ಬೆಂಗಳೂರು: ಗ್ರಹ ಗತಿ ಸರಿಯಿಲ್ಲ. ಬೇಡ ಎಂದರೂ ತಪ್ಪು ಮಾಡಿಸುತ್ತದೆ. ಒಂದಷ್ಟು ದಿನ ಹೊರಗೆ ಎಲ್ಲಾದರು ಹೋಗಿ ಬನ್ನಿ ಎಂದು ಕೊಲೆ ಪ್ರಕರಣಕ್ಕೂ ಮುನ್ನ ನಟ ದರ್ಶನ್‌ಗೆ (Darshan) ಪೂಜಾರಿಯೊಬ್ಬರು ಸಲಹೆ ನೀಡಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನಕ್ಕೆ ಒಳಗಾಗುವ ಮುನ್ನ ಗುರುವಾರದಂದು, ಮನಸ್ಸಲ್ಲಿ ತಳಮಳ ಗೊಂದಲ ಎಂದು ಮನೆಯಲ್ಲಿ ದೃಷ್ಟಿ ಪೂಜೆ ಮಾಡಿಸಿ ಶಕ್ತಿ ದೇವತೆ ಆರಾಧಿಸುವ ಪೂಜಾರಿಯಿಂದ ತಡೆ ಒಡೆಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಯಾರೂ ಜೈಲಿನ ಬಳಿ ಬರಬೇಡಿ: ಅಭಿಮಾನಿಗಳಿಗೆ ನಟ ದರ್ಶನ್ ಮನವಿ
ಗ್ರಹ ಗತಿ ಸರಿ ಇಲ್ಲಾ. ಬೇಡ ಎಂದರೂ ತಪ್ಪು ಮಾಡಿಸುತ್ತೆ. ಒಂದಷ್ಟು ದಿನ ಹೊರಗೆಲ್ಲಾದರು ಹೋಗಿ ಅರ್ಚಕರು ಸಲಹೆ ಕೊಟ್ಟಿದ್ದರು ಎನ್ನಲಾಗಿದೆ. ಅಂದು ನಕ್ಕು ದರ್ಶನ್ ನಮಸ್ಕರಿಸಿದ್ದರು. ಅದಾದ ಎರಡು ದಿನದಲ್ಲಿ ರೇಣುಕಾಸ್ವಾಮಿ ಹತ್ಯೆ ಆರೋಪಕ್ಕೆ ಗುರಿಯಾದರಾ ಎಂಬ ಪ್ರಶ್ನೆ ಹುಟ್ಟಿದೆ.
ಈಗ ದರ್ಶನ್ ಆರೋಪ ಮುಕ್ತರಾಗಲಿ ಎಂದು ಆಪ್ತರು ಅದೇ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಆದರೆ ಶನಿವಾರದ ಕೊಲೆಗೂ ಮೊದಲು ಒಂದಷ್ಟು ಗೊಂದಲ ಹಾಗೂ ತಳಮಳವನ್ನು ದರ್ಶನ್ ಅನುಭಬಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ