ಬೆಂಗಳೂರು: ಕೆಲವು ದಿನಗಳ ಹಿಂದೆ ಬೈಯಪ್ಪನಹಳ್ಳಿ ಮೆಟ್ರೋ ಚಾಲಕಿಯರ ವಸತಿ ನಿಲಯಕ್ಕೆ ಸೈಕೋ ನುಗ್ಗಿದ್ದನು. ಈ ಪ್ರಕರಣ ಮಾಸುವ ಮುನ್ನವೇ ಅಂತಹದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಮೂಲದ ಧರ್ಮೇಂದ್ರ ಬಂಧಿತ ಆರೋಪಿ. ಇಂದಿರಾನಗರದ 80 ಫಿಟ್ ರಸ್ತೆಯಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ.
Advertisement
Advertisement
ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ ಧರ್ಮೇಂದ್ರ ಕುಮಾರ್ ಯಾದವ್ ಎಂಬಾತ ಪ್ರತಿನಿತ್ಯ ಬೆಳಗ್ಗೆ ಶೌಚಾಲಯಕ್ಕೆ ಹೋಗುವ ಮಹಿಳಾ ಟೆಕ್ಕಿಗಳ ಫೋಟೋ, ವಿಡಿಯೋ ತೆಗೆಯುತ್ತಿದ್ದನು. ಕೆಲಸದ ವೇಳೆ ಯಾರಿಗೂ ತಿಳಿಯದಂತೆ ಮಹಿಳಾ ಸಿಬ್ಬಂದಿ ಅಂಗಾಂಗಗಳ ವಿಡಿಯೋವನ್ನು ತನ್ನ ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿದ್ದ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಮರೆಯಲ್ಲಿ ಸಿಬ್ಬಂದಿಯ ಫೋಟೋ ತೆಗೆಯುತ್ತಿದ್ದ ವೇಳೆ ಧರ್ಮೇಂದ್ರ ಮತ್ತೊಬ್ಬ ಮಹಿಳಾ ಟೆಕ್ಕಿಯ ಕೈ ಸಿಕ್ಕಿದ್ದಾನೆ.
Advertisement
ಈ ವೇಳೆ ಧರ್ಮೇಂದ್ರನ ಮೊಬೈಲ್ ಪರೀಕ್ಷಿಸಿದಾಗ ಮಹಿಳಾ ಟೆಕ್ಕಿಗಳ ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ. ಮಹಿಳಾ ಟೆಕ್ಕಿಯೊಬ್ಬರು ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಧರ್ಮೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮಹಿಳೆಯರು ಒಳಉಡುಪುಗಳನ್ನು ಧರ್ಮೇಂದ್ರ ಕದಿಯುತ್ತಿದ್ದ ಅಂತಾ ಹೇಳಲಾಗುತ್ತಿದ್ದು, ಬೈಯಪ್ಪನಹಳ್ಳಿ ಪ್ರಕರಣಕ್ಕೂ ಇವನಿಗೂ ಸಂಬಂಧವಿದೆಯಾ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.