ಲಂಡನ್: ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ (WTC) 2ನೇ ಆವೃತ್ತಿಯಲ್ಲಿ ಮೊದಲಬಾರಿಗೆ ಆಸ್ಟ್ರೇಲಿಯಾ (Australia) ಚಾಂಪಿಯನ್ ಪಟ್ಟಕೇರಿದೆ. ಅಗ್ರಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ (Team India) ಸತತ ಎರಡನೇ ಬಾರಿ ಫೈನಲ್‌ನಲ್ಲಿ ಸೋತು ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
Advertisement
2019ರಲ್ಲಿ ಆರಂಭಗೊಂಡ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲೇ ನ್ಯೂಜಿಲೆಂಡ್ (New Zealand) ತಂಡ ಭಾರತದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2ನೇ ಆವೃತ್ತಿಯಲ್ಲಿ ಆಸೀಸ್ ಬೌಲರ್‌ಗಳ ದಾಳಿಗೆ ತುತ್ತಾದ ಭಾರತ ಮತ್ತೊಮ್ಮೆ ಹೀನಾಯ ಸೋಲನುಭವಿಸಿ ಹೊರನಡೆದಿದೆ.
Advertisement
Advertisement
2ನೇ ಇನ್ನಿಂಗ್ಸ್‌ನಲ್ಲಿ 444 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 4ನೇ ದಿನದ ಅಂತ್ಯಕ್ಕೆ 40 ಓವರ್‌ಗಳಲ್ಲಿ 164 ರನ್ ಗಳಿಸಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ದಿನದಂದು ಭಾರತದ ಗೆಲುವಿಗೆ 280 ರನ್‌ಗಳ ಅಗತ್ಯವಿತ್ತು. ಆದರೆ ಇಂದು 22.3 ಓವರ್‌ಗಳಲ್ಲಿ 70 ರನ್ ಗಳಿಸಿದ ಭಾರತ ಅಂತಿಮವಾಗಿ 63.3 ಓವರ್‌ಗಳಲ್ಲಿ 234 ರನ್ ಗಳಿಗೆ ಸರ್ವಪತನ ಕಂಡಿತು. 209 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಸೀಸ್ ಮೊದಲ ಬಾರಿಗೆ ಚಾಂಪಿಯನ್‌ಶಿಪ್ ಜಯಿಸಿತು.
Advertisement
5ನೇ ದಿನದ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ಅಜಿಂಕ್ಯಾ ರಹಾನೆ (Ajinkya Rahane) ಅವರ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಭಾರತದ ಪತನ ಆರಂಭವಾಯಿತು. ಕೊನೆಯ ದಿನ 22.3 ಓವರ್‌ಗಲ್ಲಿ 70 ರನ್ ಗಳಿಸುವಷ್ಟರಲ್ಲೇ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ಹೀನಾಯ ಸೋಲನುಭವಿಸಿತು.
173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 4ನೇ ದಿನದಾಟದಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಉಳಿದ ಒಂದೂವರೆ ದಿನದಲ್ಲಿ ಭಾರತಕ್ಕೆ ಗೆಲ್ಲಲು 444 ರನ್‌ಗಳ ಬೃಹತ್ ಗುರಿ ನೀಡಿತು. ಭಾರತ 4ನೇ ದಿನದ ಅಂತ್ಯಕ್ಕೆ ಪ್ರಮುಖ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು.
ನಾಲ್ಕನೇ ದಿನದಾಟದಲ್ಲಿ ಭಾರತದ ಪರ ಶುಭಮನ್ ಗಿಲ್ (Shubman Gill) ಹಾಗೂ ನಾಯಕ ರೋಹಿತ್ ಶರ್ಮಾ (Rohit Sharma) ಜೋಡಿ ಮೊದಲ ವಿಕೆಟ್‌ಗೆ 41 ರನ್ ಜೊತೆಯಾಟವಾಡಿದರೆ, ರೋಹಿತ್ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ 2ನೇ ವಿಕೆಟ್‌ಗೆ 51 ರನ್ ಜೊತೆಯಾಟವಾಡಿತು. ನಂತರ ಜೊತೆಗೂಡಿದ ರಹಾನೆ ಹಾಗೂ ವಿರಾಟ್ ಕೊಹ್ಲಿ ಜೋಡಿ ಮುರಿಯದ 4ನೇ ವಿಕೆಟ್‌ಗೆ 71 ರನ್ ಜೊತೆಯಾಟ ನೀಡಿತು.
ಭಾನುವಾರ ಕೊನೆಯದಿನದ ಇನ್ನಿಂಗ್ಸ್ ಆರಂಭಿಸಿದ ಭಾರತ ಆಸೀಸ್ ಬೌಲರ್‌ಗಳ ದಾಳಿ ಎದುರಿಸುವಲ್ಲಿ ವಿಫಲವಾಯಿತು. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಜೋಡಿ ಔಟಾಗುತ್ತಿದ್ದಂತೆ ತಂಡದ ಒಂದೊಂದೆ ವಿಕೆಟ್ ಪತನಗೊಂಡಿತು. ಅಂತಿಮವಾಗಿ ಭಾರತ 234 ರನ್‌ಗಳಿಗೆ ಸರ್ವಪತನಕಂಡಿತು. ವಿರಾಟ್ ಕೊಹ್ಲಿ 49 ರನ್ (78 ಎಸೆತ, 7 ಬೌಂಡರಿ), ಅಜಿಂಕ್ಯಾ ರಹಾನೆ 46 ರನ್ (108 ಎಸೆತ, 7 ಬೌಂಡರಿ), ಶ್ರೀಕಾರ್ ಭರತ್ 23 ರನ್, ಮೊಹಮ್ಮದ್ ಶಮಿ 13 ರನ್ ಗಳಿಸಿದರು.
ಆಸೀಸ್ ಪರ ಸ್ಪಿನ್ ದಾಳಿ ನಡೆಸಿದ ನಥಾನ್ ಲಿಯಾನ್ 4 ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ 3 ವಿಕೆಟ್, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಹಾಗೂ ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಪಡೆದು ಮಿಂಚಿದರು.