ಪಾಕ್ ಹೋಟೆಲ್‌ನಲ್ಲಿ ಆಲಿಯಾ ಭಟ್: ನೆಟ್ಟಿಗರು ಗರಂ

Public TV
1 Min Read
alia bhat 3

ಗ್ರಾಹಕರನ್ನು ಸೆಳೆಯಲು ಪಾಕಿಸ್ತಾನದ ರೆಸ್ಟೋರೆಂಟ್‌ವೊಂದು ಮಾಡಿರುವ ಯೋಜನೆ ನೋಡಿ, ಗ್ರಾಹಕರು ಬೆರಗಾಗಿದ್ದಾರೆ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು, ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.

alia bhatt 3

ಇದೇ ವರ್ಷ ತೆರೆಕಂಡ ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಚಿತ್ರದ ಆಲಿಯಾ ಚಿತ್ರವನ್ನು ಹೋಟೆಲ್ ಮುಂದೆ ಅಂಟಿಸಿ ಗ್ರಾಹಕರನ್ನು ಸೆಲೆಯುವ ಯತ್ನ ಮಾಡುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಧಿಕಾ ಪಂಡಿತ್ ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವ ಸಂಭ್ರಮ

alia bhatಈ ವರ್ಷದ ಸೂಪರ್ ಹಿಟ್ ಸಿನಿಮಾ `ಗಂಗೂಬಾಯಿ ಕಾಥಿಯಾವಾಡಿ’ ಅವರ ಜೀವನಾಧಾರಿತ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಪಾಕ್‌ನ ಕರಾಚಿಯ ಹೋಟೆಲ್‌ಗೆ ದೃಶ್ಯ ಬಳಸಿಕೊಂಡಿರುವುದಲ್ಲದೇ ಹೋಟೆಲ್ ಮುಂದೆ ಪೋಸ್ಟರ್ ಸಹ ಅಂಟಿಸಿದ್ದಾರೆ. ಪುರುಷರಿಗೆ ಮಾತ್ರ 25% ರಿಯಾಯಿತಿ ಕೂಡ ಇದೆ ಎಂದು ಹೋಟೆಲ್ ಹೇಳಿಕೊಂಡಿದೆ. ಚಿತ್ರದಲ್ಲಿ ಪುರುಷರನ್ನು ಕರೆಯುವ ದೃಶ್ಯವನ್ನೇ ಉಪಯೋಗಿಕೊಂಡಿರುವುದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *