ಮಂಡ್ಯ: ಇಲ್ಲಿನ ಪಾಲಹಳ್ಳಿಯಲ್ಲಿ (Palahalli) ಮತ್ತೆ ನೆತ್ತರು ಹರಿದಿದೆ. ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್‌ಒಬ್ಬನ ಬರ್ಬರ ಹತ್ಯೆಯಾದ ಘಟನೆ ಶ್ರೀರಂಗಪಟ್ಟಣದ (Srirangapatna) ಪಾಲಹಳ್ಳಿಯಲ್ಲಿ ನಡೆದಿದೆ.
Advertisement
ಪಾಲಹಳ್ಳಿಯ ಸುಪ್ರಿತ್ ಅಲಿಯಾಸ್ ಸುಪ್ಪಿ ಹತ್ಯೆಯಾದ ವ್ಯಕ್ತಿ. ನಿನ್ನೆ ತಡರಾತ್ರಿ ತೋಟದ ಮನೆಯಲ್ಲಿ ಸುಪ್ರಿತ್ ಹಾಗೂ ಆತನ ಸ್ನೇಹಿತ ಅರ್ಜುನ್ ಇದ್ದರು. ಈ ವೇಳೆ ಆಟೋ, ಬೈಕ್‌ನಲ್ಲಿ ಬಂದ ಗುಂಪೊಂದು ಸುಪ್ಪಿ ಮೇಲೆ ಅಟ್ಯಾಕ್ ಮಾಡಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಸುಪ್ಪಿ ಸ್ನೇಹಿತ ಅರ್ಜುನ್ ಮೇಲೂ ಆ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.
Advertisement
ಈ ಹಿಂದೆ ಕುಂಟ ವಿನೋದ್ ಹತ್ಯೆಯಲ್ಲಿ ಸುಪ್ಪಿ ಭಾಗಿಯಾಗಿದ್ದ ಎನ್ನಲಾಗಿತ್ತು. ಅದೇ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸುಪ್ರಿತ್‌ನ ಮೃತದೇಹ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ಅರ್ಜುನ್‌ಗೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
2 ತಿಂಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದ ಸುಪ್ಪಿ:
ಕೊಲೆಗೆ ಯತ್ನಿಸಿದ್ದ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಸುಪ್ಪಿ, 2 ತಿಂಗಳ ಹಿಂದೆಯಷ್ಟೇ (ನ.14) ಬೇಲ್ ಮೇಲೆ ರಿಲೀಸ್ ಆಗಿದ್ದ. ತೋಟದ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಆದ್ರೆ 2023ರ ಅಕ್ಟೋಬರ್ 2ರಂದು ನಡೆದಿದ್ದ ರೌಡಿ ಶೀಟರ್ ವಿನೋದ್ ಅಲಿಯಾಸ್ ಕುಂಟ ವಿನು ಪ್ರಕರಣದಲ್ಲಿ ಸುಪ್ಪಿ ಎ10 ಆರೋಪಿಯಾಗಿದ್ದ. ಅದಾದ 6 ತಿಂಗಳಲ್ಲೇ ಬೇಲ್ ಮೇಲೆ ಬಿಡುಗಡೆಯಾಗಿದ್ದ. ಆದರೂ ಬುದ್ಧಿ ಕಲಿಯದ ಸುಪ್ಪಿ ಮತ್ತೆ ಕೊಲೆ ಯತ್ನ ಕೇಸ್‌ನಲ್ಲಿ ಭಾಗಿಯಾಗಿದ್ದ. ಹೀಗಾಗಿ ಹತ್ಯೆಯಾದ ಕುಂಟ ವಿನು ಅನ್ಣ ಪ್ರಮೋದ್ ಹಾಗೂ ಆತನ ಸಹಚರ ಕೋಳಿ ಅಭಿ ಜೈಲಿನಲ್ಲಿದ್ದುಕೊಂಡೇ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಆರೋಪಿಗಳಿಗಾಗಿ ಶ್ರೀರಂಗಪಟ್ಟಣ ಟೌನ್ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ.