ನಿನ್ನನ್ನು ನಮಗೆ ಬೇಕಾದಂತೆ ಬಳಸಿಕೊಳ್ತೀವಿ, ಬದಲಾಯಿಸಿಕೊಳ್ತೀವಿ ಎಂದಿದ್ದ ನಿರ್ಮಾಪಕ: ಶ್ರುತಿ ಹರಿಹರನ್

Advertisements

ಬೆಂಗಳೂರು: ಬಾಲಿವುಡ್, ಟಾಲಿವುಡ್‍ಗಳಲ್ಲಿ ಚಿತ್ರನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿವೆ. ಆದರೆ ಈಗ ಈ ಆರೋಪ ಸ್ಯಾಂಡಲ್‍ವುಡ್ ನಲ್ಲಿ ಕೇಳಿಬಂದಿದ್ದು, ನಾನು 18ನೇ ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.

Advertisements

ಹೈದರಾಬಾದ್‍ನಲ್ಲಿ ಇಂಡಿಯಾ ಟುಡೇ ಹಮ್ಮಿಕೊಂಡಿದ್ದ ದಕ್ಷಿಣ ಸಮಾವೇಶ ಕಾರ್ಯಕ್ರಮದಲ್ಲಿ ‘ಸಿನಿಮಾ ಸೆಕ್ಸಿಸಮ್’ ವಿಚಾರದ ಬಗ್ಗೆ ಮಾತನಾಡಿದ ಶ್ರುತಿ, ನಾನು 18ನೇ ವಯಸ್ಸಿನಲ್ಲಿದ್ದಾಗ ನನ್ನ ಮೊದಲ ಸಿನಿಮಾದಲ್ಲಿಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆಗ ನಾನು ಗಾಬರಿಗೊಂಡು ಅಳಲು ಶುರು ಮಾಡಿದೆ. ನಂತರ ನನ್ನ ಡ್ಯಾನ್ಸ್ ಮಾಸ್ಟರ್ ಗೆ ಹೇಳಿದಾಗ ಅವರು ನಿನಗೆ ಇದನ್ನು ನಿಭಾಯಿಸಲು ಆಗುವುದಿಲ್ಲ ಎಂದರೆ ಬಿಟ್ಟು ಹೋಗು ಎಂದು ಹೇಳಿದ್ದರು ಎಂದು ಶ್ರುತಿ ಹೇಳಿದ್ರು.

Advertisements

ತಮಿಳಿನ ಟಾಪ್ ನಿರ್ಮಾಪಕರು ನನಗೆ ನಿಂದಿನೆ ಮಾಡಿದ್ದನ್ನು ಹೇಳಿದ್ದಕ್ಕೆ ತಮಿಳು ಚಿತ್ರರಂಗದಿಂದ ಆಫರ್ ಬರೋದು ನಿಂತುಹೋಗಿತ್ತು. ಅಷ್ಟೇ ಅಲ್ಲದೇ 4 ವರ್ಷಗಳ ಹಿಂದೆ ಸ್ಯಾಂಡಲ್‍ವುಡ್ ನಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ತಿಳಿಸಿದ್ರು.

4 ವರ್ಷಗಳ ನಂತರ ತಮಿಳಿನ ಒಬ್ಬ ಖ್ಯಾತ ನಿರ್ಮಾಪಕ ನನ್ನ ಕನ್ನಡ ಚಿತ್ರದ ಹಕ್ಕುಗಳನ್ನು ಪಡೆದು ತಮಿಳಿನಲ್ಲೂ ಕೂಡ ನಾಯಕಿಯಾಗಿ ನಟಿಸಲು ಹೇಳಿದ್ದರು. ನಾವು ಐವರು ನಿರ್ಮಾಪಕರು. ನಿನ್ನನ್ನು ನಮಗೆ ಬೇಕಾದ ಹಾಗೇ ಬಳಸಿಕೊಳ್ಳುತ್ತೇವೆ ಹಾಗೂ ಬದಲಾಯಿಸಿಕೊಳ್ಳುತ್ತೀವಿ ಎಂದು ನಿರ್ಮಾಪಕರು ಹೇಳಿದ್ದರು. ಅದಕ್ಕೆ ನಾನು ಆ ಸಮಯದಲ್ಲಿ ನನ್ನ ಜೊತೆ ಚಪ್ಪಲಿಯನ್ನು ತರುತ್ತೇನೆ ಎಂದು ಅವರಿಗೆ ಉತ್ತರ ನೀಡಿದ್ದೆ ಎಂದು ಶ್ರುತಿ ತಮಗಾದ ಅನುಭವವನ್ನು ಹೇಳಿಕೊಂಡ್ರು.

Advertisements

ಚಿತ್ರರಂಗದಲ್ಲಿ ನಾನು ಬೆಳೆಯುವುದು ಕಷ್ಟ ಎಂದು ವದಂತಿಗಳು ಹಬ್ಬಿದ್ದವು. ನಾನು ಆ ನಿರ್ಮಾಪಕರಿಗೆ ಹೇಳಿದ್ದನ್ನು ಎಲ್ಲ ನಿರ್ಮಾಪಕರಿಗೆ ಹೇಳಿದ್ದರೆ, ನನಗೆ ತಮಿಳಿನಿಂದ ಒಳ್ಳೆಯ ಸಿನಿಮಾಗಳು ಸಿಗುತ್ತಿರಲಿಲ್ಲ ಎಂದು ಶ್ರುತಿ ಹೇಳಿದ್ರು.

Advertisements
Exit mobile version