ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!

Public TV
1 Min Read
Chamarajanagar

ಚಾಮರಾಜನಗರ: ಪಾಳು ಬಿದ್ದ ಶಿವನ ದೇವಾಲಯವನ್ನು ಬಾರ್ ಮಾಡಿಕೊಂಡು ಶಿವಲಿಂಗದ ಮುಂದೆ ಮದ್ಯ ಸೇವಿಸಿ ವಿಕೃತಿ ಮೆರೆದಿರುವ ಘಟನೆ ಚಾಮರಾಜನಗರದ (Chamarajanagar) ಉಪ್ಪಾರ ಬೀದಿಯಲ್ಲಿರುವ ದೇವಾಲಯದಲ್ಲಿ ನಡೆದಿದೆ.ಇದನ್ನೂ ಓದಿ: ರೈಲ್ವೆ ಪ್ರಯಾಣದ ವೇಳೆ ಮಗುವಿಗೆ ಏಕಾಏಕಿ ಅನಾರೋಗ್ಯ – ನೆರವಿಗೆ ಬಂದ ಸಮಾಜಸೇವಕ

ಈ ಪುರಾತನ ಶಿವ ದೇವಾಲಯನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು. ದೇವಾಲಯ ಹಾಳು ಬಿದ್ದಿದ್ದು, ಅದನ್ನು ಪುಂಡ ಪೋಕರಿಗಳು ತಮ್ಮ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಶಿವಲಿಂಗದ ಮುಂದೆ ಮದ್ಯವನ್ನು ಕುಡಿದು ವಿಕೃತಿ ಮೆರೆಯುತ್ತಿದ್ದಾರೆ.

ಮೀಸೆ ಚಿಗುರುವ ಮುನ್ನವೇ ಮದ್ಯದ ದಾಸರಾಗಿರುವ ಪಡ್ಡೆ ಹುಡುಗರು ಪೊಲೀಸರ ಭಯವಿಲ್ಲದೇ, ಶಿವಲಿಂಗದ ಮೇಲೆ ಮದ್ಯವಿಟ್ಟು ಸೇವಿಸುತ್ತಿದ್ದಾರೆ. ಇದೀಗ ಮಟ ಮಟ ಮದ್ಯಾಹ್ನವೇ ಕಂಠಪೂರ್ತಿ ಕುಡಿದು ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಕ್ಯಾಮರಾ ಕಂಡ ತಕ್ಷಣ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾರೆ.ಇದನ್ನೂ ಓದಿ: ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಬ್ಲಾಸ್ಟ್ – ಎಮ್ಮೆ ಸಾವು

 

Share This Article