ಬೆಂಗಳೂರು: ಏರಿಯಾದಲ್ಲಿ ಹವಾ ಇಟ್ಟಿರೋ ರೌಡಿಶೀಟರ್‌ಗಳ ಜೊತೆ ಸ್ನೇಹ ಬೆಳೆಸೋ ಹುಡುಗಿಯರು ಈ ಸ್ಟೋರಿ ನೋಡಲೇಬೇಕು. ನಿಮ್ಮ ನಿಸ್ವಾರ್ಥ ಸ್ನೇಹ, ಪ್ರೀತಿಯನ್ನ ರೌಡಿ ಶೀಟರ್‌ಗಳು (Rowdy Sheeter) ದುರುಪಯೋಗ ಪಡಿಸಿಕೊಳ್ಳಬಾರದು.
ಏಕೆಂದರೆ ಇಲ್ಲೊಬ್ಬ ರೌಡಿ ಶೀಟರ್ ತನ್ನ ಪರಿಚಯಸ್ಥ ಮಹಿಳೆಗೆ ಜೈಲಿನಲ್ಲಿದ್ದುಕೊಂಡೇ (Bengaluru Jail) ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ರೌಡಿ ಮನೋಜ್ ಅಲಿಯಾಸ್ ಕೆಂಚ, ಬೆತ್ತಲೆ ಫೋಟೊ ಇಟ್ಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇದನ್ನೂ ಓದಿ: ಭರತ್ ಶೆಟ್ಟಿ ವಿರುದ್ಧ ಕೇಸ್ – ಇನ್ಸ್‌ಪೆಕ್ಟರ್ ಫೋನ್‌ಕಾಲ್ ಡಿಟೇಲ್ಸ್ ಚೆಕ್ ಮಾಡಿ: ಸದನದಲ್ಲಿ ಅಶೋಕ್ ಆಗ್ರಹ
ಕಳೆದ ಆಗಸ್ಟ್‌ನಲ್ಲಿ ಆರೋಪಿ ಕೆಂಚ, ಮಹಿಳೆಯ (Women) ತಾಯಿಗೆ ವಾಟ್ಸಪ್ ಮೂಲಕ ಮಗಳ ಬೆತ್ತಲೆ ಫೋಟೋ ಕಳುಹಿಸಿ 40 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ ಮಹಿಳೆ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ರೂ., ಮತ್ತೊಬ್ಬನ ಖಾತೆಗೆ 20 ಸಾವಿರ ರೂ. ಹಣ ಹಾಕಿದ್ದರು. ಇದನ್ನೂ ಓದಿ: ಬೆಂಗಳೂರಿಗೆ ಫೆಬ್ರವರಿಯಲ್ಲೇ ಸಮಸ್ಯೆ – ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ
ನಂತರ ಕೆಂಚನ ಸ್ನೇಹಿತ ಎಂದು ಹೇಳಿಕೊಂಡು ಕಾರ್ತಿಕ್ ಎಂಬಾತ ಕರೆ ಮಾಡಿ, ನಾನು ಕೆಂಚನ ಸ್ನೇಹಿತ ನಿಮ್ಮ ಮಗಳ ಫೋಟೋ, ವೀಡಿಯೋ ನಮ್ಮ ಬಳಿ ಇದೆ, ನನಗೆ ಮನು ಹೇಳಿದ್ದಾನೆ. ನೀವು 5 ಲಕ್ಷ ಹಣ ಕೊಡದೇ ಇದ್ದರೆ, ನಿಮ್ಮ ಮಗಳ ಫೋಟೋವನ್ನು ನಿಮ್ಮ ಅಳಿಯನಿಗೆ ಕಳಿಸ್ತೇವೆ ಎಂದು ಬೆದರಿಕೆ ಹಾಕಿದ್ದಾನೆ, ಸಂತ್ರಸ್ತ ಮಹಿಳೆಗೂ ಬೆದರಿಸಿದ್ದಾನೆ. ಫೆಬ್ರವರಿ 12 ರಂದು ಮತ್ತೆ ವಾಟ್ಸಪ್, ಫೇಸ್‌ಬುಕ್ ಮೆಸೆಂಜರ್‌ಗಳಲ್ಲಿ ಕಾಲ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಹಾಗೂ ಆಕೆಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಆ್ಯಕ್ಟ್ 67, ಐಪಿಸಿ ಸೆಕ್ಷನ್ 34, 384ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಟೌನ್ ಪೊಲೀಸರು ಮತ್ತೊಬ್ಬ ಆರೋಪಿ ಕಾರ್ತಿಕ್ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಮನುವನ್ನ ಜೈಲಿನಿಂದ ಬಾಡಿವಾರೆಂಟ್ ಆಧಾರದ ಮೇಲೆ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR