– ಯಡಿಯೂರಪ್ಪಗೆ ದ್ರೋಹ ಮಾಡಿದ್ರೆ ಶಾಪ ತಟ್ಟುತ್ತೆ ಎಂದ ಬಿಜೆಪಿ ಮುಖಂಡ
ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹುಲಿ ಅಲ್ಲ ಇಲಿ. ಅವರೊಬ್ಬ ಪೇಪರ್ ಹುಲಿ ಎಂದು ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ (A S Patil Nadahalli) ವಾಗ್ದಾಳಿ ನಡೆಸಿದರು.
ಯತ್ನಾಳ್‌ರಿಂದ ಹೊಸ ಪಕ್ಷ ಸ್ಥಾಪನೆ ಘೋಷಣೆ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಮಾಧ್ಯಮಗಳು ಸೃಷ್ಟಿದ ಹುಲಿ. ಗ್ರೌಂಡ್‌ನಲ್ಲಿ ಅದು ಹುಲಿ ಅಲ್ಲ ಇಲಿ. ಯತ್ನಾಳ್‌ರನ್ನ ಉಚ್ಚಾಟನೆ ಮಾಡಿದಾಗ 2-3 ಸಾವಿರ ಜನ ಸೇರಿ ಪ್ರತಿಭಟನೆ ಮಾಡಿಲ್ಲ. ಇಬ್ಬರು ಮಾತ್ರ ರಾಜೀನಾಮೆ ಕೊಟ್ಟಿದ್ದರು. ಬೀದಿಗೆ ಇಳಿದು ಪ್ರತಿಭಟನೆ ಮಾಡಿಲ್ಲ. ಹಿಂದು ಹುಲಿ ಎಂದು ಹೇಳಿಕೊಳ್ಳುತ್ತಾರೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಈಗ ಸ್ವತಃ ಯತ್ನಾಳ್ ಅವರೇ ನಾನು ಹುಲಿನಾ, ಇಲಿನಾ ಅಂತ ನೋಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: L2: Empuraan ವಿವಾದ- ನನ್ನ ಮಗನನ್ನ ಬಲಿಪಶುವನ್ನಾಗಿ ಮಾಡಲಾಗಿದೆ: ಪೃಥ್ವಿರಾಜ್ ಸುಕುಮಾರನ್ ತಾಯಿ
ಸ್ವಂತ ಕ್ಷೇತ್ರದಲ್ಲಿ ಯತ್ನಾಳ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ (BJP) ಲೀಡ್ ಕೊಡೋದಕ್ಕೆ ಆಗಲಿಲ್ಲ. ಇಂತಹವರು ಹೊಸ ಪಕ್ಷ ಕಟ್ಟಿ ಸಾಧನೆ ಮಾಡಲು ಸಾಧ್ಯನಾ? ಹೊಸ ವರ್ಷ ಪ್ರಾರಂಭ ಆಗಿದೆ. ಹೊಸ ಯೋಜನೆ ಬಗ್ಗೆ ಮಾತಾಡೋಣ. ವಿಜಯೇಂದ್ರ ನೇತೃತ್ವದಲ್ಲಿ, ಹಿಂದುತ್ವದ ಆಧಾರದಲ್ಲಿ ಪಕ್ಷ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಸಂಕಲ್ಪ ಸಾಕಾರ ಮಾಡಲು ವಿಜಯೇಂದ್ರ (Vijayendra) ನೇತೃತ್ವದಲ್ಲಿ ಕೆಲಸ ಮಾಡೋಣ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದರು.
ಮಹಾಭಾರತದಲ್ಲಿ ಶಿಶುಪಾಲ (Shishupala) ಬರುತ್ತಾನೆ. ಶಿಶುಪಾಲ, ಶ್ರೀಕೃಷ್ಣನ ಬಗ್ಗೆ ಚುಚ್ಚಿ ಚುಚ್ಚಿ ಮಾತಾಡಿದ. ಅವನ ಅಂತ್ಯ ಹೇಗಾಯ್ತು. ಕಲಿಯುಗದ ಶಿಶುಪಾಲ ಯತ್ನಾಳ್. ಶಿಶುಪಾಲನಿಗೆ ಆದ ಶಿಕ್ಷೆಯನ್ನೇ ಜನರು ಯತ್ನಾಳ್‌ಗೆ ಕೊಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೀರತ್ ಮಾದರಿ ಪೀಸ್ ಪೀಸ್ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!
2008ರಲ್ಲಿ ಅವರ ವಿರುದ್ಧ ನಾನೇ ಚುನಾವಣೆಗೆ ನಿಂತಿದ್ದೆ. ವಿದ್ಯಾರ್ಥಿ ಪರಿಷತ್, ಸಂಘದ ಪಾಠ ಕಲಿತು ಬಂದವನು ನಾನು. ಯತ್ನಾಳ್‌ನನ್ನು ಬಿಟ್ಟರೆ ಯಾರು ಇಲ್ಲ. ನಾನೇ ಇಲ್ಲಿ ಎಲ್ಲಾ ಅಂತ ಮಾತಾಡ್ತಿದ್ದರು. ಅವತ್ತು ನನ್ನ ವಿರುದ್ಧ ಯತ್ನಾಳ್ ಸೋತಿದ್ದರು ಎಂದರು.
2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರದಲ್ಲಿ (Vijayapura) ನಾವು 7 ಜನ ಸೋತಿದ್ದೆವು. ಯತ್ನಾಳ್ ಅವರೊಬ್ಬರು ಗೆದ್ದಿದ್ದರು. ಎಂಪಿ ಚುನಾವಣೆಗೆ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಯತ್ನಾಳ್ ಆ ಸಭೆಗೆ ಬಂದಿರಲಿಲ್ಲ. ಸೋತವರು ಚುನಾವಣೆ ಗೆಲ್ಲಿಸುತ್ತೇವೆ ಅಂತ ಹೇಳಿದ್ದೆವು ಅದರಂತೆ ಗೆದ್ದೆವು. ವಿಜಯಪುರದಲ್ಲಿ ಲೀಡ್ ಕೊಟ್ಟು, ಹಿಂದೂ ಹುಲಿ ಕ್ಷೇತ್ರದಲ್ಲಿ 10 ಸಾವಿರ ಲೀಡ್ ಕಾಂಗ್ರೆಸ್‌ಗೆ ಹೋಯಿತು. ಯತ್ನಾಳ್ ಹುಲಿನೂ ಅಲ್ಲ, ಇಲಿನೂ ಅಲ್ಲ. ಈಗ ಅದು ಬಿಲ ಸೇರಿಕೊಂಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗ್ಳೂರು ಸೇರಿದಂತೆ ದೇಶದ ವಿವಿಧೆಡೆ ವಕ್ಫ್ ಬಿಲ್‌ಗೆ ವಿರೋಧ – ಕಪ್ಪು ಪಟ್ಟಿ ಧರಿಸಿ ರಂಜಾನ್ ಪ್ರಾರ್ಥನೆ
ಆದಷ್ಟು ಬೇಗ ವಿಜಯಪುರದಲ್ಲಿ ಸಮಾವೇಶ ಮಾಡಬೇಕು ಎಂದು ನಾವು ವಿಜಯೇಂದ್ರ ಅವರಲ್ಲಿ ಮನವಿ ಮಾಡುತ್ತೇವೆ. ಪಕ್ಷ ಕಟ್ಟುತ್ತೇವೆ, ಸ್ಥಳೀಯ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಯತ್ನಾಳ್ ಅವರ ಬೆದರಿಕೆ ತಂತ್ರ ನಡೆಯೋದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಿಜಯ್ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್ ಶುರು
ಯತ್ನಾಳ್‌ಗೆ ಯಡಿಯೂರಪ್ಪ ಅವರು ರಾಜಕೀಯ ಪುನರ್ ಜನ್ಮ ಕೊಟ್ಟಿದ್ದಾರೆ. ಯತ್ನಾಳ್ ಯಾರ ವಿರುದ್ಧ ಮಾತನಾಡಿಲ್ಲ ಹೇಳಿ. ವಾಜಪೇಯಿ, ಮೋದಿ, ಜೋಶಿ, ಜಗದೀಶ್ ಶೆಟ್ಟರ್ ಎಲ್ಲರ ಬಗ್ಗೆ ಮಾತಾಡಿದ್ದರು. ಯಡಿಯೂರಪ್ಪಗೆ (Yediyurappa) ಈ ಯತ್ನಾಳ್ ಜೀವನ ಪರ್ಯಂತ ಋಣಿಯಾಗಿರಬೇಕು. 2018ರಲ್ಲಿ ಕರೆದು ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಪುಣ್ಯಾತ್ಮ ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದರೆ ಅದರ ಶಾಪ ತಟ್ಟುತ್ತದೆ. ಶಿಶುಪಾಲನಿಗೆ ಆದ ರೀತಿಯೇ ಯತ್ನಾಳ್‌ಗೆ ರಾಜಕೀಯ ವಧೆ ಮಾಡುವ ಕೆಲಸ ಜನರು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.