ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ (Fight) ಯುವಕನ ಕೊಲೆಯಲ್ಲಿ ಅಂತ್ಯಕಂಡ ಘಟನೆ ಮಂಡ್ಯ (Mandya) ಜಿಲ್ಲೆ ಕೆಆರ್ ಪೇಟೆ (K.R.Pete) ತಾಲೂಕಿನ ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯೋಗೇಶ್ (32) ಕೊಲೆಯಾದ ದುರ್ದೈವಿ. ಪ್ರದೀಪ್ (31) ಹತ್ಯೆಗೈದ ದುಷ್ಕರ್ಮಿ. ಕೊಲೆಯಾದ ಯೋಗೇಶ್ ಹಾಗೂ ಆತನ ತಾಯಿ ಭಾಗ್ಯಮ್ಮ ಜೊತೆ ಪ್ರದೀಪ್ ಪದೇ ಪದೇ ಜಗಳ ಮಾಡುತ್ತಿದ್ದ. ಮಂಗಳವಾರ ಸಂಜೆಯೂ ಇದೇ ರೀತಿ ಜಗಳ ಶುರುವಾಗಿದ್ದು, ಕೋಪ ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಯೋಗೇಶ್ ತನ್ನ ಮನೆಯಲ್ಲಿದ್ದ ಚಾಕು ತಂದು ಯೋಗೇಶ್‌ಗೆ ಇರಿದಿದ್ದಾನೆ. ಇದನ್ನೂ ಓದಿ: ಬೆಲೆ ಬಾಳುವ ವಾಚ್‍ಗಾಗಿ ಯುವಕನ ಬರ್ಬರ ಹತ್ಯೆ
ಚಾಕು ಇರಿತಕ್ಕೊಳಗಾದ ಯೋಗೇಶ್‌ನನ್ನು ತಕ್ಷಣವೇ ಸ್ಥಳಿಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ. ಸದ್ಯ ಕೊಲೆಗೈದ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 2ನೇ ಮದುವೆಗೆ ಅಡ್ಡಿಯಾಗುತ್ತೆ ಎಂದು 14 ತಿಂಗಳ ಮಗುವನ್ನೇ ಕೊಂದ ಪಾಪಿ ತಂದೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]