– ಸಕ್ಕರೆ ನಾಡಲ್ಲಿದೆ ಬೆಕ್ಕಿಗೊಂದು ದೇವಸ್ಥಾನ
ಮಂಡ್ಯ: ಸಾಮಾನ್ಯವಾಗಿ ಬೆಕ್ಕು ಎಂದರೆ ಮೂಗು ಮುರಿಯೋ ಮಂದಿನೇ ಜಾಸ್ತಿ. ಅದರಲ್ಲೂ ಶುಭಕಾರ್ಯಕ್ಕೆ ಹೊರಟಾಗ ಎಲ್ಲಾದರೂ ಬೆಕ್ಕು ಅಡ್ಡ ಬಂತೆಂದರೆ ಮುಗಿದೇ ಹೋಯಿತು. ಅಯ್ಯೋ ಅಪಶಕುನ ಅಂತ ಬೆಕ್ಕಿಗೆ ಶಾಪ ಹಾಕುತ್ತಾರೆ. ಆದರೆ ಇಲ್ಲೊಂದು ಗ್ರಾಮ ಇದೆ. ಇಲ್ಲಿ ಬೆಕ್ಕನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.
ಬೆಕ್ಕು ನಾಲ್ಕು ಕಾಲಿನ ಮಿಶ್ರಾಹಾರಿ ಪ್ರಾಣಿ. ಶುಭ ಸಮಾರಂಭ ಅಥವಾ ಶುಭ ಕಾರ್ಯಕ್ಕೆ ಹೋಗುವಾಗ ಈ ಜೀವಿಯ ಮುಖವನ್ನು ನೋಡಬಾರದು, ಎದುರುಗಡೆ ಓಡಾಡಿದರೆ ಆಗೋ ಕಾರ್ಯ ಆಗಲ್ಲ, ಕೆಟ್ಟದಾಗುತ್ತೆ ಎಂಬುದು ನಂಬಿಕೆ. ಬೆಕ್ಕನ್ನು ಮನೆಯಲ್ಲಿ ಸಾಕಿದರೂ ಅದಕ್ಕೆ ಅಪಶಕುನ ಪ್ರಾಣಿ ಎಂದೇ ಕುಖ್ಯಾತಿ.
Advertisement
Advertisement
Advertisement
ನಮ್ಮ ರಾಜ್ಯದಲ್ಲೇ ಬೆಕ್ಕನ್ನ ದೇವರು ಎಂದು ಪೂಜಿಸುತ್ತಾರೆ. ಅದಕ್ಕೆ ಇತರೆ ದೇವರಿಗಳಿಗಿರುವಂತೆ ದೇವಸ್ಥಾನ ಕೂಡಾ ಇದೆ. ಪ್ರತಿ ಮಂಗಳವಾರ ಬೆಕ್ಕಿನ ಮೂರ್ತಿಗೆ ವಿಶೇಷ ಪೂಜೆ ನಡೆಯುತ್ತದೆ. ಎಲ್ಲಿ ಅಂತಿರಾ ಬೇರೆಲ್ಲೂ ಅಲ್ಲ, ನಮ್ಮ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆಯಲ್ಲಿ.
Advertisement
ಮಂಗಮ್ಮ ಹೆಸರಲ್ಲಿ ಬೆಕ್ಕಿಗೆ ದೇವಸ್ಥಾನ ಕಟ್ಟಿ ಪ್ರತಿ ಮಂಗಳವಾರ ಪೂಜೆ ಮಾಡುತ್ತಾರೆ. ಈ ಊರವರು ಗ್ರಾಮಸ್ಥರು ಬೆಕ್ಕನ್ನು ಬೈಯಲ್ಲ ಹಾಗೂ ಹೊಡೆಯಲ್ಲ. ಬೆಕ್ಕು ಸತ್ತರೆ ಪೂಜೆ ಸಹಿತ ಶವಸಂಸ್ಕಾರ ಮಾಡುತ್ತಾರೆ. ಬೆಕ್ಕಳಲೆ ಅಂತಾ ಕರೆಸಿಕೊಂಡಿರುವ ಈ ಊರಲ್ಲಿ ಬೆಕ್ಕು ಶುಭಶಕುನ ಎನ್ನುವ ನಂಬಿಕೆ ಇದೆ. ಬೆಕ್ಕನ್ನು ಅಸಡ್ಡೆಯಿಂದ ಅಪಶಕುನ ಎಂದು ನೋಡೋರ ಮಧ್ಯೆ ಈ ಗ್ರಾಮದ ನಂಬಿಕೆ ವಿಶೇಷ ಅನ್ನಿಸುತ್ತದೆ.