಸ್ಯೆಯಾಗುವಾಗ ಅವರು ಬರುತ್ತಾರಾ? ಎಂದು, ಬಿಜೆಪಿ ಅಭ್ಯರ್ಥಿ ಯದುವೀರ್ ಹೆಸರು ಹೇಳದೆ ಟೀಕಿಸಿದ್ದಾರೆ.
Advertisement
ರಾಷ್ಟ್ರೀಯ ನಾಯಕರು ಅವರನ್ನು ಆಯ್ಕೆ ಮಾಡಿಕೊಂಡಿರುವುದೇ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆಯನ್ನು ಕೇಳಬೇಕು. ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಪ್ರಶ್ನೆ ಇಷ್ಟೇ, ಜನಸಾಮಾನ್ಯರಿಗೆ ಯದುವೀರ್ ಸಿಗ್ತಾರಾ? ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಇದನ್ನು ಕೆಲ ತಿಂಗಳ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ. ಈಗ ರಾಜಕೀಯ ಆಸಕ್ತಿ ಇಲ್ಲದೇ ಇರುವವರನ್ನು ಜನಸಾಮಾನ್ಯರ ಮೇಲೆ ಯಾಕೆ ಹೇರುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ