– ನಕಲಿ ಗೋಲ್ಡ್ ಲಿಂಕ್ ಹಿಡಿದು ಕೊಲೆ ಆರೋಪಿ ಬಂಧಿಸಿದ ಪೊಲೀಸರು
ಬೆಂಗಳೂರು: ಅಕ್ಕಪಕ್ಕದವರಿಗೂ ಅನುಮಾನ ಬಾರದಂತೆ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ರೌಡಿಯ ಹತ್ಯೆ ಮಾಡಿ, ಮೃತದೇಹವನ್ನು ತಮಿಳುನಾಡಿನಲ್ಲಿ ಸುಟ್ಟುಹಾಕಿದ್ದ ಹಂತಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Advertisement
ಜ.12 ರಂದು ರೌಡಿ ಗುಣನನ್ನು ಭಾರತಿನಗರ ರೌಡಿಶೀಟರ್ ಬ್ರಿಜೇಶ್ ಮಾತನಾಡಬೇಕು ಅಂತ ತನ್ನ ಬಾಗಲೂರು ಬಳಿಯ ಅಪಾರ್ಟ್‌ಮೆಂಟ್‌ಗೆ ಕರೆಸಿದ್ದ. ಇಬ್ಬರ ನಡುವೆ ಜಗಳವಾಗಿ ಬ್ರಿಜೇಶ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮವಾಗಿ ಸ್ಥಳದಲ್ಲಿಯೇ ಗುಣ ಪ್ರಾಣ ಬಿಟ್ಟಿದ್ದ. ಪೊಲೀಸರ ಕೈಗೆ ಸಿಕ್ಕಿ ಬೀಳಬಾರದೆಂದು ಆರೋಪಿ, ಮೃತದೇಹವನ್ನು ತಮಿಳುನಾಡಿನ ನಿರ್ಜನ ಪ್ರದೇಶಕ್ಕೆ ಸಾಗಿಸಿದ್ದ.
Advertisement
ರೌಡಿಶೀಟರ್ ಬ್ರಿಜೇಶ್ ಚಿನ್ನ ತಂದು ಮಾರಲು ಗುಣನಿಗೆ ನೀಡಿದ್ದ. ಗುಣ ಚಿನ್ನವನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ 6 ಲಕ್ಷಕ್ಕೆ ಅಡವಿಟ್ಟಿದ್ದ. ನಂತರ ಬಂದ ಹಣದಲ್ಲಿ ಇಬ್ಬರು ಹಂಚಿಕೊಂಡಿದ್ದರು. ಚಿನ್ನದ ಮೇಲೆ ಇರುವ ಒಂದು ಲೇಯರ್ ಭಾಗವನ್ನು ಮಾತ್ರ ಚಿನ್ನದಿಂದ ಹಾಕಿ ನಂತರ ಉಳಿದ ಭಾಗ ಎಲ್ಲವೂ ಸಹ ನಕಲಿಯಾಗಿತ್ತು. ಮುತ್ತೂಟ್ ಫೈನಾನ್ಸ್‌ನವರು ನಕಲ್ಲಿ ಎಂದು ತಿಳಿದು ಗುಣನಿಗೆ ಫೋನ್ ಮಾಡಿ ಹಣ ವಾಪಸ್ ಕೇಳಿದ್ದಾರೆ. ಇಲ್ಲದಿದ್ದರೆ ಪೊಲೀಸ್‌ಗೆ ದೂರು ದಾಖಲಿಸುತ್ತೇವೆ ಎಂದಿದ್ದಾರೆ.
Advertisement
ಆಗ ಗುಣ, ಬ್ರಿಜೇಶ್‌ಗೆ ಹಣ ವಾಪಸ್ ನೀಡಲು ಒತ್ತಾಯಿಸಿದ್ದಾನೆ. ಇದೆಲ್ಲದರಿಂದ ಕೋಪಗೊಂಡಿದ್ದ ಬ್ರಿಜೇಶ್ ಏನಾದ್ರೂ ಒಂದು ಗತಿ ಕಾಣಿಸಬೇಕು ಅಂತ ನಿರ್ಧಾರ ಮಾಡಿದ್ದ. ಅದರಂತೆ ಜ.12 ರಂದು ಕಾಲ್ ಮಾಡಿ ಅಪಾರ್ಟ್ಮೆಂಟ್‌ಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಬ್ರಿಜೇಶ್ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಮಿಳುನಾಡಿನಲ್ಲಿ ಮೃತದೇಹ ಬಿಸಾಡಿದ್ದಾನೆ. ಬಾಗಲೂರು ಪೊಲೀಸರು ತಮಿಳುನಾಡಿಗೆ ಹೋಗಿದ್ದು, ಮೃತದೇಹ ಪತ್ತೆ ಹಚ್ಚಿ ತನಿಖೆ ಮುಂದುವರೆಸಿದ್ದಾರೆ.
Advertisement
ರೌಡಿಶೀಟರ್ ಗುಣನ ಮೇಲೆ ಸಾಕಷ್ಟು ಕ್ರಿಮಿನಲ್ ಕೇಸ್‌ಗಳು ಇದ್ದವು. ಬ್ರಿಜೇಶ್ ಮೇಲೂ ಹಲವಾರು ಕೇಸ್ ಇವೆ. ಹೀಗಾಗಿ, ಇಬ್ಬರ ಮೇಲೂ ರೌಡಿಶೀಟ್ ಓಪನ್ ಮಾಡಲಾಗಿತ್ತು. ಕೊಲೆ ಬಳಿಕ ರೌಡಿಶೀಟರ್ ಬ್ರಿಜೇಶ್ ಹಾಗೂ ಆತನ ಸಹಚರರು ಮೂರು ದಿನಗಳ ನಂತರ ಪತ್ತೆಯಾಗಿದ್ದು, ಬಾಗಲೂರು ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.