ದಾವಣಗೆರೆ: ದೇವರನ್ನು ಒಲಿಸಿಕೊಳ್ಳಲು ನಾನಾ ರೀತಿಯ ಪೂಜೆ ಮಾಡುವುದನ್ನು ನಾವು ನೋಡೇ ಇರುತ್ತೇವೆ. ಆದರೆ ಇಲ್ಲೊಬ್ಬ ಬೇಡರ ಕಣ್ಣಪ್ಪನ ರೀತಿಯಲ್ಲಿ ದೇವರ ಮೂರ್ತಿ ಮೇಲೆ ಕಾಲಿಟ್ಟು ತನ್ನ ಭಕ್ತಿಯನ್ನು ಸಮರ್ಪಿಸಿದ ಹಾಗೇ ಪೂಜಾರಿಯೊಬ್ಬ (Priest) ಆಂಜನೇಯನ (Anjaneya) ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಾವಣಗೆರೆ (Davanagere) ಜಿಲ್ಲೆಯಲ್ಲಿ ಇಂತಹ ವಿಚಿತ್ರ ಅರ್ಚಕನೋರ್ವ ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ವಿಚಿತ್ರ ಆಚರಣೆ ಮಾಡಲಾಗಿದೆ. ಇನ್ನೂ ಈ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಆರ್ಚಕನ ವರ್ತನೆಯಿಂದ ಶ್ರೀರಾಮ ದೂತನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ – ರಾಮ ಜನ್ಮಭೂಮಿಯಲ್ಲಿ ಬೆಳಗಿದವು 18 ಲಕ್ಷ ದೀಪ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆ ನಡೆಸಿದ್ದಾನೆ. ಕತ್ತಿಗೆ ಗ್ರಾಮದ ಆಂಜನೇಯ ಸ್ವಾಮಿ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವ ಮಾದರಿಯಲ್ಲಿ ಅರ್ಚಕ ಮಹೇಶ್ವರಯ್ಯ ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಮೂರ್ತಿಯನ್ನು ಶುದ್ಧ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದರಿಂದ ಅರ್ಚಕ ಮಹೇಶ್ವರಯ್ಯನ ವಿರುದ್ಧ ಸ್ವಗ್ರಾಮದವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೊಲೀಸರ ಮನೆಗೇ ಕನ್ನ ಹಾಕಿದ ಕಳ್ಳರು – ಚಿನ್ನ, ಹಣ, ಪೆಟ್ರೋಲ್ ಕಳ್ಳತನ